ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಮುಸಲ್ಮಾನರ ಏರಿಯಾ ಎಂದರೆ ಪಾಕಿಸ್ತಾನವೇ? ಸಿ.ಟಿ ರವಿ ಪ್ರಶ್ನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅದ್ದೂರಿಯಾಗಿ ದೇಶದಾದ್ಯಂತ ಆಚರಿಸಲಾಗಿದೆ. ಈ ವೇಳೆ ಕರ್ನಾಟಕದಲ್ಲಿ ನಡೆದ ಕೆಲವು ಬೆಳವಣಿಗೆಗಳು ಸಾವರ್ಕರ್ ಮತ್ತು ಟಿಪ್ಪು ಭಾವಚಿತ್ರ ಹರಿದ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಮುಸಲ್ಮಾನರ ಏರಿಯಾ ಎಂದರೆ ಪಾಕಿಸ್ತಾನವೇ? ಎಂದು ಪ್ರಶ್ನಿಸಿದ್ದಾರೆ.

ಇಡೀ ದೇಶ ಕನ್ಯಾಕುಮಾರಿ ಇಂದ ಕಾಶ್ಮೀರ ವರೆಗೆ ಸ್ವತಂತ್ರೋತ್ಸವ ಅಮೃತ ಮಹೋತ್ಸವದಲ್ಲಿ. ರಾಷ್ಟ್ರ ಭಕ್ತಿ ಭಾವನೆಯೊಂದಿಗೆ ಮನೆ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸೋ ಮೂಲಕ ಭಕ್ತಿ ಮೆರೆದಿದ್ದಾರೆ. ಇಡೀ ದೇಶದಲ್ಲಿ ರಾಷ್ಟ್ರೀಯ ಹಬ್ಬವಾಗಿ ಮನೆಯಲ್ಲಿ ಆಚರಿಸಿದ್ದಾರೆ.

ಅಮೃತ ಮಹೋತ್ಸವದಲ್ಲಿ ಅಮೃತ ಸಂಕಲ್ಪ ಮಾಡಿದ್ದಾರೆ. ಪ್ರಧಾನಿಯಿಂದ ಹಿಡಿದು ಸಾಮಾನ್ಯ ವ್ಯಕ್ತಿ ವರೆಗೂ ಗುರಿಯನ್ನ ಇಟ್ಟುಕೊಂಡಿರೋದು ಸ್ವಾಗತಿಸ್ತೇನೆ. ಒಂದು ದೇಶದ ಸ್ವಾತಂತ್ರ್ಯ ಉಳಿವಿಗೆ ನಾವೆಲ್ಲ ತೆರಬೇಕಾದ ಬೆಲೆ ಜಾಗರೂಕತೆ ಮಾತ್ರವಾಗಿದೆ ಎಂದು ಸಿಟಿ ರವಿ ಹೇಳಿದ್ದಾರೆ.

ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಕೊಟ್ಟ ಮದನ್ ಲಾಲ್ ದಿಂಗ್ರಾನಂತಹ ಶೋಕಿಲಾಲನಾಗಿದ್ದ ನವ ಯುವಕನನ್ನ ರಾಷ್ಟ್ರ ಭಕ್ತನಾಗಿ ಬದಲಾಯಿಸಿ. ಅಭಿನವ ಭಾರತ ಅನ್ನೋ ಸಂಘಟನೆ ಕಟ್ಟಿ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಎರಡು ಕರಿನೀರಿನ ಶಿಕ್ಷೆ, 50 ವರ್ಷಗಳ ಧೀರ್ಘಾವದಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಅಂಡಮಾನ್ ಸೆರೆಮನೆಯಲ್ಲಿ ನರಕ ಯಾತನೆ ಅನುಭವಿಸಿ, ಬಂಡೆಯನ್ನೇ ಲೇಖನಿಯಾಗಿಸಿ, ಜೈಲಿನ ಗೋಡೆಯನ್ನೇ ಹಾಳೆಯಾಗಿಸಿ ದೇಶ ಗೀತೆ ಬರೆದ ವೀರ ಸಾವರ್ಕರ್‌ರನ್ನು ಕೆಲ ಮತೀಯ ಸಂಘಟನೆಗಳು, ಕೆಲ ಓಲೈಕೆ ರಾಜಕಾರಣವನ್ನೇ ಸಿದ್ಧಾಂತ ಮಾಡಿಕೊಂಡ ವ್ಯಕ್ತಿಗಳು, ಸಾವರ್ಕರ್ ನಿಜ ವ್ಯಕ್ತಿತ್ವ ಅರಿಯದೆ ಅಪಮಾನಿಸ್ತಿರೋದನ್ನ ಖಂಡಿಸ್ತೇನೆ. ಸಾವರ್ಕರ್ ಬಗ್ಗೆ ವಾಜಪೇಯಿ ಹೇಳಿದ್ದು ನನ್ನ ಕಿವಿಯಲ್ಲಿ ಗುನುಗುನಿಸ್ತಿದೆ. ಸಾವರ್ಕರ್ ಅಂದರೆ ಕಾರುಣ್ಯ, ಕಿಚ್ಚು, ಸಮರ್ಪಣೆ, ಆದರ್ಶ ಅಂತ ವಾಜಪೇಯಿ ಹೇಳಿದ್ದರು. ಇಂದಿರಾಗಾಂಧಿ ಅವರು ಕಾಂಗ್ರೆಸ್ ಪಾರ್ಟಿ ಪ್ರತಿನಿಧಿಸಿದವರು. 25-8-1970ರಲ್ಲಿ ಸಾವರ್ಕರ್ ಕುರಿತ ಅಂಚೆ ಚೀಟಿ ಜಾರಿಗೆ ತಂದರು. 2003ರಲ್ಲಿ ಸೆಂಟ್ರಲ್ ಹಾಲ್‌ನಲ್ಲಿ ಅವರ ಭಾವಚಿತ್ರ ಅನಾವರಣಗೊಳಿಸಲಾಯ್ತು ಎಂಬುದನ್ನು ಸಿ.ಟಿ ರವಿ ಸ್ಮರಿಸಿದರು.

 ಮುಸ್ಲಿಂ ಲೀಗ್ ಸಂಚನ್ನು ವಿರೋಧಿಸಿದ್ದ ಸಾವರ್ಕರ್

ಮುಸ್ಲಿಂ ಲೀಗ್ ಸಂಚನ್ನು ವಿರೋಧಿಸಿದ್ದ ಸಾವರ್ಕರ್

ಸಾವರ್ಕರ್ ದೂರ ದೃಷ್ಟಿ. ಭಾರತಕ್ಕೆ ಸ್ವಾತಂತ್ರ್ಯ ಸಿಗೋದು ಖಚಿತ, ಸ್ವಾತಂತ್ರ್ಯ ನಂತರ ದೇಶ ಉಳಿಸಲು ಸೈನ್ಯಕ್ಕೆ ಸೇರಿ ಅಂತ ಕರೆ ನೀಡಿದ್ದರು. ಅದರ ಪರಿಣಾಮ 1948ರಲ್ಲಿ ಪಾಕಿಸ್ತಾನ ಆಕ್ರಮಿಸಿದಾ, ಸಮರ್ಥವಾಗಿದ್ದ ನಮ್ಮ ಸೈನ್ಯ ಪಾಕಿಸ್ತಾನ ಎದುರಿಸಿ ಜಯ ಸಿಕ್ತು.

ಬಹುಜನರಿಗೆ ಸತ್ಯದ ಅರಿವಿಲ್ಲ. ಅದರ ಸಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದ್ದಾರೆ. ತಿರಂಗದಲ್ಲಿ ತ್ರಿವರ್ಣ ಸೇರಬೇಕು ಅಂತ. ಶಾಂತಿ ಕಾಲದಲ್ಲಿ ಇದು ಧರ್ಮ ಚಕ್ರ, ಯುದ್ಧ ಕಾಲದಲ್ಲಿ ಶತ್ರುಗಳಿಗೆ ಸುದರ್ಶನ ಚಕ್ರ ಅಂತ ಸಾವರ್ಕರ್ ಹೇಳಿದ್ದಾರೆ. ಸನಾತನ ಸಂಸ್ಕೃತಿಯ ವೀರ ಯಶೋಗಾಥೆ ಪ್ರೇರೇಪಿಸಿದವರು ವೀರ ಸಾವರ್ಕರ್. ದೇಶ ವಿಭಜನೆ ಬಂದಾಗ ಮುಸ್ಲಿಂ ಲೀಗ್ ಸಂಚನ್ನ ವಿರೋಧಿಸಿದವರು ಸಾವರ್ಕರ್. ಆಗಿನಿಂದ ಮತೀಯ ದೃಷ್ಟಿಗೆ ಬಿದ್ದವರು, ಅಂದಿನಿಂದ ಇಂದಿನವರೆಗೂ ಸಿಲುಕಿದವರು. ಈ ವಿಚಾರ ಪರಮರ್ಶಿಸಿಯೇ ಅಂಬೇಡ್ಕರ್, ತನ್ನ ತಾಟ್ಸ್ ಆಫ್ ಪಾಕಿಸ್ತಾನ್ ಪುಸ್ತಕದಲ್ಲಿ ಬರೆದಿದ್ದಾರೆ. ಯಾವ ಮಾನಸಿಕತೆ ಒಂದು ದೇಶದಲ್ಲಿ ಎರಡು ಮನಸ್ಥಿತಿ ಉಳಿಯಬಾರದು ಎಂದು ಸಿ.ಟಿ ರವಿ ಮಾತನಾಡಿದ್ದಾರೆ.

 ಸಾವರ್ಕರ್ ವಿರೋಧಿಸುವವರು ಸಿದ್ದುವನ್ನು ವಿರೋಧಿಸ್ತಾರೆ

ಸಾವರ್ಕರ್ ವಿರೋಧಿಸುವವರು ಸಿದ್ದುವನ್ನು ವಿರೋಧಿಸ್ತಾರೆ

ಕೆಲ ಐ.ಟಿ ಕಂಪನಿಗಳು ಕೂಡ ಸ್ಲೀಪರ್ ಸೆಲ್‌ಆಗಿವೆ ಅಂತ ಕೆಲ ಮಾದ್ಯಮದಲ್ಲಿ ನೋಡಿದೆ. ಪಾಕಿಸ್ತಾನ ರಾಷ್ಟ್ರ ಗೀತೆ ಹಾಕಿಕೊಂಡು ಮತೀಯತೆ ಮೆರೆದಿವೆ. ಇದರ ಸತ್ಯಾ ಸತ್ಯಾತೆ ಅರಿತು, ಕಾರಣರಾದವರ ಪತ್ತೆ ಹಚ್ಚಬೇಕಾದ ಕೆಲಸ ಗೃಹ ಇಲಾಖೆ ಮಾಡುವಂತೆ ಆಗ್ರಹಿಸುತ್ತೇನೆ. ಈ ಯಾವ ವಿಷಯ ಬಿಡಿಯಾಗಿ ಪರಿಗಣಿಸದೇ, ಗಂಭೀರವಾಗಿ ಪರಿಗಣಿಸಬೇಕು. ಇಂದು ಸಾವರ್ಕರ್ ವಿರೋಧಿಸುವವರು ನಾಳೆ ಗಾಂಧಿನಾ ವಿರೋಧಿಸದೇ ಇರ್ತಾರಾ. ನಾಳೆ ಸಿದ್ದರಾಮಯ್ಯ ಅವರನ್ನೂ ವಿರೋಧಿಸ್ತಾರೆ. ಅವರ ಪ್ರಕಾರ ಸಿದ್ದರಾಮಯ್ಯ ಕೂಡ ಒಬ್ಬ ಕಾಫಿರ್. ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಇಡೋದಕ್ಕೆ ವಿರೋಧ ಆದರೆ, ಮುಂದೇನು ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ.

 ಕಾಂಗ್ರೆಸ್‌ಗೆ ಸವಾಲ್ ಹಾಕಿದ ಸಿ.ಟಿ ರವಿ

ಕಾಂಗ್ರೆಸ್‌ಗೆ ಸವಾಲ್ ಹಾಕಿದ ಸಿ.ಟಿ ರವಿ

ಟಿಪ್ಪು ಅಪ್ಪ ಕೂಡ ನಮಗೆ ಬ್ರಿಟೀಷರ ಲೆಕ್ಕವೇ, ಮೊದಲು ಬಂದು ಆಕ್ರಮಣ ಮಾಡಿದವರು. ಮೊದಲು ಬಂದು ಆಕ್ರಮಣ ಮಾಡಿದವರು ನೆಂಟರಾಗಲು ಸಾಧ್ಯವಿಲ್ಲ. ಮೋಸ ಮಾಡಿ ಅಧಿಕಾರಕ್ಕೆ ಬಂದವರು ಹೈದರಾಲಿ, ಟಿಪ್ಪು. ಹೈದರಾಲಿಗೆ, ಟಿಪ್ಪುಗೆ ಪಟ್ಟ ಕಟ್ಟೋದಾದರೆ.

ಒನಕೆ ಒಬ್ಬವ್ವಗೆ ಯಾವ ಪಟ್ಟ ಕಟ್ತೀರಿ.? ಟಿಪ್ಪು ಅಟ್ಟಾಡಿಸಿದ ಮರಿಗೌಡ ಹೋರಾಡಿದ, ಅವನನ್ನ ದೇಶ ದ್ರೋಹಿ ಅಂತ ಕರೆಯಲಾಗುತ್ತಾ.? ಟಿಪ್ಪು ವಿರುದ್ಧ ಮರಾಠರು ಹೋರಾಟ ಮಾಡಿದ್ದರು, ಅವರಿಗೆ ದೇಶ ದ್ರೋಹಿ ಅಂತ ಪಟ್ಟ ಕಟ್ಟಲು ಸಾಧ್ಯವಾ.? ಕಾಂಗ್ರೆಸ್ ನವರು ತಾಕತ್ ಇದ್ದರೇ ದೇಶ ದ್ರೋಹಿ ಅಂತ ಕರೆಯಲಿ ಎಂದು ಸವಾಲ್ ಹಾಕಿದ್ದಾರೆ ಸಿ.ಟಿ ರವಿ.

 ಟಿಪ್ಪುವಿನ ಪೋಸ್ಟರ್ ಹಾಕಿದ್ದಕ್ಕೆ ಆಕ್ರೋಶ

ಟಿಪ್ಪುವಿನ ಪೋಸ್ಟರ್ ಹಾಕಿದ್ದಕ್ಕೆ ಆಕ್ರೋಶ

ಮುಸಲ್ಮಾನರ ಏರಿಯಾ ಎಂದರೆ ಪಾಕಿಸ್ತಾನವೇ? ಇಂದು ಸಾವರ್ಕರ್ ವಿರೋಧಿಸುವವರು ನಾಳೆ ಗಾಂಧಿ, ಅಂಬೇಡ್ಕರ್ ರನ್ನೂ ವಿರೋಧಿಸುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಹಾಕಬಾರದು ಎಂಬ ಮಾನಸಿಕತೆಯೇ ಅಪಾಯಕಾರಿ ನಮಗೆ ಬ್ರಿಟಿಷರು ಹೇಗೋ ಟಿಪ್ಪು ಅಪ್ಪ ಕೂಡಾ ಹಾಗೆಯೇ. ಹೈದರಾಲಿ, ಮೊಘಲರು ಮೊದಲು ಬಂದಿದ್ದರು ಎಂಬ ಕಾರಣಕ್ಕೆ ಅವರು ಮನೆಯವರಾಗಲ್ಲ

ಹೈದರಾಲಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಅವರನ್ನು ಸೆರೆಯಲ್ಲಿಟ್ಟು ಆಡಳಿತ ಮಾಡಿದ ಟಿಪ್ಪು, ಹೈದರಾಲಿಗೆ ದೇಶಭಕ್ತ ಪಟ್ಟ ಕಟ್ಟುವುದಾದರೆ ಮಹಾರಾಣಿ ಲಕ್ಷ್ಮಮ್ಮಣ್ಣಿ, ಒನಕೆ ಓಬವ್ವ, ಮದಕರಿ ನಾಯಕರಿಗೆ ಯಾವ ಪಟ್ಟ ಕಟ್ಟುತ್ತಾರೆ? ಹಾಗಾದರೆ ಟಿಪ್ಪು ವಿರುದ್ಧ ಹೋರಾಡಿದ ಮರಾಠರಿಗೆ ಕಾಂಗ್ರೆಸ್ ದೇಶ ದ್ರೋಹಿ ಪಟ್ಟ ಕಟ್ಟುತ್ತಾ? ಟಿಪ್ಪುವಿನ ವಿರುದ್ಧದ ಹೋರಾಟ ಕೂಡಾ ಸ್ವಾತಂತ್ರ್ಯ ಹೋರಾಟವೇ ಎಂದು ಕಾಂಗ್ರೆಸ್ ಟಿಪ್ಪು ಫೋಟೋವನ್ನು ಹಾಕಿದ್ದಕ್ಕೆ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.

Recommended Video

ವಿದೇಶಿ ಲೀಗ್ ನಲ್ಲಿ ಭಾಗಿಯಾಗ್ತಿರೋ ಧೋನಿಗೆ BCCI ಕೊಡ್ತು ಬಿಗ್ ಶಾಕ್! | OneIndia Kannada

English summary
Independence Day Amrit Mahotsava was celebrated with grandeur all over the country. At this time, BJP National General Secretary CT Ravi has lashed out at some of the developments in Karnataka regarding the defacement of Savarkar and Tipu's portraits. Is Pakistan a Muslim area? Asked that. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X