ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಕುರಿತು ಮಾಹಿತಿ ನೀಡಲು ನೂತನ ಪೋರ್ಟಲ್ ಅನಾವರಣ

|
Google Oneindia Kannada News

ಬೆಂಗಳೂರು, ಮೇ 11: ಇನ್ನುಮುಂದೆ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಲಭ್ಯತೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಈ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ಯಾವ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇದೆ ಎನ್ನುವ ಮಾಹಿತಿಯನ್ನು ಪಡೆಯಬಹುದು. ಫನಾ ಸಂಘವು Search My Bed ಪೋರ್ಟಲ್ ಶುರು ಮಾಡಿದೆ.

ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ

ಕೇವಲ 10 ದಿನದಲ್ಲಿ ಈ ಪೋರ್ಟಲ್ ಮಾಡಿದ್ದಾರೆ. ಈ ಪೋರ್ಟಲ್ ಜನ ಸಾಮಾನ್ಯರಿಗೆ ಸಹಾಯವಾಗಲಿದೆ, ರಿಯಲ್ ಟೈಂ ಬೆಡ್ ಲಭ್ಯತೆ ಬಗ್ಗೆ ಮಾಹಿತಿ ನೀಡಲಾಗುತ್ತದೆ.

Karnataka Private Hospitals Body Launches Search My Bed portal

ಏನಿದು ಸರ್ಚ್ ಮೈ ಬೆಡ್: ಕೆಪಿಎಂಇಯಲ್ಲಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳು, ತಮ್ಮಲ್ಲಿ ಖಾಲಿ ಇರುವ, ಭರ್ತಿಯಾಗಿರುವ ಹಾಸಿಗೆಗಳ ಮಾಹಿತಿಯನ್ನ ಇದರಲ್ಲಿ ಅಪಲೋಡ್ ಮಾಡುತ್ತಾರೆ. ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ.‌

ಎಷ್ಟು ಐಸಿಯು ಬೆಡ್, ವೆಂಟಿಲೇಟರ್ ಬೆಡ್ ಇದೆ ಎಂಬುದನ್ನು ಸುಲಭದಲ್ಲಿ ತಿಳಿಯಬಹುದು. ಈ ಮಾಹಿತಿಯು ಸದ್ಯ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳ ಬೆಡ್ ಮಾಹಿತಿಯು ಸಿಗಲಿದೆ.

ಈಗಾಗಲೇ 90ಕ್ಕೂ ಹೆಚ್ಚು ಆಸ್ಪತ್ರೆಗಳು ಈ ಪೋರ್ಟಲ್ ಮೂಲಕ ಹಾಸಿಗೆ ಲಭ್ಯತೆ ಬಗ್ಗೆ ಮಾಹಿತಿ ನೀಡುತ್ತಿವೆ. ಪೋರ್ಟಲ್ ನಲ್ಲಿ ಮಾಹಿತಿ ಅಪ್ ಲೋಡ್ ಮಾಡಲು ಆಸ್ಪತ್ರೆಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಸದ್ಯಕ್ಕೆ ಕೋವಿಡ್ ಬೆಡ್ ಬಗ್ಗೆ ಮಾಹಿತಿ ಇರಲಿದ್ದು, ನಂತರ ದಿನದಲ್ಲಿ ನಾನ್ ಕೋವಿಡ್ ಬೆಡ್ ಲಭ್ಯತೆ ಬಗ್ಗೆಯೂ ಮಾಹಿತಿ ನೀಡಲಾಗುತ್ತೆ ಎಂದು ವಿವರಿಸಿದರು.‌

Recommended Video

Tejasvi Surya ಬಗ್ಗೆ DK Shivakumar ಪ್ರತಿಕ್ರಿಯೆ | Oneindia Kannada

ಜನಸಾಮಾನ್ಯರು ಹೇಗೆ ಬಳಸಬೇಕು: ಜನರು ತಮ್ಮ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಮೂಲಕ www.searchmybed.com ಟೈಪ್ ಮಾಡಿದರೆ ಆ ವೆಬ್‌ಸೈಟ್‌ಗೆ ಹೋಗಬಹುದು.‌ ಅಲ್ಲಿ ಸರ್ಚ್ ಆಯ್ಕೆ ಇದ್ದು ಬಟನ್ ಪ್ರೆಸ್ ಮಾಡಿದರೆ ಆಸ್ಪತ್ರೆ ಪಟ್ಟಿ, ಎಷ್ಟು ಹಾಸಿಗೆಗಳು ಲಭ್ಯವಿವೆ, ಎಷ್ಟು ಭರ್ತಿಯಾಗಿವೆ ಎಂಬ ಮಾಹಿತಿ ಸಿಗುತ್ತೆ. ನಂತರ ಆಸ್ಪತ್ರೆ ಸಿಬ್ಬಂದಿಯನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು

English summary
The Private Hospitals and Nursing Homes Association (PHANA) in Bengaluru on Sunday launched a ‘searchmybed’ portal where the public can view bed status in various private hospitals which is vacant to treat Covid19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X