• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಮ್ ಆದ್ಮಿ ಕ್ಲಿನಿಕ್ ಉದ್ಘಾಟನೆ

|
Google Oneindia Kannada News

ಬೆಂಗಳೂರು, ನ.1 : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಅವರು ಆಮ್ ಆದ್ಮಿ ಕ್ಲಿನಿಕ್ ಉದ್ಘಾಟಿಸಿದರು.

''ಜನ ಸಾಮಾನ್ಯನ ಸೇವೆಗೆ ಸಣ್ಣ ಕೊಡುಗೆ ನೀಡುವುದರ ಮೂಲಕ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗಿದೆ. ನಮ್ಮ ನಾಡಿಗೆ, ಜನರಿಗೆ ಸಲ್ಲಿಸುವ ನಿಜವಾದ ಸೇವೆ ಇದಾಗಿದೆ'' ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.

ಶಾಂತಿನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ಆಮ್ ಆದ್ಮಿ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಹತ್ತರಲ್ಲಿ ಎಂಟು ಜನ ಖಾಯಿಲೆಯ ಬಗ್ಗೆ ಮಾತನಾಡಿ ಗುಣ ಆಗುವುದರ ಕಡೆ ಯೋಚಿಸುವುದಕ್ಕಿಂತ, ಖಾಯಿಲೆಗೆ ಖರ್ಚಾಗುವ ಹಣದ ಬಗ್ಗೆ ಯೋಚನೆ ಮಾಡುವಂತಹ ಪರಿಸ್ಥಿತಿ ನಮ್ಮ ಕಣ್ಣೆದುರಿಗಿದೆ. ಇದು ಬದಲಾಗದ ಹೊರತು ನಮ್ಮ ದೇಶದ ಜನ ಸಾಮಾನ್ಯನಿಗೆ ಭವಿಷ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ನಾವು ಮಾಡುತ್ತಿರುವ ಕೆಲಸ ಶಾಶ್ವತವಲ್ಲ, ಈ ಕೆಲಸ ಶಾಶ್ವತವಾಗಿ ಉಳಿಯಬೇಕಾದರೆ ಜನ ಸಾಮಾನ್ಯನ ಬದುಕನ್ನು ಉತ್ತಮಗೊಳಿಸುವಂತೆ ಯೋಚನೆ ಮಾಡುವ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರಾದ ಹರಿಹರನ್, ಗೋಪಾಲ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಮುಖ್ಯ ವಕ್ತಾರ ಶರತ್ ಖಾದ್ರಿ ಇದ್ದರು.

ಬೆಂಗಳೂರಿನ ಶಾಂತಿ ನಗರದ ನಂ 54, ಬಸಪ್ಪ ರಸ್ತೆಯಲ್ಲಿ ಇರುವ ಆಮ್ ಆದ್ಮಿ ಕ್ಲಿನಿಕ್‌ನಲ್ಲಿ ಸುಮಾರು 60 ಬಗೆಯ ಲ್ಯಾಬ್ ಪರೀಕ್ಷೆಗಳು, ತಜ್ಞ ವೈದ್ಯರಿಂದ ಸಮಾಲೋಚನೆ, ನಿಯಮಿತವಾಗಿ ಪ್ರತಿಯೊಬ್ಬ ರೋಗಿಯ ಬಗ್ಗೆ ನಿಗಾವಹಿಸಲಾಗುವುದು. ಈ ಎಲ್ಲಾ ಸೌಲಭ್ಯಗಳು ಸಂಪೂರ್ಣ ಉಚಿತವಾಗಿ ನೀಡಲಾಗುವುದು.

   DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada

   ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಸಾಮಾಜಿಕ ಕಾರ್ಯಕರ್ತರಾದ ಪೃಥ್ವಿ, ಡೋನಾ ಫರ್ನಾಂಡೀಸ್ ಶಾಂತಿನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಮ್ ಆದ್ಮಿ ಕ್ಲಿನಿಕ್‌ಅನ್ನು ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ ಇದ್ದರು.

   English summary
   Karnataka Rajyotsava: Today(Nov 1) Aam Aadmi Party clinic inaugurated at Shantinagar, Bengalruu by Prithvi Reddy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X