ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದಿ ಹೇರಿಕೆ ಖಂಡಿಸಿ, ರೈಲ್ವೆ ಸ್ಟೇಷನ್ ಬೋರ್ಡಿಗೆ ಮಸಿ

|
Google Oneindia Kannada News

ಬೆಂಗಳೂರು, ಸೆ. 14: ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ 'ಹಿಂದಿ ದಿವಸ್' ಆಚರಣೆ ಮಾಡಲಾಗುತ್ತಿದೆ.ಕರ್ನಾಟಕ ನವನಿರ್ಮಾಣ ಸೇನಾ ಕಾರ್ಯಕರ್ತರು, ಕರ್ನಾಟಕ ಗ್ರಾಹಕರ ಕೂಟ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕರ್ನಾಟಕ ನವನಿರ್ಮಾಣ ಸೇನಾ ಕಾರ್ಯಕರ್ತರ ಗುಂಪೊಂದು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತೆರಳಿ, ರೈಲ್ವೆ ನಿಲ್ದಾಣದ ಮುಖ್ಯ ನಾಮಫಲಕದಲ್ಲಿದ್ದ ಹಿಂದಿ ಅಕ್ಷರಗಳನ್ನು ಅಳಿಸಿ ಹಾಕಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ನಟ ಪ್ರಕಾಶ್ ರೈ, ಧನಂಜಯ, ಚೇತನ್ ಅಹಿಂಸ ಸೇರಿದಂತೆ ಹಲವಾರು ಮಂದಿ ಹಿಂದಿ ಹೇರಿಕೆ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ದನಿಯೆತ್ತಿದ್ದಾರೆ.

ಹಿಂದಿ ಹೇರಿಕೆ: ಕಿಡಿಕಾರಿದ ಎಚ್ ಡಿ ಕುಮಾರಸ್ವಾಮಿಹಿಂದಿ ಹೇರಿಕೆ: ಕಿಡಿಕಾರಿದ ಎಚ್ ಡಿ ಕುಮಾರಸ್ವಾಮಿ

ಇಂದು ದೇಶಾದ್ಯಂತ ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡವೂ ಭಾಗವಾಗಿರುವುದರಿಂದ ಕನ್ನಡ ಭಾಷಾ ದಿನವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ಮೋದಿಯವರೇ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.

Karnataka Navnirman Sena members scorched hindi name plate in KSR Railway Station Bengaluru

ನಮ್ಮ ದೇಶವನ್ನು ಭಾಷಾವಾರು ವಿಂಗಡಣೆ ಮಾಡಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಭಾಷೆ ಇದೆ. ಹೀಗಿರುವಾಗ ಇನ್ನೊಂದು ಭಾಷೆಯನ್ನು ಹೇರುವುದು ಸರಿಯಲ್ಲ ಎಂಬುದೇ ಹಿಂದಿ ಹೇರಿಕೆ ವಿರುದ್ಧ ಎದ್ದಿರುವ ಧ್ವನಿಯಾಗಿದೆ. ಸಂವಿಧಾನದ ವಿಧಿ 343-351ರ ವರೆಗಿನ ವಿಧಿಗಳು ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನವನ್ನು ನೀಡಿದೆ. ಇದರಿಂದಾಗಿ ಕರ್ನಾಟಕ/ಕನ್ನಡಕ್ಕೆ ಬೇಕಾಗಿರುವ ಫಂಡ್ ಸಿಗುವುದಿಲ್ಲ. ಸಂವಿಧಾನದ 8 ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನು ಒಕ್ಕೂಟದ ಆಡಳಿತ ಭಾಷೆ ಎಂದು ಘೋಷಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸೋಣ ಎಂದು ಕನ್ನಡ ಗ್ರಾಹಕರ ಕೂಟದ ಅರುಣ್​​ ಜಾವಗಲ್​​​ ಕರೆ ಹೇಳಿದ್ದಾರೆ.

ಹಿಂದಿ ಹೇರಿಕೆ ಮೆಟ್ಟಿ ನಿಲ್ಲಲು ನಾಲಕ್ಕು ಸೂತ್ರಗಳು!ಹಿಂದಿ ಹೇರಿಕೆ ಮೆಟ್ಟಿ ನಿಲ್ಲಲು ನಾಲಕ್ಕು ಸೂತ್ರಗಳು!

ಹಿಂದಿ ದಿವಸ್ ಅಥವಾ ರಾಷ್ಟ್ರಭಾಷಾ ದಿವಸ್ ಎಂಬುದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ಇದಾಗಿದ್ದು, ಸರಕಾರಿ ಕಚೇರಿಗಳು, ಸಂಸ್ಥೆಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಆಚರಣೆ ಮಾಡಲಾಗುತ್ತದೆ.

English summary
Hindi diwas opposed: Karnataka Navnirman Sena members scorched hindi name plate in Krantiveera Sangolli Rayanna(KSR) Railway Station, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X