ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌಮ್ಯ ರೆಡ್ಡಿ ಮೇಲಿನ ಎಫ್ಐಆರ್ ರದ್ದುಗೊಳಿಸಿ: ರೆಡ್ಡಿ ಜನ ಸಂಘ

|
Google Oneindia Kannada News

ಬೆಂಗಳೂರು ಜನವರಿ 25: ''ಬಿಜೆಪಿ ಸರಕಾರವು ಕುತಂತ್ರ ರಾಜಕಾರಣದ ಮೂಲಕ ಮಹಿಳಾ ಶಾಸಕಿ ಸೌಮ್ಯರೆಡ್ಡಿ ಅವರ ಮೇಲೆ ಸುಳ್ಳು ದೂರನ್ನು ದಾಖಲಿಸಿ ಎಫ್‌ಐಆರ್‌ ದಾಖಲಿಸಿದೆ, ಕೂಡಲೇ ಎಫ್‌ಐಆರ್‌ ರದ್ದುಗೊಳಿಸಬೇಕು'' ಎಂದು ಕರ್ನಾಟಕ ರೆಡ್ಡಿ ಜನ ಸಂಘ ಆಗ್ರಹಿಸಿದೆ.

ರೈತರ ಹೋರಾಟದ ಸಂಧರ್ಭದಲ್ಲಿ ನಡೆದ ತಳ್ಳಾಟದಲ್ಲಿ ಮಹಿಳಾ ಶಾಸಕಿ ಸೌಮ್ಯರೆಡ್ಡಿ ಅವರು ಮತ್ತು ಇತರ ಶಾಸಕರು ಪ್ರತಿಭಟನೆಯಲ್ಲಿ ಮುನ್ನಡೆಯುತ್ತಿದ್ದಾಗ ಮಹಿಳಾ ಪೊಲೀಸ್‌ ಪೇದೆಗಳು ಹಾಗೂ ಇತರ ಪೊಲೀಸ್‌ ಸಿಬ್ಬಂದಿ ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾರೆ. ಅವರನ್ನು ನೆಲಕ್ಕೆ ತಳ್ಳಿ ಎಳೆದಾಡಿ ಅವಮಾನಿಸಿರುವ ಚಿತ್ರಗಳು ಲಭ್ಯವಿದ್ದರೂ ಸಂಬಂಧಪಟ್ಟ ಅಧಿಕಾರಿಯ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ, ಹೋರಾಟ ನಡೆದ 2 ದಿನಗಳ ನಂತರ ಎಫ್‌ಐಆರ್‌ ದಾಖಲಿಸಿ ಕುತಂತ್ರ ರಾಜಕಾರಣ ಮಾಡುವ ಮೂಲಕ ಮಹಿಳಾ ಶಾಸಕಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಸುಳ್ಳ ಎಫ್‌ಐಆರ್‌ ದಾಖಲಿಸಲಾಗಿರುವುದು ಸರಿಯಲ್ಲ ಎಂದು ಕರ್ನಾಟಕ ರೆಡ್ಡಿ ಜನ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಕೆ.ಎನ್‌ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಪುತ್ರಿ ಮೇಲೆ FIR: ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ!ಪುತ್ರಿ ಮೇಲೆ FIR: ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ!

ಈ ಸುಳ್ಳು ಎಫ್‌ಐಆರ್‌ ದಾಖಲಿಸಿರುವುದನ್ನು ಕೂಡಲೇ ರದ್ದುಗೊಳಿಸಬೇಕು ಹಾಗೂ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಘಟನೆಗೆ ಕಾರಣರಾದ ಪೊಲೀಸ್‌ ಸಿಬ್ಬಂದಿ ಮತ್ತು ಇತರರ ಮೇಲೆ ಕ್ರಮ ಜರುಗಿಸಬೇಕೆಂದು ಗೃಹ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕರ್ನಾಟಕ ರೆಡ್ಡಿ ಜನಸಂಘ ಆಗ್ರಹಿಸಿದೆ.

Recommended Video

ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ !! | Oneindia Kannada
Karnataka Reddy Jana Sangha demand to quash FIR against MLA Sowmya Reddy


ಈ ಕೂಡಲೇ ಈ ಬಗ್ಗೆ ಸೂಕ್ತ ಆದೇಶ ಹೊರಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇವೆ. ತಪ್ಪಿದಲ್ಲ ಕರ್ನಾಟಕ ರೆಡ್ಡಿ ಜನಸಂಘ ರಾಜ್ಯಾದ್ಯಂತ ತೀವ್ರತರವಾದ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಕರ್ನಾಟಕ ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಎಸ್‌. ಜಯರಾಮ್‌ ರೆಡ್ಡಿ, ಉಪಾಧ್ಯಕ್ಷರುಗಳಾದ ವಿ ವೆಂಕಟಶಿವಾರೆಡ್ಡಿ, ಎ.ಆರ್‌ ಶಿವರಾಮ್‌ ಹಾಗೂ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.

English summary
Karnataka Reddy Jana Sangha demand to quash FIR against Jayanagar MLA Sowmya Reddy. Sowmay Reddy was booked for allegedly assualting a on-duty police constable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X