ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರನ್ನು ಭೇಟಿ ಮಾಡಿದ ರಾಮಲಿಂಗಾ ರೆಡ್ಡಿ: ಗುಪ್ತ್ ಗುಪ್ತ್ ಚರ್ಚೆ

|
Google Oneindia Kannada News

Recommended Video

Karnataka Crisis : ದೇವೇಗೌಡರನ್ನು ಭೇಟಿ ಮಾಡಿದ ರಾಮಲಿಂಗಾ ರೆಡ್ಡಿ | Oneindia Kannada

ಬೆಂಗಳೂರು, ಜುಲೈ 20: ಅತೃಪ್ತ ಶಾಸಕರೊಂದಿಗೆ ಸೇರಿ ರಾಜೀನಾಮೆ ನೀಡಿ, ಬಳಿಕ ನಾಯಕರ ಮನವೊಲಿಕೆಗೆ ಮಣಿದು ರಾಜೀನಾಮೆ ವಾಪಸ್ ಪಡೆದುಕೊಂಡಿರುವ ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರು ಶನಿವಾರ ಬೆಳಿಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

ರಾಮಲಿಂಗಾ ರೆಡ್ಡಿ ಅವರ ಆಗಮನದ ಮಾಹಿತಿ ಪಡೆದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ದೇವೇಗೌಡರ ನಿವಾಸಕ್ಕೆ ತೆರಳಿದರು.

ನಾನು ರಾಜೀನಾಮೆಯನ್ನು ಮೊನ್ನೆಯೇ ವಾಪಸ್ ಪಡೆದಿದ್ದೇನೆ: ರಾಮಲಿಂಗಾರೆಡ್ಡಿನಾನು ರಾಜೀನಾಮೆಯನ್ನು ಮೊನ್ನೆಯೇ ವಾಪಸ್ ಪಡೆದಿದ್ದೇನೆ: ರಾಮಲಿಂಗಾರೆಡ್ಡಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಇದು ಸೌಜನ್ಯದ ಭೇಟಿ ಅಷ್ಟೇ. ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಕರೆತರುವ ಪ್ರಯತ್ನದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದರು. ಮಾತುಕತೆಯ ವಿವರಗಳನ್ನು ಅವರು ಬಹಿರಂಗಪಡಿಸಲಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಈ ಮಾತುಕತೆ ನಡೆಯಿತು.

'ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಡಿಕೆ ಶಿವಕುಮಾರ್, ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲರೂ ಒಟ್ಟಾಗಿ ರಾಜೀನಾಮೆ ವಾಪಸ್ ತೆಗೆದುಕೊಳ್ಳಬೇಕು ಎಂದಾಗ ಅನಿವಾರ್ಯ ಪರಿಸ್ಥಿತಿ ಬಂತು. ಅಂದು ಭಾನುವಾರ. ಏನೇನಾಯ್ತು ಎಂದು ಸೋಮಶೇಖರ್ ಅವರಿಗೆ ಹೇಳಿದೆ. ಬಳಿಕ ಮೂರು ದಿನ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆಗಲಿಲ್ಲ. ಕೊನೆಗೆ ರಾಜೀನಾಮೆ ಹಿಂದಕ್ಕೆ ಪಡೆದೆ' ಎಂದು ಹೇಳಿದರು.

ಒಟ್ಟಿಗೆ ನಿರ್ಧಾರ ತೆಗೆದುಕೊಂಡಿದ್ದು ಹೌದು

ಒಟ್ಟಿಗೆ ನಿರ್ಧಾರ ತೆಗೆದುಕೊಂಡಿದ್ದು ಹೌದು

'ಬೆಂಗಳೂರಿನ ಮೂವರು ಶಾಸಕರೊಂದಿಗೆ ಕುಳಿತು ಒಟ್ಟಾಗಿ ಮಾತನಾಡಿದ್ದು ನಿಜ. ಅದನ್ನು ಇಲ್ಲವೆನ್ನುತ್ತಿಲ್ಲ. ಒಟ್ಟಾಗಿ ಮಾತನಾಡಿಯೇ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದೆವು. ಆದರೆ, ನಾಯಕರ ಒತ್ತಡಕ್ಕೆ ಮಣಿದು ರಾಜೀನಾಮೆ ವಾಪಸ್ ಪಡೆಯುವ ನಿರ್ಧಾರಕ್ಕೆ ಅನಿವಾರ್ಯವಾಗಿ ಬರಬೇಕಾಯಿತು. ಭಾನುವಾರದಂದು ಶಾಸಕ ಎಸ್ ಟಿ ಸೋಮಶೇಖರ್ ಅವರೊಂದಿಗೆ ಮಾತನಾಡಿದ್ದೆ. ಅದಕ್ಕೂ ಮೊದಲು ಎರಡು ಬಾರಿ ಮಾತನಾಡಿ ಈ ಬೆಳವಣಿಗೆಗಳ ಕುರಿತು ತಿಳಿಸಿದ್ದೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ಎಸ್ ಟಿ ಸೋಮಶೇಖರ್ ಮತ್ತು ಮುನಿರತ್ನ ಅವರನ್ನು ಸಂಪರ್ಕಿಸಲು ನಿರಂತರ ಪ್ರಯತ್ನ ಮಾಡಿದೆ. ಆದರೆ ಅವರು ಸಿಗಲಿಲ್ಲ' ಎಂದು ತಿಳಿಸಿದರು.

ಸೋಮಶೇಖರ್ ಹೇಳಿದ್ದು ನಿಜ

ಸೋಮಶೇಖರ್ ಹೇಳಿದ್ದು ನಿಜ

'ಸರ್ಕಾರದ ವಿರುದ್ಧ ಬೇಸೆತ್ತು ನಾವು ಬೆಂಗಳೂರಿನ ಶಾಸಕರು ಒಟ್ಟಾಗಿ ರಾಜೀನಾಮೆ ನಿರ್ಧಾರ ಮಾಡಿದ್ದೆವು ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದು ಸುಳ್ಳು ಎನ್ನುವುದಿಲ್ಲ. ಅವರು ಹೇಳಿದ್ದು ನಿಜ. ನನಗೆ ಎಂಟಿಬಿ ನಾಗರಾಜ್‌ಗೂ ಅವರೊಂದಿಗೆ ಸಂಪರ್ಕವಿಲ್ಲ. ಮುಂಬೈನಲ್ಲಿರುವ ಬೇರೆ ಅತೃಪ್ತ ಶಾಸಕರೊಂದಿಗೂ ಸಂಬಂಧವಿಲ್ಲ. ವಿಶ್ವನಾಥ್ ಅವರನ್ನು ಒಮ್ಮೆ ಸೌಹಾರ್ದಯುತವಾಗಿ ಭೇಟಿ ಆಗಿದ್ದೆ'.

ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್: ಎಂಟಿಬಿ ಹೇಳಿದ್ದೇನು?ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್: ಎಂಟಿಬಿ ಹೇಳಿದ್ದೇನು?

ನನಗೆ ಡಿಸಿಎಂ ಹುದ್ದೆ ಆಸೆ ಇಲ್ಲ

ನನಗೆ ಡಿಸಿಎಂ ಹುದ್ದೆ ಆಸೆ ಇಲ್ಲ

'ನನಗೆ ಉಪ ಮುಖ್ಯಮಂತ್ರಿ ಹುದ್ದೆಯೂ ಬೇಡ, ಯಾವ ಹುದ್ದೆಯೂ ಬೇಡ. ಅಧಿಕಾರದ ಆಸೆಗಾಗಿ ಇದನ್ನು ಮಾಡುತ್ತಿಲ್ಲ ಎಂದು ಹಿಂದಿನಿಂದಲೂ ಹೇಳುತ್ತಿದ್ದೇನೆ. ಇದೆಲ್ಲ ಊಹಾಪೋಹ. ನನಗೆ ಆ ಹುದ್ದೆ ಬೇಡ. ಅದರ ಆಸೆಯೂ ಇಲ್ಲ' ಎಂದು ತಿಳಿಸಿದರು.

ರಾಮಲಿಂಗಾ ರೆಡ್ಡಿ ಅವರನ್ನು ಅನುಸರಿಸೊಲ್ಲ

ರಾಮಲಿಂಗಾ ರೆಡ್ಡಿ ಅವರನ್ನು ಅನುಸರಿಸೊಲ್ಲ

'ಯಾವ ಒತ್ತಡ ಹೇರಿದರೂ ರಾಜೀನಾಮೆ ವಾಪಸ್ ಪಡೆಯಬಾರದು ಎಂಬ ಒಪ್ಪಂದ ಮೇರೆಗೆ ನಾಲ್ಕು ಜನ ಶಾಸಕರು ಒಟ್ಟಿಗೆ ರಾಜೀನಾಮೆ ಕೊಟ್ಟಿದ್ದೇವೆ. ಆದರೆ ವಿಶ್ವಾಸಮತ ಯಾಚನೆ ದಿನ ಕಾಂಗ್ರೆಸ್ ಪಕ್ಷದ ಒತ್ತಡದಿಂದ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ರಾಮಲಿಂಗಾ ರೆಡ್ಡಿ ಅವರು ಹೇಳಿರುವುದು ಮಾಧ್ಯಮಗಳಲ್ಲಿ ಬಂದಿದೆ. ಇದರಿಂದ ಆಘಾತವಾಗಿದೆ. ನಾನಾಗಲೀ, ಭೈರತಿ ಅಥವಾ ಮುನಿರತ್ನ ಅವರಾಗಲೀ ರಾಮಲಿಂಗಾ ರೆಡ್ಡಿ ಅವರನ್ನು ಅನುಸರಿಸುವುದಿಲ್ಲ' ಎಂದು ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದರು.

ಮಾಸ್ಟರ್ ಪ್ಲ್ಯಾನ್. ಅವರು ತೋರುರೆಉವ ಖೆಡಡ್ಡಾಗೆ ಬೋಳಿಸುವುದು. ಕಳಂಕ ಸೋಮವಾರ ವಿಶ್ವರ ನಮ ನಮಣ ದೂಡಕ್ಕ., ದಿನಧೇಶವ ್ಉಣಡೂರಾವ್. ಸಿಂಎ ಆ್ವಾನದಲ್ಲಿಂತೆ ರಾಮಲಿಂಗಾರೆಡ್ಡಿ ಆಗಮನ. ರೆಡ್ಡಿ ಆಪ್ತರನ್ನು ಸೆಳೆಯಲು ತಂತ್ರಲ ಒಂದು ಗಂಟೆ ಮಾಡಲಣಾಡಿದರಯ.

ಸೋಮಶಖರ್, ಭೈರತಿ, ಮುನಿರತ್ನ, ನಾಗರ್ಆ ಡಿಸಟರ್ಬ್ ಆಗಿದದ್ಅರೆ, ವರ್ಕೌಟ್

ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರುಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು

English summary
Karnataka political crisis: Congress MLA Ramalinga Reddy on Saturday met JDS president HD Deve Gowda. 'No rebel MLAs are in touch with me', he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X