ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು : ನಾರಾಯಣ ಗೌಡ

|
Google Oneindia Kannada News

ಬೆಂಗಳೂರು, ನವೆಂಬರ್ 08 : ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ. ಕರವೇ ಕಾರ್ಯಕರ್ತರು ಇಂದು ಪೊಲೀಸರ ಮುಂದೆ ಶರಣಾಗಲಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಮಾಧ್ಯಮಗಳಿಗೆ ಈ ಕುರಿತು ಹೇಳಿಕೆ ನೀಡಿದ್ದಾರೆ. "ಕರವೇ ಕಾರ್ಯಕರ್ತರು ಜನರಿಗೆ ತೊಂದರೆಯಾಗದಿರಲು ತೀರ್ಮಾನಿಸಿದ್ದಾರೆ. ಶುಕ್ರವಾರ ಪೊಲೀಸರ ಮುಂದೆ ಶರಣಾಗಲಿದ್ದಾರೆ" ಎಂದರು.

ಕರವೇ ವಿರುದ್ಧ ಸಿಡಿದೆದ್ದ ವೈದ್ಯರುಕರವೇ ವಿರುದ್ಧ ಸಿಡಿದೆದ್ದ ವೈದ್ಯರು

"ವೈದ್ಯರ ಮುಷ್ಕರಕ್ಕೆ ಹೆದರಿ ಈ ತೀರ್ಮಾನವನ್ನು ತೆಗೆದುಕೊಳ್ಳುತ್ತಿಲ್ಲ. ಜನರಿಗೆ ತೊಂದರೆಯಾಗದಿರಲು ಈ ತೀರ್ಮಾನ ಮಾಡಿದ್ದೇವೆ" ಎಂದು ಸ್ಪಷ್ಟಪಡಿಸಿದರು. ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡೆಸುತ್ತಿರುವ ಮುಷ್ಕರ 8ನೇ ದಿನಕ್ಕೆ ಕಾಲಿಟ್ಟಿದೆ.

ವ್ಯಕ್ತಿಯ ಕಿವಿಯೊಳಗೆ ಜಿರಲೆಯ ಸಂಸಾರ: ಬೆಚ್ಚಿಬಿದ್ದ ವೈದ್ಯರುವ್ಯಕ್ತಿಯ ಕಿವಿಯೊಳಗೆ ಜಿರಲೆಯ ಸಂಸಾರ: ಬೆಚ್ಚಿಬಿದ್ದ ವೈದ್ಯರು

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ 30 ರಿಂದ 35 ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವೈದ್ಯ ಡಾ. ಎಚ್. ಎಸ್. ಸತೀಶ್ ನೀಡಿದ ದೂರಿನ ಅನ್ವಯ ವಿವಿ ಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ಆರೋಪ, ಮುಷ್ಕರ: ಕರವೇ, ವೈದ್ಯರ ನಡುವೆ ಏನಿದು ಕಿತ್ತಾಟ?ಆರೋಪ, ಮುಷ್ಕರ: ಕರವೇ, ವೈದ್ಯರ ನಡುವೆ ಏನಿದು ಕಿತ್ತಾಟ?

ಶುಕ್ರವಾರ ಓಪಿಡಿ ಬಂದ್

ಶುಕ್ರವಾರ ಓಪಿಡಿ ಬಂದ್

ಕಿರಿಯ ವೈದ್ಯರು ಕಳೆದ ಒಂದು ವಾರದಿಂದ ನಡೆಸುತ್ತಿರುವ ಪ್ರತಿಭಟನೆಗೆ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬೆಂಬಲ ನೀಡಲಿವೆ. ರಾಜ್ಯಾದ್ಯಂತ ಶುಕ್ರವಾರ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ.

ನವೆಂಬರ್ 1ರಂದು ದಾಂಧಲೆ

ನವೆಂಬರ್ 1ರಂದು ದಾಂಧಲೆ

ನವೆಂಬರ್ 1ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಿಂಟೋ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ, ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪ. ಶಸ್ತ್ರ ಚಿಕಿತ್ಸೆ ವೇಳೆ ಕಣ್ಣು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲು ನವೆಂಬರ್ 1ರ ಶುಕ್ರವಾರ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ಬಂದಿದ್ದರು. ಆಗ ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕಿರಿಯ ಮಹಿಳಾ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ.

6 ದಿನದಿಂದ ಪ್ರತಿಭಟನೆ

6 ದಿನದಿಂದ ಪ್ರತಿಭಟನೆ

ಸರ್ಕಾರಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು ಮುಚ್ಚಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದೆ. ಹಲ್ಲೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಬೇಕು ಮತ್ತು ನಮಗೆ ರಕ್ಷಣೆ ನೀಡಬೇಕು ಎಂಬುದು ವೈದ್ಯರ ಬೇಡಿಕೆಯಾಗಿದೆ.

ಎಫ್‌ಐಆರ್ ದಾಖಲು

ಎಫ್‌ಐಆರ್ ದಾಖಲು

ಕರವೇ ಕಾರ್ಯಕರ್ತರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದಾಗ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಸೇರಿದಂತೆ ಹಲವಾರು ಕಾರ್ಯಕರ್ತರು ಅಲ್ಲಿದ್ದರು. 30 ರಿಂದ 35 ಕಾರ್ಯಕರ್ತರ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

English summary
Karnataka Rakshana Vedike president Narayana Gowda said that activists will surrender before police on Friday, November 8, 2019. Doctors protesting against Karave activists demanding for the action against members of Karave who assaulted female colleagues of Minto Eye Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X