ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈತಿಕತೆ ಇದ್ದರೆ ಅಧಿಕಾರ ಬಿಟ್ಟುಹೋಗಿ: ಯಡಿಯೂರಪ್ಪ ಆಗ್ರಹ

|
Google Oneindia Kannada News

ಬೆಂಗಳೂರು, ಜುಲೈ 20: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದೆ. ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ನಿಮಗಿಲ್ಲ. ನೈತಿಕತೆ ಇದ್ದರೆ ಅಧಿಕಾರದಿಂದ ಇಳಿದು ಬಿಟ್ಟುಹೋಗಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದರು.

ಬೆಂಗಳೂರಿನ ಯಲಹಂಕ ಸಮೀಪದ ರಮಾಡ ರೆಸಾರ್ಟ್‌ನಲ್ಲಿ ಶನಿವಾರ ಮಾತನಾಡಿದ ಅವರು, ಅಧಿಕಾರದಲ್ಲಿ ಮುಂದುವರಿಯಲು ಸರ್ಕಾರಕ್ಕೆ ಯಾವುದೇ ನೈತಿಕ ಹಕ್ಕು ಇಲ್ಲ. ರಾಜ್ಯಪಾಲರ ಸೂಚನೆಗಳಿಗೆ ಕ್ಯಾರೇ ಅನ್ನುತ್ತಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಅದಕ್ಕೂ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಬಹುಮತ ಇಲ್ಲದಿದ್ದರೂ ವರ್ಗಾವಣೆ ನಿಂತಿಲ್ಲ: ಕಾರಜೋಳ ಆರೋಪ ಬಹುಮತ ಇಲ್ಲದಿದ್ದರೂ ವರ್ಗಾವಣೆ ನಿಂತಿಲ್ಲ: ಕಾರಜೋಳ ಆರೋಪ

ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ, ಸ್ವತಃ ಶ್ರೀಮಂತ್ ಪಾಟೀಲ್ ಅವರು ತಮ್ಮನ್ನು ಯಾರೂ ಅಪಹರಿಸಿಲ್ಲ ಎಂದು ವಿಡಿಯೋ ಮತ್ತು ಪತ್ರದ ಮೂಲಕ ತಿಳಿಸಿದ್ದಾರೆ ಎಂದರು.

Karnataka political crisis step down if you have morality yeddyurappa demanded hd kumaraswamy

ಅತೃಪ್ತ ಶಾಸಕರು ಬರುವವರೆಗೂ ನಾವು ಸದನವನ್ನು ನಡೆಸುವುದಿಲ್ಲ ಎಂಬ ದೋಸ್ತಿ ನಾಯಕರ ಧೋರಣೆ ಸರಿಯಿಲ್ಲ. ಇದೊಂದು ರೀತಿಯ ಲಜ್ಜೆಗೆಟ್ಟ ಸರ್ಕಾರ. ಸದನವನ್ನು ನಡೆಸಲು ಅವರಿಗೆ ಆಸಕ್ತಿ ಇಲ್ಲ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಆರೋಪಿಸಿದರು.

ಶ್ರೀಮಂತ್ ಪಾಟೀಲ್ ಇರುವ ಆಸ್ಪತ್ರೆಗೆ ನುಗ್ಗಿದ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಶ್ರೀಮಂತ್ ಪಾಟೀಲ್ ಇರುವ ಆಸ್ಪತ್ರೆಗೆ ನುಗ್ಗಿದ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ

ಅತೃಪ್ತ ಶಾಸಕರು ಬರುವ ಹಾಕಿದ್ದರೆ ಅವರನ್ನು ಕರೆದುಕೊಂಡು ವಿಶ್ವಾಸಮತ ಯಾಚಿಸಲಿ. ಸಮ್ಮನೆ ಕಾಲಹರಣ ಮಾಡುವುದು ಸರಿಯಲ್ಲ. ಅತೃಪ್ತರ ಮನವೊಲಿಸ್ತಾರೋ ಇಲ್ಲವೋ ಗೊತ್ತಿಲ್ಲ. ಈ ಆಟಗಳನ್ನೆಲ್ಲ ಜನರು ನೋಡುತ್ತಿದ್ದಾರೆ. ನೈತಿಕತೆ ಇದ್ದರೆ ಸೋಮವಾರ ವಿಶ್ವಾಸಮತ ಯಾಚಿಸಲಿ ಎಂದು ಆಗ್ರಹಿಸಿದರು.

English summary
Karnataka political crisis: BJP state president BS Yeddyurappa demanded HD Kumaraswamy to step down if he has morality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X