ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಂಡ ವಿಧಿಸಿದರು ಕಡಿಮೆಯಾಗುತ್ತಿಲ್ಲ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಪ್ರಮಾಣ

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಇಡೀ ದೇಶದಲ್ಲಿಯೇ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವ ಪ್ರಮಾಣದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಲಾಗುತ್ತಿದ್ದರು ಕೂಡ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಪ್ರಮಾಣ ಕಡಿಮೆಯಾಗಿಲ್ಲ. ಜನ ದಂಡಕ್ಕೂ ಕೇರ್ ಮಾಡದೇ ಧಮ್ ಹೊಡೆಯುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಇಡೀ ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಗೆ ದಂಡ ವಿಧಿಸಿದವರ ಸಂಖ್ಯೆಯಲ್ಲಿ ಕರ್ನಾಟದಕ ಪಾಲು ಶೇಕಡ 35 ರಷ್ಟಿದೆ. ದಂಡ ವಿಧಿಸುವ ಕೆಲಸದಿಂದ ಸಾರ್ವಜನಿಕ ಧೂಮಪಾಮ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆದರೂ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ವಿಮಾನದಲ್ಲಿ ಧೂಮಪಾನ ಮಾಡಿದ ವ್ಯಕ್ತಿ ವಿಡಿಯೋ ವೈರಲ್!ವಿಮಾನದಲ್ಲಿ ಧೂಮಪಾನ ಮಾಡಿದ ವ್ಯಕ್ತಿ ವಿಡಿಯೋ ವೈರಲ್!

"ಕರ್ನಾಟಕದಲ್ಲಿ ಪ್ರಮುಖವಾಗಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯಿದೆ (COTPA) ಜಾರಿಯಲ್ಲಿದೆ. ಎಲ್ಲಾ ಮಧ್ಯಸ್ಥಗಾರರನ್ನು ಕಾಯಿದೆಗೆ ಅನುಗುಣವಾಗಿ ಕೆಲಸ ಮಾಡುವಂತೆ ಶಿಕ್ಷಣ ನೀಡಲು ರಾಜ್ಯದಿಂದ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಪೂರ್ವ ವಲಯ ಡಿಸಿಪಿ ಡಾ. ಶರಣಪ್ಪ ಎಸ್‌. ಡಿ ಹೇಳಿದರು. ಸಾರ್ವಜನಿಕ ಧೂಮಪಾನವನ್ನು ನಿಯಂತ್ರಿಸುವುದು ಮತ್ತು ಅದನ್ನು ಸಂಪೂರ್ಣವಾಗಿ ನಿಷೇಧಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು. ಅದಕ್ಕಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಮತ್ತಷ್ಟು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

 ಕಾನೂನು ಉಲ್ಲಂಘನೆಗೆ ಉದ್ಯಮಗಳ ಪ್ರೋತ್ಸಾಹ

ಕಾನೂನು ಉಲ್ಲಂಘನೆಗೆ ಉದ್ಯಮಗಳ ಪ್ರೋತ್ಸಾಹ

"ಸಾರ್ವಜನಿಕ ಧೂಮಪಾನಕ್ಕಾಗಿ ಸಂಗ್ರಹಿಸಲಾದ ದಂಡದ ಸಂಖ್ಯೆಯು ಅತ್ಯಧಿಕವಾಗಿದೆ, ಆದರೆ ದಂಡ ವಿಧಿಸುವ ಕ್ರಮದಿಂದ ರಾಜ್ಯದ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ" ಎಂದು ತಂಬಾಕು ಮುಕ್ತ ಕರ್ನಾಟಕದ ಒಕ್ಕೂಟದ ಎಸ್‌. ಜೆ. ಚಂದರ್ ಹೇಳಿದರು.

ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯಿದೆಯನ್ನು ಅತಿಯಾಗಿ ಉಲ್ಲಂಘನೆ ಮಾಡಲಾಗುತ್ತಿದೆ. ಜನರು ಟೀ ಸ್ಟಾಲ್‌ಗಳು, ಪಾನ್ ಅಂಗಡಿಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳ ಬಳಿ ಧೂಮಪಾನ ಮಾಡುವುದನ್ನು ಮುಂದುವರೆಸಿದ್ದಾರೆ. ತಂಬಾಕು ಉದ್ಯಮಗಳು ಟೀ ಸ್ಟಾಲ್‌ಗಳಿಗೆ ದಂಡವನ್ನು ಮರುಪಾವತಿಸುತ್ತವೆ ಎಂದು ಅವರು ಆರೋಪಿಸಿದ್ದಾರೆ. ಗ್ರಾಹಕರನ್ನು ಕಳೆದುಕೊಳ್ಳಲು ಬಯಸದ ಕಾರಣ ತಂಬಾಕು ಉದ್ಯಮಗಳೇ ಕಾನೂನು ಉಲ್ಲಂಘನೆಗೆ ಪ್ರೋತ್ಸಾಹ ನೀಡುತ್ತವೆ ಎಂದು ಅವರು ಹೇಳಿದ್ದಾರೆ.

ರಾಜು ಶ್ರೀವಾಸ್ತವ ದುರಂತ; ವ್ಯಾಯಾಮದಿಂದ ಹಾರ್ಟ್ ಅಟ್ಯಾಕ್ ಆಗುತ್ತಾ? ವಾಸ್ತವ ಏನು?ರಾಜು ಶ್ರೀವಾಸ್ತವ ದುರಂತ; ವ್ಯಾಯಾಮದಿಂದ ಹಾರ್ಟ್ ಅಟ್ಯಾಕ್ ಆಗುತ್ತಾ? ವಾಸ್ತವ ಏನು?

 ಕರ್ನಾಟಕ ಮತ್ತು ಕೇರಳ ಮುಂಚೂಣಿಯಲ್ಲಿ

ಕರ್ನಾಟಕ ಮತ್ತು ಕೇರಳ ಮುಂಚೂಣಿಯಲ್ಲಿ

ಏಪ್ರಿಲ್ 2019 ರಿಂದ ಮಾರ್ಚ್ 2022 ರವರೆಗೆ ಭಾರತದಲ್ಲಿ ಒಟ್ಟು 14.40 ಲಕ್ಷ ಜನರಿಗೆ ಸಾರ್ವಜನಿಕವಾಗಿ ಧೂಮಪಾನಕ್ಕಾಗಿ ದಂಡ ವಿಧಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ 5.07 ಲಕ್ಷ ಜನರಿಗೆ ದಂಡ ವಿಧಿಸಲಾಗಿದೆ. ದೇಶದಲ್ಲಿ ದಂಡ ವಿಧಿಸಿದ ಒಟ್ಟಾರೆ ಪ್ರಕರಣಗಳಲ್ಲಿ ಶೇಕಡಾ 35 ರಷ್ಟು ಪ್ರಕರಣ ರಾಜ್ಯದ್ದಾಗಿದೆ. ಒಟ್ಟು ದಂಡದ ಪೈಕಿ ಶೇ.50ರಷ್ಟು ಕರ್ನಾಟಕ ಮತ್ತು ಕೇರಳದಲ್ಲಿ ವಿಧಿಸಲಾಗಿದೆ.

 ದಂಡದ ಮೊತ್ತ ಹೆಚ್ಚಿಸಲು ಸಲಹೆ

ದಂಡದ ಮೊತ್ತ ಹೆಚ್ಚಿಸಲು ಸಲಹೆ

ಸಾರ್ವಜನಿಕವಾಗಿ ಧೂಮಪಾನಕ್ಕಾಗಿ ಪ್ರಸ್ತುತ 200 ರುಪಾಯಿ ದಂಡ ವಿಧಿಸಲಾಗುತ್ತಿದೆ. ಈ ಮೊತ್ತ ತುಂಬಾ ಕಡಿಮೆಯಾಯಿತು, ದಂಡದ ಮೊತ್ತವನ್ನು ಹೆಚ್ಚಿಸಿದರೆ ಸಾರ್ವಜನಿಕ ಧೂಮಪಾಮ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಚಂದರ್ ಸಲಹೆ ನೀಡಿದರು.

ಈ ಪ್ರಶ್ನೆಗೆ ಉತ್ತರ ನೀಡಿದ ಪೂರ್ವ ವಲಯ ಡಿಸಿಪಿ ಡಾ. ಶರಣಪ್ಪ, ನಗರ ವಾಸಿಗಳಿಗೆ 200 ರುಪಾಯಿ ಕಡಿಮೆ ಮೊತ್ತ ಎನಿಸಿದರು, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಇದು ದೊಡ್ಡ ಮೊತ್ತವಾಗಿದೆ. ಕಾರ್ಮಿಕ ವರ್ಗವು ತಂಬಾಕು ಸಂಬಂಧಿತ ಉತ್ಪನ್ನಗಳ ಪ್ರಮುಖ ಗ್ರಾಹಕರಾಗಿದ್ದಾರೆ ಎಂದು ಹೇಳಿದರು.

 ಸಮಸ್ಯೆ ಬಗ್ಗೆ ಸಾರ್ವಜನಿಕರ ದೂರು

ಸಮಸ್ಯೆ ಬಗ್ಗೆ ಸಾರ್ವಜನಿಕರ ದೂರು

ಇಂದಿರಾನಗರದ ನಿವಾಸಿ ಮೇಘನಾ ಮಾತನಾಡಿ, ಕಾನೂನು ಸರಿಯಾಗಿ ಜಾರಿಯಾಗಿಲ್ಲ, ದಂಡ ವಿಧಿಸಿದರೂ ಕೂಡ ಅಂಗಡಿಗಳ ಸುತ್ತಲೂ ಜನರು ಧೂಮಪಾನ ಮಾಡುವುದನ್ನು ನೋಡಿದ್ದೇನೆ ಎಂದರು.

ಸಾರ್ವಜನಿಕ ಧೂಮಪಾನ ಮಾಡುವುದರಿಂದ ತಮ್ಮ ಆರೋಗ್ಯವನ್ನುಮಾತ್ರವಲ್ಲದೆ ತಮ್ಮ ಸುತ್ತಲಿನವರ ಆರೋಗ್ಯಕ್ಕೂ ಹಾನಿಯಾಗುತ್ತದೆ ಎನ್ನುವುದನ್ನು ಧೂಮಪಾನಿಗಳು ಅರಿತುಕೊಂಡರೆ ಒಳ್ಳೆಯದು. ಎಲ್ಲವನ್ನೂ ಕಾನೂನಿನ ಮುಖಾಂತರವೇ ನಿಯಂತ್ರಿಸಲಾಗದು. ದೇಶದ ನಾಗರಿಕರಾಗಿ ನಮಗೂ ಸ್ವಲ್ಪ ಸಾಮಾಜಿಕ ಜವಾಬ್ದಾರಿಯ ಅರಿವು ಇರಬೇಕು ಎಂದು ಹೇಳಿದರು.

English summary
In Karnataka 5.07 lakh people were fined from April 2019 to March 2022, which is 35 per cent of the total 14.40 lakh people fined in India for smoking in public, according to data curated by Stats of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X