ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ತೆರಿಗೆ ವಿನಾಯ್ತಿ ಕೋರಿದ ಖಾಸಗಿ ಬಸ್ ಮಾಲೀಕರು!

|
Google Oneindia Kannada News

ಬೆಂಗಳೂರು, ಮೇ 22: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಿರುವ ಲಾಕ್ಡೌನ್ ನಿಂದಾಗಿ ರಾಜ್ಯದಲ್ಲಿ ಖಾಸಗಿ‌ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಸರ್ಕಾರಿ ಸ್ವಾಮ್ಯದ ಬಸ್ ಸಂಚಾರ ಆರಂಭವಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಸಾರಿಗೆ ಸಂಚಾರ ಜಾರಿಯಲ್ಲಿದೆ.

Recommended Video

ದೂರದ ಕತಾರ್‌ನಿಂದ ಭಾರತಕ್ಕೆ ಹಿಂದಿರುಗುತ್ತಿರುವ ಕನ್ನಡಿಗರು | Oneindia Kannada

ಈ ನಡುವೆ ಶುಕ್ರವಾರದಂದು ರಾಜ್ಯ ಖಾಸಗಿ ಬಸ್ ಗಳ ಮಾಲೀಕರ ನಿಯೋಗವು ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿತು. ಮುಖ್ಯವಾಗಿ ಲಾಕ್ಡೌನ್ ನಿಂದಾಗಿ ಭಾರಿ ನಷ್ಟ ಉಂಟಾಗಿದ್ದು, ಖಾಸಗಿ ಬಸ್ ಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೋರಿದರು.

ಖಾಸಗಿ ಬಸ್‌ ಟಿಕೆಟ್ ದರ ವಿಮಾನ ಪ್ರಯಾಣಕ್ಕಿಂತಲೂ ದುಬಾರಿಖಾಸಗಿ ಬಸ್‌ ಟಿಕೆಟ್ ದರ ವಿಮಾನ ಪ್ರಯಾಣಕ್ಕಿಂತಲೂ ದುಬಾರಿ

ಮೊದಲ‌ ಆರು ತಿಂಗಳು ಸಂಪೂರ್ಣ ರಸ್ತೆ ತೆರಿಗೆ ವಿನಾಯ್ತಿ ಹಾಗೂ ಮುಂದಿನ ಆರು ತಿಂಗಳು ರಸ್ತೆ ತೆರಿಗೆಯಲ್ಲಿ ಶೇ.50 ರಷ್ಟು ವಿನಾಯಿತಿ ನೀಡುವಂತೆ ಕೋರಿದ್ದಾರೆ. ರಸ್ತೆ ತೆರಿಗೆಯಲ್ಲಿ ವಿನಾಯಿತಿ ಕೊಟ್ಟರೆ ಮಾತ್ರ ಬಸ್ ಗಳನ್ನು ರಸ್ತೆಗೆ ಇಳಿಸಲು ಸಾಧ್ಯ, ತೆರಿಗೆ ವಿನಾಯಿತಿ ಕೊಡದಿದ್ರೆ ಬಸ್ ಓಡಿಸೋಕ್ಕೆ ಕಷ್ಟ. ರಾಜ್ಯದಲ್ಲಿ ಸುಮಾರು 1.5 ಲಕ್ಷ ಖಾಸಗಿ ಬಸ್ ಗಳಿವೆ, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಖಾಸಗಿ ಬಸ್ ಮಾಲೀಕರು ಕೋರಿದರು.

Karnataka Private Bus operators request for Road tax relaxation

ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ, ತೆರಿಗೆ ವಿನಾಯತಿ ಬಗ್ಗೆ ಪರಿಶೀಲನೆ ಮಾಡಿ ತಿಳಿಸುವುದಾಗಿ ಭರವಸೆ ನೀಡಿದರು.

English summary
Karnataka Private Bus operators requested CM BS Yediyurappa to provide Road tax relaxation for atleast six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X