ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿದ ಸಚಿವ ರೇವಣ್ಣ!

|
Google Oneindia Kannada News

Recommended Video

ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿದ ಸಚಿವ ರೇವಣ್ಣ! | Oneindia Kannada

ಬೆಂಗಳೂರು, ಜನವರಿ 29: ಮುಖ್ಯಮಂತ್ರಿ-ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಇರುಸು-ಮುರುಸು ಆಗುವಂಥ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರಿಗೆ ತಿರುಗೇಟು ನೀಡುವಂಥ ಪ್ರಮುಖ ಬೆಳವಣಿಗೆಯೊಂದು ನಡೆದ ಬಗ್ಗೆ ವರದಿ ಆಗಿದೆ. ಎಚ್ ಡಿಕೆ ಸೋದರ ಸಚಿವರೂ ಆದ ಎಚ್.ಡಿ.ರೇವಣ್ಣ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿಜೆಪಿ ಒಳಗಿನ ನಾಯಕರು ಹೇಳುವ ಪ್ರಕಾರ, ರೇವಣ್ಣ ಮತ್ತು ಬಿಜೆಪಿಯ ಹಿರಿಯ ನಾಯಕರ ಮಧ್ಯೆ ಮಂಗಳವಾರ ಮಧ್ಯಾಹ್ನ ಭೇಟಿ ನಡೆದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿದೆ. ಹೆಸರು ಹೇಳಲು ಇಚ್ಛಿಸದ ಹಾಗೂ ಚರ್ಚೆಯ ವೇಳೆ ಹಾಜರಿದ್ದರು ಎನ್ನಲಾದ ನಾಯಕರೊಬ್ಬರು ಕೆಲ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.

ಕುಮಾರಸ್ವಾಮಿಗೆ ಇನ್ನಷ್ಟು ಪ್ರಬುದ್ಧತೆ ಬೇಕು ಎಂದ ಬಸವರಾಜ ರಾಯ ರೆಡ್ಡಿಕುಮಾರಸ್ವಾಮಿಗೆ ಇನ್ನಷ್ಟು ಪ್ರಬುದ್ಧತೆ ಬೇಕು ಎಂದ ಬಸವರಾಜ ರಾಯ ರೆಡ್ಡಿ

ಇಡೀ ಪ್ರಹಸನದಿಂದ ದೂರ ಇರಲು ನಾವು (ಬಿಜೆಪಿ) ದೂರ ಇದ್ದೇವೆ. ಆದರೂ ಜೆಡಿಎಸ್- ಕಾಂಗ್ರೆಸ್ ತಿಕ್ಕಾಟ ನಮ್ಮನ್ನು ಎಲ್ಲೆಡೆಯೂ ಬೆನ್ನಟ್ಟಿ ಬರುತ್ತಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯ ವೇಳೆ ಕಾಂಗ್ರೆಸ್ ನಾಯಕರು ಸರಕಾರ ನಡೆಸಲು ಬಿಡದೆ ತೊಂದರೆ ನೀಡುತ್ತಿರುವ ಬಗ್ಗೆ ರೇವಣ್ಣ ಹೇಳಿಕೊಂಡರು ಎಂದು ತಿಳಿಸಿದ್ದಾರೆ.

Karnataka political crisis: CM Kumaraswamy brother Revanna meet BJP

ಆದರೆ, ಪಕ್ಷದ ಮೂಲಗಳು ಹೇಳುವ ಪ್ರಕಾರ ಆರೋಗ್ಯ ಸರಿಯಿಲ್ಲದ ಕಾರಣ ಇಡೀ ದಿನ ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿದ್ದರು. ಇನ್ನು ಬಿಜೆಪಿಯನ್ನು 'ಬಳಸಿಕೊಂಡು' ಜೆಡಿಎಸ್ ಪಕ್ಷವು ಕಾಂಗ್ರೆಸ್ ನ ಬೆದರಿಸಲು ಯತ್ನಿಸುತ್ತಿದೆ ಎಂಬ ಮಾತು ಕೂಡ ಚಾಲ್ತಿಯಲ್ಲಿದೆ. ಲೋಕಸಭೆ ಚುನಾವಣೆ ಎದುರಿಗೆ ಇರುವಾಗ ಸೀಟು ಹಂಚಿಕೆ ವಿಚಾರದಲ್ಲಿ ಸಮ-ಸಮವಾದ ಆದ್ಯತೆ ಬೇಕು ಎಂಬುದನ್ನು ಪ್ರಬಲವಾದ ಸಂದೇಶದ ಮೂಲಕ ಕಳುಹಿಸುವ ಪ್ರಯತ್ನ ಇದು ಎನ್ನಲಾಗುತ್ತಿದೆ.

English summary
Karnataka political crisis: Chief minister HD Kumaraswamy's brother and PWD minister H D Revanna met BJP senior leadership in Bengaluru on Tuesday. This is the rumor running around.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X