ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Fact Check: ಕರ್ನಾಟಕದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದರೆ ಕೆರೆ ಸ್ವಚ್ಛಗೊಳಿಸುವ ಶಿಕ್ಷೆ!

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಕೊರೊನಾ ವೈರಸ್‌ ಹರಡುವಿಕೆಯ ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಲಾಕ್‌ಡೌನ್‌ ಉಲ್ಲಂಘನೆ ಮಾಡಿದವರಿಗೆ, ಲಾಠಿಯಲ್ಲಿ ಹೊಡೆದಿದ್ದು ನೋಡಿದ್ದೇವೆ, ತಪ್ಪಾಯ್ತು ಎಂದು ಕ್ಷಮೆ ಕೇಳಿಸಿದ್ದನ್ನು ನೋಡಿದ್ದೇವೆ, ಕೆಲವರಿಂದ ಬಸ್ಕಿ ಹೊಡಿಸಿದ್ದು ಕಣ್ಣಿಗೆ ಬಿದ್ದಿದೆ.

ಇದೀಗ, ಕರ್ನಾಟಕದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದವರಿಂದ ಸಾರ್ವಜನಿಕ ಸ್ಥಳ ಹಾಗೂ ಕೆರೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ತಾಲಜಾಣದಲ್ಲಿ ಸದ್ದು ಮಾಡ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವು ಪೋಸ್ಟ್ ಹಾಗೂ ಫೋಟೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

ಆದರೆ, ಈ ಸುದ್ದಿ ಸುಳ್ಳು. ಇಂತಹ ಯಾವುದೇ ಶಿಕ್ಷೆಯನ್ನು ಕರ್ನಾಟಕ ಪೊಲೀಸ್ ಆಗಲಿ ಅಥವಾ ಬೆಂಗಳೂರು ಪೊಲೀಸ್ ಆಗಲಿ ನೀಡಿಲ್ಲ. Awesome Things in India ಎಂಬ ಫೇಸ್‌ಬುಕ್ ಖಾತೆಯಲ್ಲಿ ಕೆರೆಯಲ್ಲಿ ಟೆಕ್ಕಿಗಳು ಸ್ವಚ್ಛಗೊಳಿಸುತ್ತಿರುವ ಫೋಟೋ ಶೇರ್ ಮಾಡಿ, ಕರ್ನಾಟಕದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ನೀಡಿರುವ ಶಿಕ್ಷೆ ಎಂದು ಬಿಂಬಿಸಲಾಗಿದೆ. ಈ ಪೋಸ್ಟ್ ಗೆ 3000 ಲೈಕ್ಸ್ ಬಂದಿದೆ. 2400 ಜನರು ಶೇರ್ ಮಾಡಿದ್ದಾರೆ.

ಮೇ 3ರ ತನಕ ಲಾಕ್ ಡೌನ್ ವಿಸ್ತರಣೆ ಆಗಿದ್ದು ಏಕೆ?ಮೇ 3ರ ತನಕ ಲಾಕ್ ಡೌನ್ ವಿಸ್ತರಣೆ ಆಗಿದ್ದು ಏಕೆ?

ಸತ್ಯ ಏನಪ್ಪಾ ಅಂದ್ರೆ ಈ ಫೋಟೋ 2017ರ ಸಮಯದಲ್ಲಿ ತೆಗೆದಿದ್ದು. ಕೆಲವು ಟೆಕ್ಕಿಗಳು ಸ್ವ-ಇಚ್ಛೆಯಿಂದ ಹುಳಿಮಾವು ಕೆರೆಯನ್ನು ಸ್ವಚ್ಛಗೊಳಿಸಿದ್ದ ಸಂದರ್ಭ. ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಈ ಕುರಿತು ಸುದ್ದಿ ಪ್ರಕಟವಾಗಿತ್ತು.

Karnataka Police Are Not Making Lockdown Violators Clean Lakes

ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಬರಲಿದೆ ಕೊರೊನಾ ಟೆಸ್ಟಿಂಗ್ ವ್ಯವಸ್ಥೆಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಬರಲಿದೆ ಕೊರೊನಾ ಟೆಸ್ಟಿಂಗ್ ವ್ಯವಸ್ಥೆ

ಇನ್ನು ದೇಶದ ಹಲವು ಕಡೆ ಲಾಕ್‌ಡೌನ್‌ ಉಲ್ಲಂಘನೆ ಮಾಡಿದವರಿಗೆ ವಿಭಿನ್ನ ರೀತಿ ಶಿಕ್ಷೆ ನೀಡಿರುವುದು ಗಮನ ಸೆಳೆದಿದೆ. ಉತ್ತರ ಪ್ರದೇಶದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದ ವಿದೇಶಿಗರಿಂದ ಐ ಯಾಮ್ ಸಾರಿ ಎಂದು 500 ಬಾರಿ ಬರೆಸಲಾಗಿತ್ತು.

English summary
Corona Lockdown: Karnataka police are not making lockdown violators clean lakes. this news is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X