ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವು ಈಗ ನೋಡುತ್ತಿರುವ ಡಿಕೆ ಶಿವಕುಮಾರ್ ಅವರೇ ಬೇರೆ: ವಿ ಸೋಮಣ್ಣ

|
Google Oneindia Kannada News

ಬೆಂಗಳೂರು, ಜುಲೈ 13: ಡಿಕೆ ಶಿವಕುಮಾರ್ ಒನ್ ಮ್ಯಾನ್ ಆರ್ಮಿ. ನಾವು ಇದುವರೆಗೆ ನೋಡಿದ್ದ ಡಿಕೆಶಿ ಅವರೇ ಬೇರೆ. ಈಗ ನೋಡುತ್ತಿರುವುದೇ ಬೇರೆ. ಅಧಿಕಾರಕ್ಕಾಗಿ ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು 4-5 ದಿನಗಳಿಂದ ನೋಡುತ್ತಿದ್ದೇವೆ ಎಂದು ಬಿಜೆಪಿ ಮುಖಂಡ ವಿ. ಸೋಮಣ್ಣ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, 'ಡಿಕೆ ಶಿವಕುಮಾರ್ ಅವರಿಗೆ ಯಾರೂ ಹೇಳುವವರಿಲ್ಲ. ಅವರು ನಡೆದಿದ್ದೇ ದಾರಿ. ಅವರ ಮಾತಿಗೆ ಮರುಳಾಗುವ ಜನ ಇದ್ದಾರೆಯೇ ಗೊತ್ತಿಲ್ಲ. ಆದರೆ ಅವರು ಏತಕ್ಕೆ ಇವನ್ನೆಲ್ಲ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಪಕ್ಕದಲ್ಲಿ ವಿಡಿಯೋ ಕ್ಯಾಮೆರಾ ಯಾರಿಗೆ ಏನು ಕಳಿಸಬೇಕೋ ಕಳಿಸಿ ಮಜಾ ತಗೋತಾರೆ. ನಾನು ಈ ಎಲ್ಲ ಮಾಹಿತಿ ಇಲ್ಲದೆ ಮಾತಾಡುವುದಿಲ್ಲ' ಎಂದರು.

ನಿಂಬೆಹಣ್ಣು ರೇವಣ್ಣನಿಂದ ವಾಮಾಚಾರ: ರೇಣುಕಾಚಾರ್ಯ ಟೀಕೆನಿಂಬೆಹಣ್ಣು ರೇವಣ್ಣನಿಂದ ವಾಮಾಚಾರ: ರೇಣುಕಾಚಾರ್ಯ ಟೀಕೆ

ರಾಜೀನಾಮೆ ಪರ್ವ ಕಾಂಗ್ರೆಸ್-ಜೆಡಿಎಸ್‌ನವರಿಂದ ಆಗಿದೆ ಹೊರತು ನಮ್ಮಿಂದ ಆಗಿಲ್ಲ. ಸ್ವಾಭಿಮಾನಕ್ಕೆ, ತತ್ವ ನಿಷ್ಠೆಗೆ ಹೆಸರಾದ ಪಕ್ಷವಾದ ಬಿಜೆಪಿಯ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ನಮ್ಮ ಶಾಸಕರನ್ನು ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಸ್ವಂತಕ್ಕಾಗಿ ಲೂಟಿ ಮಾಡುತ್ತಿದ್ದಾರೆ

ಸ್ವಂತಕ್ಕಾಗಿ ಲೂಟಿ ಮಾಡುತ್ತಿದ್ದಾರೆ

ನಮಗೆ ಯಾರ ಭೀತಿ-ಭಯವೂ ಇಲ್ಲ. ಅದು ಅವರಿಗೆ ಇರೋದು. ತಪ್ಪು ಮಾಡಿ ಕತ್ತಲಲಲ್ಲಿ ರಾಜ್ಯವನ್ನು ಇಟ್ಟಿರುವುದು ಅವರು. ಸ್ವಂತಕ್ಕಾಗಿ ಲೂಟಿ ಮಾಡುತ್ತಿರುವುದು ಅವರು. ಸಿಎಂ ಹಳ್ಳಿ ಕಂಡು ತುಂಬಾ ದಿನ ಆಗಿದೆ. ರಾಜ್ಯಕ್ಕೆ ಭವ್ಯ ಇತಿಹಾಸವಿದೆ. ಅದನ್ನು ಹಾಳುಮಾಡುವ ಕೆಟ್ಟ ವ್ಯವಸ್ಥೆಗೆ ಅಂತ್ಯ ಹಾಡಬೇಕಿದೆ.

ಸಾ.ರಾ.ಮಹೇಶ್ - ಬಿಜೆಪಿ ಮುಖಂಡರ ಭೇಟಿಯ ನಂತರದ ಬೆಳವಣಿಗೆಗಳುಸಾ.ರಾ.ಮಹೇಶ್ - ಬಿಜೆಪಿ ಮುಖಂಡರ ಭೇಟಿಯ ನಂತರದ ಬೆಳವಣಿಗೆಗಳು

ಸಿಎಂಗೆ ಕಳಕಳಿ ಇರಬೇಕಿತ್ತು

ಸಿಎಂಗೆ ಕಳಕಳಿ ಇರಬೇಕಿತ್ತು

ನಾವೆಲ್ಲ ಒಂದೆಡೆ ಸೇರಿ ಕುಶಲೋಪರಿ ಮಾತಾಡಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ ಎಂದು ಯಡಿಯೂರಪ್ಪ ಒಬ್ಬರೇ ಎಲ್ಲ ಕಡೆ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ಈ ಕಳಕಳಿ ಇರಬೇಕಿತ್ತು. ಇತಿಹಾಸ ಪುರಾಣ ಹೇಳಿಕೊಂಡು ನಾವು ಹೀಗಿದ್ವಿ ಎಂದು ಈಗ ಹೇಳುವವರು ತಮ್ಮ ಮನೆಯಲ್ಲಿನ ವ್ಯವಸ್ಥೆ ನೋಡಿಕೊಳ್ಳಬೇಕು.

ಹಾಳುಮಾಡಿದ್ದು ಸಮ್ಮಿಶ್ರ ಸರ್ಕಾರ

ಹಾಳುಮಾಡಿದ್ದು ಸಮ್ಮಿಶ್ರ ಸರ್ಕಾರ

ರಾಜ್ಯವನ್ನು ಹಾಳುಮಾಡಿದ್ದು ಸಮ್ಮಿಶ್ರ ಸರ್ಕಾರ. ಸಿಎಂಗೆ ರಾಜ್ಯದ ಸಮಸ್ಯೆಗಳು ಗೊತ್ತೇ ಇಲ್ಲ. ಅವರಿಗೆ ಗೊತ್ತಿರುವುದು ನಂಬರ್ ಗೇಮ್ ಅಷ್ಟೆ. ಅವರ ಮಾತಿಗೂ ಕೃತಿಗೂ ಸಂಬಂಧವಿಲ್ಲ. 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಈ ರೀತಿ ಅವ್ಯವಸ್ಥೆ, ದಗಲ್ಬಾಜಿ, ಪರ್ಸಂಟೇಜ್‌ಗಾಗಿ ಕಿತ್ತಾಡುವ ವ್ಯವಸ್ಥೆ ನೋಡಿರಲಿಲ್ಲ. ರಾಜ್ಯದ ಜನತೆ ನೊಡುತ್ತಿದ್ದಾರೆ. ಸರಿಯಾದ ಟೈಮಲ್ಲಿ ಉತ್ತರ ಕೊಡುತ್ತಾರೆ.

ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ

ಯಾರು ಯಾರು ಹೊಡೆದಾಡಿಕೊಳ್ಳುತ್ತಾರೋ

ಯಾರು ಯಾರು ಹೊಡೆದಾಡಿಕೊಳ್ಳುತ್ತಾರೋ

ಸ್ಪೀಕರ್ ನಮಗೆಲ್ಲ ಬೇಕಾದವರು. ಅವರ ಚಿಂತನೆ ಭಾವನೆಗಳು ಹೇಗಿದೆ ಏನಿದೆ ಎಂದು ಮಾತನಾಡುವುದಿಲ್ಲ. ಅವರ ಬಗ್ಗೆ ವಿಶೇಷ ಗೌರವವಿದೆ. ಈ ಎಲ್ಲ ಗೊಂದಲಗಳಿಗೆ ಮಂಗಳವಾರ ಅಂತ್ಯ ಬೀಳುತ್ತದೆ.

ಮಂಗಳವಾರ ತೀರ್ಪು ಬಂದ ಬಳಿಕ ಯಾರು ಯಾರ ಕೊರಳ ಪಟ್ಟಿ ಹಿಡಿದುಕೊಳ್ಳುತ್ತಾರೋ. ಯಾರು ಯಾರು ಹೊಡೆದಾಡಿಕೊಳ್ಳುತ್ತಾರೋ ನಮಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

English summary
karnataka political crisis: BJP leader V Somanna said that, DK Shivakumar is like one man army. We ar seeing a different DK Shivakumar since 4-5 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X