ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇವತ್ತೇ ಕಡೆ, ಎಲ್ಲವೂ ಮುಗಿಯುತ್ತದೆ: ಸ್ಪೀಕರ್ ರಮೇಶ್ ಕುಮಾರ್

|
Google Oneindia Kannada News

ಬೆಂಗಳೂರು, ಜುಲೈ 23: ಇಂದು ಎಲ್ಲವೂ ಕೊನೆಯಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ಮಂಗಳವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಿಡಿಕಾರಿದರು.

ಸ್ಪೀಕರ್ ಮುಂದೆ ವಿಚಾರಣೆಗೆ ಅತೃಪ್ತ ಶಾಸಕರು ಗೈರು?ಸ್ಪೀಕರ್ ಮುಂದೆ ವಿಚಾರಣೆಗೆ ಅತೃಪ್ತ ಶಾಸಕರು ಗೈರು?

ಶಾಸಕರಿಗೆ ನೋಟಿಸ್ ಕೊಟ್ಟಿರುವುದರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ವಿಚಾರಣೆಗೆ ಬಾರದೇ ಹೋದರೆ ಅವರಿಷ್ಟ. ನಾನು ಏನು ಹೇಳಲಿ? ನನ್ನ ಕರ್ತವ್ಯ ನಾನು ಮಾಡುತ್ತೇನೆ ಎಂದರು.

Karnataka political crisis speaker ramesh kumar angry on rebel mlas

ನೋಟಿಸ್ ಏಕೆ ಕೊಡುತ್ತಾರೆ ಎಂಬ ತಿಳಿವಳಿಕೆ ಇಲ್ಲ. ಸ್ಪೀಕರ್ ಏನು ನಿಮ್ಮ ದಾಯಾದಿಯೇ? ತಿಳಿವಳಿಕೆ ಕೊರತೆ ಇದ್ದರೆ ನಾನು ಏನು ಮಾಡಲು ಗೊತ್ತಿಲ್ಲ. ರಾಜೀನಾಮೆ ಹೇಗೆ ಕೊಡಬೇಕು ಎನ್ನುವುದು ಗೊತ್ತಿಲ್ಲ. ಶಾಸಕರಾಗಿ ಬರ್ತೀರಿ. ನಿಮ್ಮ ಕರ್ಮಕ್ಕೆ, ದೇಶದ ಕರ್ಮಕ್ಕೆ. ನಾನು ಹೇಳಿಕ್ಕೆ ಆಗುತ್ತದೆಯೇ? ಎಂದು ಸಿಟ್ಟಿನಿಂದ ಹೇಳಿದರು.

ಜನ ವಿಲನ್ ರೀತಿಯಲ್ಲಿ ನೋಡುತ್ತಿದ್ದಾರೆ, ನನ್ನ ಬಲಿಪಶು ಮಾಡಬೇಡಿ: ಸ್ಪೀಕರ್ ಜನ ವಿಲನ್ ರೀತಿಯಲ್ಲಿ ನೋಡುತ್ತಿದ್ದಾರೆ, ನನ್ನ ಬಲಿಪಶು ಮಾಡಬೇಡಿ: ಸ್ಪೀಕರ್

ಇವತ್ತೇ ಕಡೆ. ಎಲ್ಲ ಮುಗಿಯುತ್ತೆ. ನನ್ನ ಕರ್ತವ್ಯ ಮಾಡುತ್ತೇನೆ. ನೋಟಿಸ್ ಯಾಕೆ ಕೊಡ್ತಾರೆ ಎಂದು ಕನಿಷ್ಠ ತಿಳಿವಳಿಕೆ ಇಲ್ಲದೆ ಶಾಸಕರಾಗಿ ಮೆರೆಯೋಕೆ ಬರ್ತಾರೆ. ಕೋರ್ಟ್‌ನಲ್ಲಿ ಅವರು ಏನು ಹೇಳಿಕೊಳ್ಳುತ್ತಾರೋ ಹೇಳಿಕೊಳ್ಳಲಿ ಎಂದು ಹೇಳಿದರು.

English summary
Karnataka political crisis: Spaker Ramesh Kumar expressed angry on rebel MLAs, who seeked time to appear before him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X