ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಬರ್ಬನ್ ರೈಲು ಯೋಜನೆ: ರಾಜ್ಯ ಸರ್ಕಾರ ವಿಧಿಸಿದ 19 ಷರತ್ತುಗಳು

|
Google Oneindia Kannada News

ಬೆಂಗಳೂರು, ಜನವರಿ 21: ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ 19 ಷರತ್ತುಗಳನ್ನು ವಿಧಿಸಿದೆ. ಸಚಿವ ಸಂಪುಟದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯ ಕರಡು ಕಾರ್ಯಸಾಧ್ಯತಾ ವರದಿಗೆ ಒಪ್ಪಿಗೆ ನೀಡಿದ ರಾಜ್ಯ ಸರ್ಕಾರ ನಂತರದಲ್ಲಿ ಯೋಜನೆ ಅನುಷ್ಠಾನಕ್ಕೆ ನೈಋತ್ಯ ರೈಲ್ವೆಗೆ 19 ಷರತ್ತುಗಳನ್ನು ವಿಧಿಸಿದೆ.

ಬಿನ್ನಿಮಿಲ್ ಪ್ರದೇಶದಲ್ಲಿ 3 ಎಕರೆ ಖಾಸಗಿ ಭೂಮಿ ಭೋಗ್ಯಕ್ಕೆ ಪಡೆದುಕೊಳ್ಳುವ ಪ್ರಸ್ತಾವನೆಯ ಕೈಬಿಡುವಂತೆ ನೈಋತ್ಯ ರೈಲ್ವೆಗೆ ರಾಜ್ಯ ಸರ್ಕಾರ ಸೂಚಿಸಿದೆ. ಬದಲಾಗಿ ನಗರದ ಹೊರ ವಲಯದಲ್ಲಿ ಕಾಸ್ಟಿಂಗ್ ಯಾರ್ಡ್‌ಗೆ ಭೂಮಿ ಪಡೆದುಕೊಳ್ಳಲು ಇಲಾಖೆಗೆ ತಿಳಿಸಿದೆ.

ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ

ಎಲಿವೇಟೆಡ್ ಮಾರ್ಗಕ್ಕಾಗಿ ಬಿನ್ನಿಮಿಲ್ ಪ್ರದೇಶದಲ್ಲಿ ಕಾಸ್ಟಿಂಗ್ ಯಾರ್ಡ್‌ ನಿರ್ಮಾಣಕ್ಕೆ 72 ಕೋಟಿ ರೂ ನೀಡಿ 3ಎಕರೆ ಖಾಸಗಿ ಭೂಮಿ ಭೋಗ್ಯಕ್ಕೆ ಪಡೆದುಕೊಳ್ಳುವ ಪ್ರಸ್ತಾವನೆ ಇದೆ.

ರೈಟ್ಸ್ ಪ್ರಸ್ತಾವಿತ ಉಪನಗರ ರೈಲು ಕಾರಿಡಾರ್‌ಗಳು ಯಾವುವು?

ರೈಟ್ಸ್ ಪ್ರಸ್ತಾವಿತ ಉಪನಗರ ರೈಲು ಕಾರಿಡಾರ್‌ಗಳು ಯಾವುವು?

-ಕೆಂಗೇರಿ-ವೈಟ್‌ಫೀಲ್ಡ್-35.47 ಕಿ.ಮೀ
-ಬೆಂಗಳೂರುನಗರ-ರಾಜಾನುಕುಂಟೆ-24.88 ಕಿ.ಮೀ
- ನೆಲಮಂಗಲ-ಬೈಯಪ್ಪನಹಳ್ಳಿ-38.94ಕಿ.ಮೀ
-ಹೀಲಲಿಗೆ-ದೇವನಹಳ್ಳಿ-61.24 ಕಿ.ಮೀ

ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌! ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!

ಪ್ರತಿ 1-2 ಕಿ.ಮೀಗೆ ನಿಲ್ದಾಣ ಬೇಡ ಎನ್ನುವ ವಾದ

ಪ್ರತಿ 1-2 ಕಿ.ಮೀಗೆ ನಿಲ್ದಾಣ ಬೇಡ ಎನ್ನುವ ವಾದ

ವರದಿ ಅನ್ವಯ ಪ್ರತಿ 1ರಿಂದ 2 ಕಿ.ಮೀ ಅಂತರದಲ್ಲಿ ಒಟ್ಟು 81 ನಿಲ್ದಾಣಗಳು ಬರಲಿವೆ ಎಂದು ತಿಳಿಸಲಾಗಿದೆ. ಕೆಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇರುವುದರಿಂದ 4-5 ಕಿ.ಮೀಗೆ ಒಂದು ನಿಲ್ದಾಣವಿರಲಿ. 1-2 ಕಿ.ಮೀಗೆ ನಿಲ್ದಾಣವಿದ್ದರೆ ಪ್ರಯಾಣ ಸಮಯವೂ ಹೆಚ್ಚಲಿದೆ. ಜತೆಗೆ 180 ಮೀ ಪ್ಲಾಟ್‌ಫಾರಂ ಬದಲಾಗಿ 8 ರಿಂದ 12 ಬೋಗಿಗಳು ನಿಲ್ಲುವ 190 ಮೀಗಿಂತಲೂ ಉದ್ದದ ಪ್ಲಾಟ್‌ಫಾರಂ ನಿರ್ಮಿಸಲು ತಿಳಿಸಿದೆ.

ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ

ಹೊಸ ಷರತ್ತುಗಳನ್ನು ವಿಧಿಸಲು ಕಾರಣವೇನು?

ಹೊಸ ಷರತ್ತುಗಳನ್ನು ವಿಧಿಸಲು ಕಾರಣವೇನು?

ಸಬರ್ಬನ್ ಯೋಜನೆ ಜಾರಿಗೆ 19 ಷರತ್ತುಗಳನ್ನು ವಿಧಿಸಿರುವುದರಿಂದ ಇಡೀ ಯೋಜನೆಯೇ ಹಳಿ ತಪ್ಪುತ್ತದೆ ಎಂದು ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸಂಸದ ಪಿಸಿ ಮೋಹನ್ ಪತ್ರಬರೆದಿದ್ದಾರೆ. ಏಕಾಏಕಿ ಒಪ್ಪಲಾಗಂದಂತಹ ಷರತ್ತುಗಳನ್ನು ವಿಇಸಿರುವ ಕಾರಣ ಮತ್ತು ಔಚಿತ್ಯವೇನು ಎನ್ನುವುದು ರಾಜ್ಯ ಸರ್ಕಾರ ಜನರಿಗೆ ವಿವರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಇತರೆ ನಿಬಂಧನೆಗಳೇನು?

ಇತರೆ ನಿಬಂಧನೆಗಳೇನು?

-ತುಮಕೂರು, ದೊಡ್ಡಬಳ್ಳಾಪುರ, ಹೊಸೂರು, ಮಾಲೂರು, ಬಂಗಾರಪೇಟ, ಬಿಡದಿ, ರಾಮನಗರಕ್ಕೂ ರೈಲು ಸಂಪರ್ಕ.
-ಮೆಜೆಸ್ಟಿಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಮತ್ತು ವಿಮಾನ ನಿಲ್ದಾಣ ಸಮೀಪ ಹೊಸ ರೈಲು ನಿಲ್ದಾಣಗಳು.
-ಕೆಂಗೇರಿ-ವೈಟ್‌ಫೀಲ್ಡ್, ಸೋಲದೇವನಹಳ್ಳಿ-ನೆಲಮಂಗಲ ಕಾರಿಡಾರ್ ಮೆಟ್ರೋ ಮಾರ್ಗಕ್ಕೆ ಸಮಾನಾಂತರವಾಗಿರುವ ಕಾರಣ ಉಪನಗಗರ ರೈಲು ಯೋಜನೆಯಿಂದ ಕೈಬಿಡಿ.
-ಉಪನಗರ ರೈಲು ನಿಲ್ದಾಣ ಹಾಗೂ ಸ್ಥಳೀಯ ಮೆಟ್ರೋ ನಿಲ್ದಾಣ ನಡುವೆ ಸೂಕ್ತ ಪಾದಚಾರಿ ಮಾರ್ಗ.
-ಯೋಜನೆಗೆ ಅಗತ್ಯವಿರುವ ಸರ್ಕಾರಿ ಭೂಮಿ ಪ್ರತಿ ಎಕರೆಗೆ 1 ರೂಗೆ ಭೋಗ್ಯಕ್ಕೆ.
-ರೈಲು ಮಾರ್ಗದ ಕೊನೆಯಲ್ಲಿ ಡಿಪೋ ನಿರ್ಮಾಣ
-ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ಬದಲಾಗಿ ಮೈನ್ ಲೇನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ಕೋಚ್.
-ಕಾಮಗಾರಿ ಸಂದರ್ಭದಲ್ಲಿ ಸಾಲದ ಬಡ್ಡಿ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸಬೇಕು.

English summary
After the detailed project report of the suburban rail network project was given in-principle approval by the Karnataka cabinet on January 10, the State has now issued a nine-page Government Order stating that its approval of the Rs 23,093 crore project is subject to fulfilment of 19 conditions that it has stipulated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X