ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ರಾಜಕೀಯದ ಬಗ್ಗೆ ಮೋದಿ-ಅಮಿತ್ ಶಾ ಗೆ ವರದಿ: ಯಡಿಯೂರಪ್ಪ

|
Google Oneindia Kannada News

Recommended Video

ರಾಜ್ಯ ರಾಜಕೀಯದ ಬಗ್ಗೆ ಮೋದಿ ಹಾಗು ಅಮಿತ್ ಶಾಗೆ ವರದಿ ನೀಡಲಿದ್ದಾರೆ ಬಿ ಎಸ್ ಯಡಿಯೂರಪ್ಪ | Oniendia Kannada

ಬೆಂಗಳೂರು, ಜುಲೈ 11: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ವರದಿ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ನಾಯಕರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರು ರಾಜ್ಯಕ್ಕೆ ಬಂದಿದ್ದು, ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ ಎಂದರು.

ಅತೃಪ್ತ ಶಾಸಕರಿಗೆ ಮಾತು ಮಾತಿನಲ್ಲೇ ಚುಚ್ಚಿದ ಸ್ಪೀಕರ್ ಅತೃಪ್ತ ಶಾಸಕರಿಗೆ ಮಾತು ಮಾತಿನಲ್ಲೇ ಚುಚ್ಚಿದ ಸ್ಪೀಕರ್

ವಿಧಾನಸೌಧದಲ್ಲಿಯೇ ಶಾಸಕರಾದ ಸುಧಾಕರ್, ಎಂಟಿಬಿ ನಾಗರಾಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಸುಧಾಕರ್ ಅವರ ಕೊರಳು ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅವರನ್ನು ಬಲವಂತದಿಂದ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್‌ನ ಗೂಂಡಾ ಸಂಸ್ಕೃತಿ ಜಗತ್ತಿಗೆ ಗೊತ್ತಾಗಿದೆ ಎಂದು ಹೇಳಿದರು.

Karnataka politics reports will send to Modi and Amit Shah: BSY

ಸಭಾಧ್ಯಕ್ಷರನ್ನು ಭೇಟಿ ಆದ ಬಗ್ಗೆ ಮಾತನಾಡಿದ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಸಭಾಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದು, ಶಾಸಕರ ರಾಜೀನಾಮೆಯನ್ನು ಶೀಘ್ರವಾಗಿ ಅಂಗೀಕಾರ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

ಪಕ್ಷದೊಳಗೆ ಯಡಿಯೂರಪ್ಪಗೆ ಶುರುವಾಯ್ತು ಹೊಸ ತಲೆನೋವು! ಪಕ್ಷದೊಳಗೆ ಯಡಿಯೂರಪ್ಪಗೆ ಶುರುವಾಯ್ತು ಹೊಸ ತಲೆನೋವು!

ಮೈತ್ರಿ ಸರ್ಕಾರವು ಕೊನೆಯ ಹಂತಕ್ಕೆ ಬಂದಿದ್ದು, ಮುಂದೆ ಏನಾಗುತ್ತದೆಯೊ ಕಾದು ನೋಡೋಣ, ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಮುಂದಿನ ಹೆಜ್ಜೆ ಇರಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

English summary
BJP state president Yeddyurappa said Karnataka politics reports will send to prime minister Narendra Modi and BJP national president Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X