• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರರಂಗದ ಚೈತನ್ಯ ಕಾಶೀನಾಥ್ ಅಗಲಿಕೆಗೆ ರಾಜಕಾರಣಿಗಳ ಕಂಬನಿ

By Mahesh
|

ಬೆಂಗಳೂರು, ಜನವರಿ 18: ಕನ್ನಡ ಚಿತ್ರರಂಗದ ಚೈತನ್ಯ, ಪ್ರತಿಭಾವಂತರಿಗೆ ಮಾರ್ಗದರ್ಶಕ, ಸ್ವಾಭಿಮಾನಿ ಚಿತ್ರಕರ್ಮಿ ಕಾಶೀನಾಥ್ ಅವರ ನಿಧನಕ್ಕೆ ಕರ್ನಾಟಕದ ರಾಜಕೀಯ ವಲಯದಿಂದಲೂ ತೀವ್ರ ಸಂತಾಪ ವ್ಯಕ್ತವಾಗಿದೆ.

ಹಿರಿಯ ನಟ ಕಾಶೀನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿ, 'ಅವರು ಪ್ರತಿಭಾವಂತ ಕಲಾವಿದ. ಅವರ ಹಾಸ್ಯ ನಟನೆ ಎಲ್ಲರಿಗೂ ಒಪ್ಪುವಂತಿತ್ತು. ನಾನೂ ಸಹ ಕಾಶಿನಾಥ್ ಅವರ ಕೆಲವು ಚಿತ್ರಗಳನ್ನು ನೋಡಿದ್ದೇನೆ. ಅವರು ಸದಭಿರುಚಿಯ ಚಿತ್ರಗಳನ್ನು ನೀಡಿದ್ದಾರೆ. ಕಾಶಿನಾಥ್ ಅವರಿಗೆ ಸಾಯುವಂಥ ವಯಸ್ಸೇನೂ ಆಗಿರಲಿಲ್ಲ. ಉತ್ತಮ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಇವರ ನಿಧನದಿಂದ ಚಿತ್ರರಂಗಕ್ಕೆ ಭಾರೀ ನಷ್ಟವಾಗಿದೆ. ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ದುಃಖ ತಂದಿದೆ ಎಂದು ಹೇಳಿದರು.

ಉಗುರು ಕಡಿಯುತ್ತಾ ಜಾತ್ರೇಲಿ ತಪ್ಪಿಸಿಕೊಂಡ ಮಗುವಿನ ಮುಖಭಾವದ ಕಾಶೀನಾಥ್

ಕಾಶೀನಾಥ್ ಅವರ ಅಂತಿಮ ದರ್ಶನಕ್ಕೆ ನರಸಿಂಹರಾಜ ಕಾಲೋನಿಯ ಎ.ಪಿ.ಎಸ್ ಕಾಲೋನಿಯ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಚಾಮರಾಜಪೇಟೆಯ ಟಿ. ಆರ್ ಮಿಲ್ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ. ರಾಜಕಾರಣಿಗಳು ಕಾಶೀನಾಥ್ ಅವರನ್ನು ಹೇಗೆ ಸ್ಮರಿಸಿದ್ದಾರೆ ಎಂಬುದನ್ನು ಟ್ವೀಟ್ ಮೂಲಕ ಓದಿ...

ಕಾಶೀನಾಥ್ ಸಾವಿಗೆ ಕಂಬನಿ ಮಿಡಿದ ರಾಜಕಾರಣಿಗಳು

ಕಾಶೀನಾಥ್ ಸಾವಿಗೆ ಕಂಬನಿ ಮಿಡಿದ ರಾಜಕಾರಣಿಗಳು

ಅವರ ಅಗಲಿಕೆಯ ಸುದ್ದಿ ಕೇಳುತ್ತಿದ್ದಂತೆಯೇ, 'ಹಲವು ತಲೆಮಾರಿಗೆ ನಗುವನ್ನು ಹಂಚಿದ ನಟ, ನಿರ್ದೇಶಕ ಇನ್ನು ನೆನಪು ಮಾತ್ರ' ಎಂದು ಹಲವರು ಕಂಬನಿ ಮಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಜೆ ಜಾರ್ಜ್, ಬಿಎಸ್ ಯಡಿಯೂರಪ್ಪ, ಜಗ್ಗೇಶ್, ಮಾಳವಿಕಾ ಅವಿನಾಶ್ ಸೇರಿದಂತೆ ಅನೇಕ ರಾಜಕಾರಣಿಗಳು ಕಾಶೀನಾಥ್ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ

ದಶಕಗಳಿಂದ ನಮ್ಮನ್ನು ರಂಜಿಸಿದ ವ್ಯಕ್ತಿ ಇನ್ನಿಲ್ಲ ಎಂಬುದನ್ನು ಊಹಿಸಿಕೊಳ್ಳಲಿಕ್ಕೇ ಅಸಾಧ್ಯ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ.

ಹುಬ್ಬಳ್ಳಿಯಲ್ಲಿ 'ಅನಂತನ ಅವಾಂತ'ರ ನೋಡಿದ 'ಅನುಭವ'!

ಕರ್ನಾಟಕ ಕಾಂಗ್ರೆಸ್ ಟ್ವೀಟ್

ಹೊಸ ಅಲೆ ಚಿತ್ರಗಳ ಪ್ರವರ್ತಕ, ಅತ್ಯುತ್ತಮ ನಟ ಹಾಗೂ ನಿರ್ದೇಶಕ ಎಂದ ಕರ್ನಾಟಕ ಕಾಂಗ್ರೆಸ್ ಟ್ವೀಟ್.

ಕಾಶಿನಾಥ್ ನಿಧನ: ಕಲಾಯೋಗಿಗೆ ಅಭಿಮಾನಿಗಳ ಕಂಬನಿ

ಹಲವು ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ

ಹಲವು ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ ಎಂದು ಹೊಗಳಿದ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್.

ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್

ಚಂದನವನದ ನಟ, ನಿರ್ದೇಶಕ,ಕಲಾಯೋಗಿ ಹಲವು ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಮಹಾನ್ ವ್ಯಕ್ತಿ, ಕಾಶಿನಾಥ್ ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ- ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್.

ಎಚ್ ಡಿ ಕುಮಾರಸ್ವಾಮಿ ಅವರಿಂದ ಟ್ವೀಟ್

ಕನ್ನಡ ಚಿತ್ರರಂಗವು ಅತ್ಯಮೂಲ್ಯ ರತ್ನದಂತಿದ್ದ ನಟ,ನಿರ್ದೇಶಕರೊಬ್ಬರನ್ನು ಕಳೆದುಕೊಂಡಿದ್ದು, ಕಾಶಿನಾಥ್ ರವರ ಅಗಲಿಕೆಗೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ-ಎಚ್ ಡಿ ಕುಮಾರಸ್ವಾಮಿ.

ನಟ ಜಗ್ಗೇಶ್ ರಿಂದ ಸರಣಿ ಟ್ವೀಟ್

ತಾನಾಯಿತು ತನ್ನ ಕಾರ್ಯವಾಯಿತು ಅಂತ ಬದುಕಿದ ಸಂಭಾವಿತ ಕಾಶಿನಾಥ್-ನಟ ಜಗ್ಗೇಶ್

ಪ್ರತಿಭೆಗಳನ್ನು ಪರಿಚಯಿಸಿದ ಮಹನೀಯ

ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದ ಮಹನೀಯನ ಆತ್ಮಕ್ಕೆ ಶಾಂತಿ ಸಿಗಲಿ- ಸಂಸದ ರಾಜೀವ್ ಚಂದ್ರಶೇಖರ್.

English summary
Karnataka Politicians tweet pay tribute to Actor, Director Kashinath.Veteran Kannada actor and director Kashinath passed away in a private hospital in Bengaluru on Thursday(Jan 18). The actor, suffering from cancer, was admitted to Shankar Cancer hospital two days ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more