ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ ಎಂ ಕೃಷ್ಣ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇಕೆ?

|
Google Oneindia Kannada News

ಬೆಂಗಳೂರು, ಜನವರಿ 01: ಕರ್ನಾಟಕ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಡಿಕೆ ಶಿವಕುಮಾರ್ ಅವರ ರಾಜಕೀಯ ಗುರು ಎಂದೇ ಕರೆಸಿಕೊಂಡ ಎಸ್ ಎಂ ಕೃಷ್ಣ ಅವರನ್ನು ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದು ಏಕೆ? ಲೋಕಸಭಾ ಚುನಾವಣೆಯ ಹೊತ್ತಲ್ಲಿ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಘಟನೆಯೊಂದು ಘಟಿಸಲಿದೆಯಾ?

ಇದೇನಿದು..? ಮತ್ತೆ ಕಾಂಗ್ರೆಸ್ಸಿಗೆ ಬರುತ್ತಾರಾ ಎಸ್ ಎಂ ಕೃಷ್ಣ..?!ಇದೇನಿದು..? ಮತ್ತೆ ಕಾಂಗ್ರೆಸ್ಸಿಗೆ ಬರುತ್ತಾರಾ ಎಸ್ ಎಂ ಕೃಷ್ಣ..?!

ಖಂಡಿತ ಇಲ್ಲ, ಡಿಕೆಶಿ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿದ್ದು ಕೇವಲ ಹೊಸ ವರ್ಷದ ಶುಭಾಶಯ ತಿಳಿಸುವುದಕ್ಕೆ ಎನ್ನಲಾಗಿದೆ. ಜೊತೆಗೆ ತಮ್ಮ ರಾಜಕೀಯ ಗುರುವಿನ ಆಶೀರ್ವಾದವನ್ನೂ ಡಿಕೆಶಿ ಪಡೆದಿದ್ದಾರೆ.

Karnataka Minister DK Shivakumar meets SM Krishna

ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿ 2017 ರ ಮಾರ್ಚ್ ತಿಂಗಳಿನಲ್ಲ ಎಸ್ ಎಂ ಕೃಷ್ಣ ಅವರು ಬಿಜೆಪಿ ಸೇರಿದ್ದರು. ಆದರೆ ಅದಾದ ನಂತರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಾಗಲೀ, ಉಪಚುನಾವಣೆಗಳ ಸಮಯದಲ್ಲಾಗಲೀ ಎಸ್ ಎಂ ಕೃಷ್ಣ ಅವರನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನಲಾಗುತ್ತಿತ್ತು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಬಿಜೆಪಿಯಲ್ಲೂ ಮೂಲೆಗುಂಪಾದ ಎಸ್ ಎಂ ಕೃಷ್ಣ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಜಾರುತ್ತಾರಾ?

ಕೃಷ್ಣ ಮತ್ತೆ ಕಾಂಗ್ರೆಸ್ಸಿಗೆ: 'ಗೊತ್ತಿಲ್ಲ' ಎಂದ ಸಿದ್ದು, ಸುಳ್ಳು ಎಂದ ಬಿಜೆಪಿ!ಕೃಷ್ಣ ಮತ್ತೆ ಕಾಂಗ್ರೆಸ್ಸಿಗೆ: 'ಗೊತ್ತಿಲ್ಲ' ಎಂದ ಸಿದ್ದು, ಸುಳ್ಳು ಎಂದ ಬಿಜೆಪಿ!

ಡಿಕೆಶಿ-ಎಸ್ ಎಂ ಕೃಷ್ಣ ಭೇಟಿಯಲ್ಲಿ ಏನಿಲ್ಲ ಎಂದು ಹೇಳಿದರೂ ಬಿಜೆಪಿ ವಲಯದಲ್ಲಂತೂ ತಲ್ಲಣ ಈಗಾಗಲೇ ಆರಂಭವಾಗಿದೆ.

English summary
Bengaluru: Karnataka Minister DK Shivakumar meets BJP leader and former External Affairs Minister SM Krishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X