• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಆಗಸ್ಟ್ 10ರ ರಾಜಕೀಯ ನಾಯಕರ ಕಾರ್ಯಕ್ರಮಗಳು ಹೀಗಿವೆ..

|
Google Oneindia Kannada News

75ನೇ ಸ್ವಾತಂತ್ಯ ಅಮೃತ ಮಹೋತ್ಸವ ಅಂಗವಾಗಿ ಸಚಿವರು ವಿದ್ಯಾರ್ಥಿಗಳ ಜತೆ ಸಂವಾದ ಮತ್ತು ವಿವಿಧ ಕಾರ್ಯಕ್ರಮ ಸೇರಿದಂತೆ ಇಂದಿನ (10-08-2022) ರಾಜಕೀಯ ಪಕ್ಷ ಮತ್ತು ನಾಯಕರ ಕಾರ್ಯಕ್ರಮ ಬಗ್ಗೆ ಇಲ್ಲಿ ಪರಿಶೀಲಿಸಿ.

ಕಾಂಗ್ರೆಸ್

ಬೆಳಗ್ಗೆ 10.30: ಬಾದಾಮಿ ವಿಧಾಸಭಾ ಕ್ಷೇತ್ರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸ, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅಲ್ಲಿ ಆಯೋಜಿಸಿರುವ ಪಾದಯಾತ್ರೆಗೆ ಚಾಲನೆ, ಕಾಂಗ್ರೆಸ್ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗಿ.

ಬೆಳಗ್ಗೆ 10: ಅಮೃತ ಮಹೋತ್ಸವ ಅಂಗವಾಗಿ ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್ ಕಾಲೇಜಿನ ವಿದ್ಯಾರ್ಥಿಗಳ ಜತೆ ಸಂವಾದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿ, ಸ್ಥಳ: ಸಭಾಂಗಣ, ಗ್ಲೋಬಲ್ ಕಾಲೇಜ್, ರಾಜರಾಜೇಶ್ವರಿ ನಗರ, ಬೆಂಗಳೂರು.

ಆಮ್‌ ಆದ್ಮಿ ಪಾರ್ಟಿ (ಎಎಪಿ)

ಬೆಳಗ್ಗೆ 10: 75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ಪಕ್ಷದಿಂದ ತ್ರಿವರ್ಣ ಸಂಭ್ರಮ ಯಾತ್ರೆ ಬೈಕ್ ರ‍್ಯಾಲಿಗೆ ಚಾಲನೆ, ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷರಾದ ಹಾಗೂ ಹಿರಿಯ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಹಾಗೂ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಖ್ಯಾತ ಕಲಾವಿದ ಮುಖ್ಯಮಂತ್ರಿ ಚಂದ್ರು ಭಾಗಿ, ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು.

ಬಿಜೆಪಿ:

ಬೆಳಗ್ಗೆ 11: ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಭಾಗಿ, ಸ್ಥಳ: ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು.

ಬೆಳಗ್ಗೆ 10: ಐಟಿ ಕಂಪನಿಗಳು ಮತ್ತು ಉದ್ಯೋಗಿಗಳ ಜತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಕಾರ್ಯಕ್ರಮ, ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಭಾಗಿ, ಸ್ಥಳ: ಐಟಿಪಿಎಲ್‌ ಬೆಂಗಳೂರು.

ಬೆಳಗ್ಗೆ 11.30: ರಾಜ್ಯ ಸರ್ಕಾರಿ ಪದವಿ ಕಾಲೇಜು ಸಂಘ ಆಯೋಜಿಸಿರುವ ಅಭಿನಂದನೆ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ, ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಮಧ್ಯಾಹ್ನ 01ರಿಂದ: ಉಜ್ಬೇಕಿಸ್ತಾನ್‌ ಗೌವರ್ನರ್ ಎರ್ಗೋಶ್ ಸೇಲ್ವ್ ಸೇರಿದಂತೆ ವಿದೇಶಿ ಕಂಪನಿಗಳ ಅಧಿಕಾರಿಗಳ ಜತೆ ಸಮಾಲೋಚನೆ, ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಸ್ಥಳ: ಕೊಠಡಿ 243, 2ನೇ ಮಹಡಿ, ವಿಕಾಸಸೌಧ, ಬೆಂಗಳೂರು.

ಸಂಜೆ 05: ಶಿರಸಿಯಲ್ಲಿ ಪ್ಲಾನೆಟೋರಿಯಂ ಸ್ಥಾಪನೆ ಸಂಬಂಧ ಇಲಾಖೆ ಅಧಿಕಾರಿಗಳ ಜತೆ ಸಭೆ, ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅಮರನಾಥ್ ಮತ್ತು ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಭಾಗಿ, ಸ್ಥಳ: ಸಭಾಧ್ಯಕ್ಷರ ಕೊಠಡಿ, ವಿಧಾನಸೌಧ, ಬೆಂಗಳೂರು.

ಸಂಜೆ 06: ರಾಜ್ಯ ಬಿಜೆಪಿ ಕಚೇರಿಗೆ ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಭೇಟಿ, ಸ್ಥಳ: ಮಲ್ಲೇಶ್ವರಂ.

ಸಂಜೆ 7.30: ಭಾರತೀಯ ವಾಣಿಜ್ಯ ಮತ್ತು ಉದ್ಯಮ ಪಾಲುದಾರಿಕೆ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಹಾಗೂ ಭಾರತದಲ್ಲಿನ ಯುಎಸ್‌ಎ ರಾಯಭಾರಿ ಎ ಲ್ಯಾಸಿನಾ ಭಾಗಿ, ಸ್ಥಳ: ಜೆ.ಡಬ್ಯ್ಲು ಮ್ಯಾರಿಯೇಟ್, ಬೆಂಗಳೂರು.

Recommended Video

   ಭಾಟಿಯಾ ನ ನೋಡಿ ಭಾರತ ತಂಡದ ನಾಯಕಿ ಹೀಗೆ ಮಾಡಬಾರದಿತ್ತು | OneIndia Kannada
   English summary
   Karnataka political News and Political Developments Today (10-08-2022) Stay informed about the recent political developments in Karnataka today, Political Parties Latest News Updates. Check Opposition leaders programs, Congress and BJP Latest News,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X