ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ

|
Google Oneindia Kannada News

ಬೆಂಗಳೂರು,ಫೆಬ್ರವರಿ 04: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರತಾಪ್ ಚಂದ್ರ ಶೆಟ್ಟಿ ಇಂದು ರಾಜೀನಾಮೆ ನೀಡಿದ್ದಾರೆ.

ಕಳೆದ ಬಾರಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಪದಚ್ಯುತಿಗೊಳಿಸಲೆಂದೇ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆದರೆ ಪರಿಷತ್‌ನಲ್ಲಿ ಹಿಂದೆದೂ ನೋಡಿರದ ರೀತಿಯ ಅಹಿತಕರ ಘಟನೆಗಳು ನಡೆದಿದ್ದವು.

ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆಗೆ ಉಸ್ತುವಾರಿಗಳ ನೇಮಕಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆಗೆ ಉಸ್ತುವಾರಿಗಳ ನೇಮಕ

ಇದು ರಾಜಕೀಯ ಹಾಗೂ ಸಾಮಾಜಿಕವಾಗಿ ಸಾಕಷ್ಟು ಟೀಕೆಗೆ ಕಾರಣವಾಗಿತ್ತು.ಏತನ್ಮಧ್ಯೆ ಸಭಾಪತಿ ಹಾಗೂ ಉಪಸಭಾಪತ ಸ್ಥಾನಕ್ಕೆ ಬಿಜೆಪಿಗೆ ಬೆಂಬಲ ನೀಡಲು ಜೆಡಿಎಸ್ ಕೂಡ ತಯಾರಿಸೆ ಹೀಗಾಗಿ ಸದನದಲ್ಲಿ ಬಹುಮತ ಕಳೆದುಕೊಂಡಿರುವ ಕಾಂಗ್ರೆಸ್ ಸಭಾಪತಿ ಹುದ್ದೆಯನ್ನು ಹೊಂದುವುದು ತಾರ್ಕಿಕವಾಗಿ ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಭಾಪತಿ ಹುದ್ದೆಗೆ ಪ್ರತಾಪ್‌ ಚಂದ್ರಶೆಟ್ಟಿ ಗುರುವಾರ ರಾಜೀನಾಮೆ ನೀಡಿದ್ದಾರೆ.

Karnataka Legislative Council Chairman Pratap Chandra Shetty Resigns

ಈ ಶುಕ್ರವಾಗಿ ಉಪಸಭಾಪತಿಯು ಸದನ ಸಮಿತಿ ಸಭೆ ಕರೆದು ಸದನವನ್ನು ಎರಡು ದಿನ ಮುಂದುವರೆಸುವ ಅವಕಾಶ ಕೇಳುವ ಸಾಧ್ಯತೆ ಇದೆ.

ಇನ್ನೊಂದೆಡೆ ಸಭಾಪತಿ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಉಪಸಭಾಪತಿ ಹುದ್ದೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಇದು ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಆಂತರಿಕ ಒಪ್ಪಂದ ಎಂದು ಹೇಳಲಾಗಿದೆ. ಸಭಾಪತಿ ಹುದ್ದೆಗೆ ಜೆಡಿಎಸ್‌ನಿಂದ ಬಸವರಾಜ್ ಹೊರಟ್ಟಿ ಹೆಸರು ಕೇಳಿಬರುತ್ತಿದೆ.

ಮಂಗಳವಾರದ ವೇಳೆಗೆ ಪರಿಷತ್ ಗೆ ನೂತನ ಸಭಾಪತಿ ಯ್ಕೆಯಾಗಲಿದೆ.ನಾಳೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಿ ನೂತನ ಸಭಾಪತಿ ಸಂಬಂಧ ಚರ್ಚೆ ನಡೆಸಲಾಗುತ್ತೇವೆ.

Recommended Video

ರಾಹುಲ್ ತೆವಾಟಿಯ ಅವರು ಹೊಸ ಇನ್ನಿಂಗ್ಸ್ ಗೆ ಕಾಲಿಟ್ಟರು | Oneindia Kannada

ಸಭಾಪತಿ ಯಾರಾಗಬೇಕೆಂಬ ಬಗ್ಗೆ ಸಿಎಂ ನಾಳೆ ನಿರ್ಧಾರ ಮಾಡ್ತಾರೆ, ಪರಿಷತ್ ಕಲಾಪ 2 ದಿನ ವಿಸ್ತರಿಸಲು ಕೋರಲಾಗಿದೆ. ಉಪಸಭಾಪತಿ ನಾಳೆ ಬಿಎಸಿ ಸಭೆ ಕರೆದು ಕಲಾಪ ವಿಸ್ತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಆರ್ ಅಶೋಕ್ ಹೇಳಿದ್ದಾರೆ.

English summary
After Huge Political Drama Pratap Chandra Shetty Has Resigned As Karnataka Legislative Council Chairman On Thursday, February 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X