ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ಸಮಸ್ಯೆ ಬಗೆಹರಿಸದ ಸಿಎಂ ಮನೆಗೆ ಮುತ್ತಿಗೆ ರೈತ ಸಂಘದ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ರಾಜ್ಯದಲ್ಲಿ ನಿರಂತರವಾಗಿ ಬರಗಾಲ ಮತ್ತು ಪ್ರವಾಹದಿಂದ ನಷ್ಟ ಅನುಭವಿಸಿದ ರೈತರಿಗೆ ಸರಿಯಾದ ಪರಿಹಾರ ನೀಡುತ್ತಿಲ್ಲವೆಂದು ವಿಧಾನ ಸೌಧ ಹಾಗೂ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವುದಾಗಿ 15 ದಿನಗಳ ಕಾಲಾವಕಾಶ ಪಡೆದು ನೆರೆ ಸಂತ್ರಸ್ತರ ಸಮಸ್ಯೆಗಳ ಪರಿಹರಿಸುವ ಕಡೆ ಗಮನ ಹರಿಸದೆ ತಿರಸ್ಕಾರ ಮನೋಭಾವನೆಯಿಂದ ನೋಡುತ್ತಿರುವುದನ್ನು ವಿರೋಧಿಸಿ ಮುಖ್ಯಮಂತ್ರಿಗಳ ಮನೆಗೆ ನವೆಂಬರ್ 07ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿಯಿಂದ ಮುಖ್ಯಮಂತ್ರಿಗಳ ಮನೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು

RCEP ಗೆ ಮುಂಚಿನ GATT ಎಂಬ ಪೆಡಂಭೂತ, GATT ನ ತಮ್ಮ RCEPRCEP ಗೆ ಮುಂಚಿನ GATT ಎಂಬ ಪೆಡಂಭೂತ, GATT ನ ತಮ್ಮ RCEP

ರೈತರ ಅನೇಕ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡಿದ ಸಮಯದಲ್ಲಿ ಮುಖ್ಯಮಂತ್ರಿಗಳು 15 ದಿನಗಳ ಒಳಗೆ ಸಂತ್ರಸ್ತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮಾತು ನೀಡಿದ್ದರ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. 15 ದಿನ ಕಳೆದರು ಸರ್ಕಾರ ಸಂತ್ರಸ್ತರ ಬಗ್ಗೆ ತಿರಸ್ಕಾರ ಮನೋಭಾವ ಮುಂದುವರಿಸಿದೆ. ಮತ್ತೆ ಪ್ರವಾಹ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರದಿಂದ ಹಣ ಬಂದಿದೆ ಎಂದು ಹೇಳಿಕೊಂಡು ಓಡಾಡಿ ಕೊಂಡು ರೈತರನ್ನು ಮರೆತ್ತಿದ್ದಾರೆ.

ಬರಗಾಲದಿಂದ ತತ್ತರಿಸಿದ ರೈತರ ಮೇಲೆ ಪ್ರಹಾರ

ಬರಗಾಲದಿಂದ ತತ್ತರಿಸಿದ ರೈತರ ಮೇಲೆ ಪ್ರಹಾರ

ರಾಜ್ಯದಲ್ಲಿ ನೆರೆ ಪ್ರವಾಹದಿಂದ 4,394 ಗ್ರಾಮಗಳು ಮುಳುಗಡೆಯಾಗಿ 2.5 ಲಕ್ಷಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿರುತ್ತವೆ. ಪ್ರವಾಹದಿಂದ 15ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ಭೂ ಕುಸಿತದಿಂದ ರೈತರ ಭೂಮಿಯೇ ಇಲ್ಲವಾಗಿದೆ. ಲಕ್ಷಾಂತರ ಏಕರೆ ಕೃಷಿ ಭೂಮಿಯ ಮೇಲ್ಪದರವು ನೀರಿನಲ್ಲಿ ಕೊಚ್ಚಿ ಹೋಗಿದೆ. ಭೂಮಿಯನ್ನು ಹದಮಾಡಲು ಸುಮಾರು ವರ್ಷಗಳೇ ಬೇಕು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಯಾಯ ವ್ಯವಸ್ಥೆ ಮಾಡದೆ ಗಂಜಿ ಕೇಂದ್ರಗಳನ್ನು ಮುಚ್ಚಲಾಗಿದೆ. ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದಿರುವ ಸಂತ್ರಸ್ತರಿಂದ ಸಾಲ ವಸೂಲಿಗೆ ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಗಳು ಸಿವಿಲ್ ಮತ್ತು ಕ್ರಿಮಿನಲ್ ಕೇಸುಗಳನ್ನು ಹಾಕಿ ನೋಟಿಸು ಜಾರಿ ಮಾಡುತ್ತಿವೆ. ಪ್ರವಾಹ ಹಾಗೂ ಬರಗಾಲದಿಂದ ತತ್ತರಿಸಿದ ರೈತರ ಸಾಲ ಮುಕ್ತ ಎಂದು ಹೇಳದೆ ಇರುವುದು ಒಂದು ವಿಪರ್ಯಾಸವೇ ಸರಿ?

ವಿವಿಧ ಬೇಡಿಕೆಗಳು ಹಕ್ಕೊತ್ತಾಯಗಳು

ವಿವಿಧ ಬೇಡಿಕೆಗಳು ಹಕ್ಕೊತ್ತಾಯಗಳು

1) ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷಕ್ಕೆ ಕಡಿಮೆಯಾಗದ ರೀತಿಯಲ್ಲಿ ಗುಣಮಟ್ಟದ ಮನೆ ನಿರ್ಮಾಣ ಮಾಡಿಕೊಂಡಬೇಕು.
೨) ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ೨೫ಲಕ್ಷ ರೂ.ಗಳನ್ನು ನೀಡಬೇಕು.
3) ಪ್ರವಾಹದಿಂದ ನಷ್ಟವಾದ ಅಯಾಯ ಬೆಳೆಗಳಿಗೆ ಅನುಗುಣವಾಗಿ ಡಾ॥ ಸ್ವಾಮಿನಾಥನ್ ವರದಿಯಂತೆ ನಷ್ಟ ಪರಿಹಾರ ತುಂಬಿಕೊಂಡಬೇಕು.
4) ಪ್ರವಾಹದಿಂದ ಪ್ರತಿ ವರ್ಷ ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಮಾಡಿ ಹೊಸದಾಗಿ ನಿರ್ಮಾಣ ಮಾಡಬೇಕು.
5) ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿಯನ್ನು ನೀಡಬೇಕು.
6) ಬರಗಾಲ ಮತ್ತು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ ಮೈಕ್ರೋ ಫೈನಾನ್ಸ್ ಗಳು ಮಹಿಳಾ ಸ್ವಸಹಾಯ ಸಂಘಗಳಿಂದ ಸಾಲ ವಸೂಲಿಗೆ ಬರುವುದು ಕೂಡಲೇ ನಿಲ್ಲಿಸಬೇಕು. ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು.

 ಕೖಷ್ಣ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪಿಸಿ

ಕೖಷ್ಣ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪಿಸಿ

7) ರಾಜ್ಯ ಬರಗಾಲಕ್ಕೆ ನಿರಂತರವಾಗಿ ಗುರಿಯಾಗುತ್ತಿದ್ದು, ಬರಗಾಲ ಪರಿಹಾರವಾಗಿ ಒಂದು ಎಕರೆಗೆ 25,000/-
ರೂ.ಗಳನ್ನುನೀಡಬೇಕು.
8) ಕೖಷ್ಣ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಮಾಡಲು ಕ್ರಮ ಜರುಗಿಸಬೇಕು.
9) ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಒಂದು ಲಕ್ಷ ಕೋಟಿ ರೂ.ಗಳನ್ನು ನಿಗಧಿ ಮಾಡಬೇಕು.
10) ಮಹದಾಯಿ ನೀರಾವರಿ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ಜರುಗಿಸಬೇಕು.
11) ಎತ್ತಿನಹೊಳೆ ನೀರಾವರಿ ಯೋಜನೆ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು.
12) ಮೇಕೆದಾಟು ನೀರಾವರಿ ಯೋಜನೆಯನ್ನು ಜಾರಿ ಮಾಡಿ, ಕಾಲ ಮಿತಿಯಲ್ಲಿ ಕಾಮಗಾರಿ ಮುಗಿಸಬೇಕು.
13) ರೈತರ ಕೖಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಬೆಳೆ ನಷ್ಟ ಪರಿಹಾರ ಮತ್ತು ಮೂಲಭೂತ ಸೌಕರ್ಯವಾಗಿ ನೀರಾವರಿ ಸೌಲಭ್ಯವನ್ನು ಸಮರ್ಪಕವಾಗಿ ನೀಡದ ಕಾರಣ, ರೈತರ ಕೖಷಿ ಸಾಲಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಹಾಗೂ ಹೊಸ ಸಾಲ ನೀಡಬೇಕು.

ಕೃಷಿ ಮಾರುಕಟ್ಟೆಯಲ್ಲಿ ಆನ್ ಲೈನ್ ಟ್ರೇಡಿಂಗ್ ವ್ಯವಸ್ಥೆ

ಕೃಷಿ ಮಾರುಕಟ್ಟೆಯಲ್ಲಿ ಆನ್ ಲೈನ್ ಟ್ರೇಡಿಂಗ್ ವ್ಯವಸ್ಥೆ

14) ಪ್ರತಿ ಟನ್ ಕಬ್ಬಿಗೆ 3,500/- ರೂ.ಗಳನ್ನು ಎಂ.ಎಸ್.ಪಿ. ನಿಗದಿ ಮಾಡಬೇಕು. ಕಾರ್ಖಾನೆಗಳಿ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಕೂಡಲೇ ಕೊಡಿಸಬೇಕು. ರಾಜ್ಯ ಸರ್ಕಾರ ಎಸ್.ಎ.ಪಿ. ಘೋಷಣೆ ಮಾಡಬೇಕು.
15) ಆನ್ ಲೈನ್ ಟ್ರೇಡಿಂಗ್ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಕೖಷಿ ಮಾರುಕಟ್ಟೆಗಳಲ್ಲಿ ಜಾರಿ ಮಾಡಬೇಕು.
16) 10,000 ಕೋಟಿ ರೂ.ಗಳ ಆವರ್ತ ನಿಧಿ ಸ್ಥಾಪಿಸಿ ಬೆಲೆ ಕುಸಿದಾಗ ಕನಿಷ್ಠ ಬೆಲೆಗೆ ಕೖಷಿ ಉತ್ಪನ್ನಗಳನ್ನು ಕೊಳ್ಳುವುದರ ಬದಲು, ಕನಿಷ್ಠ ಲಾಭಾಂಶ ಸಿಗುವ ಬೆಲೆಗೆ ಸರ್ಕಾರವೇ ಕೊಳ್ಳಬೇಕು.
17) ರೈತರು ಕೖಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಮರಣ ಹೊಂದಿದರೆ 2 ಲಕ್ಷದ ಬದಲು 10 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಬೇಕು.
18) 60 ವರ್ಷ ತುಂಬಿದ ಪ್ರತಿಯೊಬ್ಬ ರೈತನಿಗೆ 10,000/- ರೂ.ಗಳ ಮಾಸಾಶನ ನೀಡಬೇಕು.
19) ಆಯಾಯ ಪ್ರದೇಶಕ್ಕೆ ಹೊಂದಿಕೊಳ್ಳುವ ಉಪಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ, ಹಂದಿ, ಮೀನು, ಹೂವು, ತರಕಾರಿ, ಗೖಹ ಕೈಗಾರಿಕೆಗಳಿಗೆ ಶೇ. 75ರಷ್ಟು ಸಹಾಯಧನ ನೀಡಬೇಕು.

ಸ್ವಾಮಿನಾಥನ್ ವರದಿಯಂತೆ ಕೖಷಿ ಉತ್ಪನ್ನಗಳಿಗೆ ಬೆಲೆ ನಿಗದಿ

ಸ್ವಾಮಿನಾಥನ್ ವರದಿಯಂತೆ ಕೖಷಿ ಉತ್ಪನ್ನಗಳಿಗೆ ಬೆಲೆ ನಿಗದಿ

20) ದುಡಿಯುವ ರೈತ ಮಹಿಳೆಯರಲ್ಲಿ ಗರ್ಭಕೋಶದ ತೊಂದರೆಗಳು ಹೆಚ್ಚುತ್ತಿದ್ದು, ಇವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
21) ಬೆಳೆ ವಿಮೆಯು ಅವೈಜ್ಞಾನಿಕವಾಗಿದ್ದು, ಇದನ್ನು ಕೊಡಲೇ ಸರಿಪಡಿಸಬೇಕು.
22) ರೈತ ಚಳುವಳಿಯಲ್ಲಿ ಗೋಲಿಬಾರ್ ನಿಂದ ಮೖತಪಟ್ಟ ರೈತನ ಕುಟುಂಬಕ್ಕೆ 10,000 ರೂ.ಗಳ ಮಾಸಾಶನ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು.
23) ಒಂದು ಲೀಟರ್ ಹಾಲಿಗೆ 50 ರೂ.ಗಳ ಬೆಲೆ ನಿಗಧಿ ಮಾಡಬೇಕು.
24) ಒಂದು ಕೆಜಿ ರೇಷ್ಮೆ ಗೂಡಿಗೆ 500 ರೂ.ಗಳ ಬೆಲೆ ನಿಗಧಿ ಮಾಡಬೇಕು. 500 ರೂ.ಗಳಿಗಿಂತ ಕಡಿಮೆಗೆ ಮಾರಾಟವಾದರೆ ವ್ಯತ್ಯಾಸದ ಹಣವನ್ನು ಸರ್ಕಾರ ನೀಡಬೇಕು.
25) ಡಾ॥ ಸ್ವಾಮಿನಾಥನ್ ವರದಿಯಂತೆ ಕೖಷಿ ಉತ್ಪನ್ನಗಳಿಗೆ ಬೆಲೆ ನಿಗದಿಮಾಡಬೇಕು.
26) ರೈತ ಚಳುವಳಿಯಲ್ಲಿ ರೈತರ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ಬೇಷರತ್ತಾಗಿ ವಾಪಸ್ಸು ಪಡೆಯಬೇಕು

English summary
Karnataka Raitha Sangha president Kodihalli Chandrashekar said various farmers association will protest and Gherov CM BS Yediyurappa on November 07, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X