ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯರ ದಿನಾಚರಣೆ, ಬೆಸ್ಕಾಂನಿಂದ ಇವಿ ಎಕ್ಸ್‌ಪೋ: ಜು.1ರ ಪ್ರಮುಖ ವಿದ್ಯಮಾನಗಳು

|
Google Oneindia Kannada News

ಬೆಂಗಳೂರು, ಜು.01: ಅಂತಾರಾಷ್ಟ್ರೀಯ ವೈದ್ಯರ ದಿನ ಮತ್ತು ಪತ್ರಿಕಾ ದಿನಾಚರಣೆ, ಬೆಸ್ಕಾಂ ವತಿಯಿಂದ ಇವಿ ಅಭಿಯಾನ ಮತ್ತು ಇವಿ ಎಕ್ಸಪೋ ಸಹಿತ ಜುಲೈ 1ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರಮುಖ್ಯ ವಿದ್ಯಮಾನಗಳ ವಿವರ ಹೀಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಬೆಳಗ್ಗೆ 9: ನಾಡಪ್ರಭು ಕೆಂಪೇಗೌಡರ 513ನೇ ಜಯಂತ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಸ್ಥಳ: ಎಚ್. ಎಂ.ಟಿ ಆಟದ ಮೈದಾನ, ಗಂಗಾನಗರ, ಬೆಂಗಳೂರು.

ಬೆಳಗ್ಗೆ 9.45: ಅರಣ್ಯ ಇಲಾಖೆ ಬೆಂಗಳೂರು ನಗರ ವತಿಯಿಂದ ಮಾಚೋಹಳ್ಳಿ ವೃಕ್ಷೋದ್ಯಾನ ಉದ್ಘಾಟನೆ ಮತ್ತು ಮನಮಹೋತ್ಸವ ಚಾಲನಾ ಸಮಾರಂಭ, ಸ್ಥಳ: ಮಾಚೋಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ.

Karnataka Political News & Developments Today (01-07-2022): Political Parties News and Updates

ಬೆಳಗ್ಗೆ 11: ಬೆಸ್ಕಾಂ ವತಿಯಿಂದ ಇವಿ ಅಭಿಯಾನ ಮತ್ತು ಇವಿ ಎಕ್ಸಪೋ ಕಾರ್ಯಕ್ರಮ ಉದ್ಘಾಟನೆ, ಸ್ಥಳ: ಚಾಮರ ವಜ್ರ ಅರಮನೆ ಮೈದಾನ, ಜಯಮಹಲ್ ರಸ್ತೆ, ಬೆಂಗಳೂರು.

ಮಧ್ಯಾಹ್ನ 1: ಸಚಿವ ಸಂಪುಟ ಸಭೆ ಸ್ಥಳ: ಸಚಿವ ಸಂಪುಟ ಸಭಾಂಗಣ, ವಿಧಾನಸೌಧ,ಬೆಂಗಳೂರು.

ಮಧ್ಯಾಹ್ನ 3.30: ಕರ್ನಾಟಕ ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ-2022 ಅಂಗವಾಗಿ ಪತ್ರಿಕೋದ್ಯಮದ ಸವಾಲುಗಳು ಅಂದು-ಇಂದು-ಮುಂದು ವಿಚಾರ ಸಂಕಿರಣ ಉದ್ಘಾಟನೆ, ಸ್ಥಳ: ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕಬ್ಬನ್ ಉದ್ಯಾನ, ಬೆಂಗಳೂರು.

ಸಂಜೆ 5: ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್ ಟಿ ಡೇ-ಮುಖ್ಯಮಂತ್ರಿಗಳ ಪ್ರಶಸ್ತಿ ಪ್ರದಾನ ಸಮಾರಂಭ, ಸ್ಥಳ: ಬ್ಯಾಂಕ್ವೆಟ್ ಹಾಲ್,ವಿಧಾನ ಸೌಧ.

ಸಂಜೆ 6.30: ಪೌರ ಕಾರ್ಮಿಕರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಸಭೆ ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.

ರಾತ್ರಿ 8: ಶ್ರೀ ಜಗನ್ನಾಥ್ ಟ್ರಸ್ಟ್ ವತಿಯಿಂದ ಶ್ರೀ ಜಗನ್ನಾಥ ರಥಯಾತ್ರೆ ಉದ್ಘಾಟನೆ ಸ್ಥಳ: ಆಗರ, ಎಚ್ ಎಸ್ಆರ್ ಬಡಾವಣೆ, ಸರ್ಜಾಪುರ ರಸ್ತೆ, ಬೆಂಗಳೂರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್:

ಬೆಳಗ್ಗೆ 7: ಚಿಕ್ಕಬಳ್ಳಾಪುರ ಸರ್ಕಾರಿ ಪಿಯು ಕಾಲೇಜು ಶಿಲಾನ್ಯಾಸ ಕಾರ್ಯಕ್ರಮ ಸ್ಥಳ: ಸರ್ಕಾರಿ ಕಿರಿಯ ಕಾಲೇಜು ಆವರಣ, ಚಿಕ್ಕಬಳ್ಳಾಪುರ.

ಬೆಳಗ್ಗೆ 9: ಆಸ್ಪತ್ರೆ ನಿರ್ವಹಣೆಯಲ್ಲಿ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ ಉದ್ಘಾಟನೆ ಸ್ಥಳ: ಐಐಎಂಬಿ ಸಭಾಂಗಣ, ಸುಂದರ್ ರಾಮ ಶೆಟ್ಟಿ ನಗರ,

ಬೆಳಗ್ಗೆ 10.30: ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ, ಕೆ.ಆರ್‌ ಮಾರುಕಟ್ಟೆ ಬಳಿ, ಬೆಂಗಳೂರು.

ಮಧ್ಯಾಹ್ನ 12: ಪಿಇಎಸ್ ವಿಶ್ವವಿದ್ಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ, ಸ್ಥಳ: ಪಿಇಎಸ್ ವಿಶ್ವವಿದ್ಯಾಲಯ, ಬನಶಂಕರಿ ಮೂರನೆ ಹಂತ, ಬೆಂಗಳೂರು.

ಮಧ್ಯಾಹ್ನ 1.30 ನಂತರ: ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿನ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ.

ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್

ಬೆಳಗ್ಗೆ 10: ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಲಾಜೆಸ್ಟಿಕ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡ್ರಸ್ಟ್ರಿಕ ಕನೆಕ್ಟ್ ಕಾನ್ ಕ್ಲೇವ್ ಸಮಾರಂಭ, ಸ್ಥಳ: ಹೋಟೆಲ್ ಲಲಿತ್ ಅಶೋಕ್

ಕಾಂಗ್ರೆಸ್

ಬೆಳಗ್ಗೆ 11.30: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ಕ್ರಿಯಾ ಸಮಿತಿ ಮುಖಂಡರ ಭೇಟಿ, ಸ್ಥಳ: ವಿಧಾನಸೌಧ ಕಚೇರಿ, ಬೆಂಗಳೂರು.

ಮಧ್ಯಾಹ್ನ 12.30: ಪತ್ರಿಕಾ ಗೋಷ್ಠಿ ಸ್ಥಳ: ವಿಧಾನಸೌಧದ ಕಚೇರಿ, ಬೆಂಗಳೂರು.

ಜೆಡಿಎಸ್

ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ

ಬೆಳಗ್ಗೆ 17ದಿನದ ಜೆಡಿಎಸ್ ಜನತಾ ಮಿತ್ರ ಜನ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ, ಸ್ಥಳ: ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನ, ಬೆಂಗಳೂರು.

ಬಿಬಿಎಂಪಿ

Recommended Video

Rohit ಗಾಗಿ ಕಾಯುತ್ತಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ! | *Cricket | OneIndia Kannada

ಬೆಳಗ್ಗೆ 11: ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಚಾಲನೆ, ಬಿಬಿಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗಿ, ಸ್ಥಳ: ಡಾ.ರಾಜ್ ಕುಮಾರ್ ಸಭಾಂಗಣ, (ಒಳಾಂಗಣ ಕ್ರೀಡಾಂಗಣ) ಗೆಳೆಯರ ಬಳಗ ಬಡಾವಣೆ, ಕುರುಬರಹಳ್ಳಿ ವೃತ್ತದ ಸಮೀಪ, ಮಹಾಲಕ್ಷ್ಮೀ ಬಡಾವಣೆ, ಬೆಂಗಳೂರು.

English summary
Karnataka political News and Developments Today (01-07-2022)- Stay informed about the recent political developments in Karnataka today, Political Parties Latest News and Updates. Check CM, Opposition, Congress and BJP Latest News,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X