ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಟ್ಯ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಎಡಿಎ ರಂಗಮಂದಿರ

|
Google Oneindia Kannada News

ಬೆಂಗಳೂರು, ನವೆಂಬರ್, 17: ಬೆಂಗಳೂರಿನ ಜೆಸಿ ರಸ್ತೆಯ ಎಡಿಎ ರಂಗಮಂದಿರದಲ್ಲಿ ನವೆಂಬರ್ 20 ರಂದು ನಾಟ್ಯ ಸಂಭ್ರಮ. ಕರ್ನಾಟಕ ಕಲಾಶ್ರೀ ಗುರು ಕಿರಣ್ ಸುಬ್ರಮಣಿಯನ್ ಮತ್ತು ಸಂಧ್ಯಾ ಕಿರಣ್ ಅವರ ಮಾರ್ಗದರ್ಶನದಲ್ಲಿ 9 ನೃತ್ಯ ಪಟುಗಳು ' ಮಾನಿನಿ' ಹೆಸರಿನಲ್ಲಿ ನಾಟ್ಯ ಪ್ರದರ್ಶನ ನೀಡಲಿದ್ದಾರೆ.

ಶಿವರಂಜಿನಿ ಹರೀಶ್, ಪ್ರತಿಭಾ ರಾಮಸ್ವಾಮಿ, ಪ್ರೀತಿ ಬಸವರಾಜ್, ಸ್ನೇಹಾ ದೇವಾನಂದನ್, ಅರಣ್ಯ ನಾರಿಯನ್, ಮಾತಂಗಿ ಪ್ರಸನ್ನ, ಅಪರ್ಣಾ ಶಾಸ್ತ್ರೀ, ಶ್ರುತಿ ಗೋಪಾಲ್, ರಸಿಕಾ ಕಿರಣ್ ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ.[ಈ ಬಾರಿಯ ಸಂಗೀತ ಅಕಾಡೆಮಿ ಪ್ರಶಸ್ತಿಗಳು ಯಾರಿಗೆ ಸಂದಿವೆ?]

Karnataka Kalashree Kiran Subramanyam presents Dance feature Maanini

ಮಹಿಳೆಯ ಶಕ್ತಿ, ಸಾಮರ್ಥ್ಯವನ್ನು ಪ್ರತಿಬಿಂಬಿಸುವ 'ಮಾನಿನಿ'ಗೆ ಗುರು ಕಿರಣ್ ಸುಬ್ರಮಣಿಯನ್ ಮತ್ತು ಸಂಧ್ಯಾ ಕಿರಣ್ ಅವರ ಕೋರೊಯೋಗ್ರಫಿ ಮಾಡಿದ್ದಾರೆ. ಎಡಿಎ ರಂಗಮಂದಿರದಲ್ಲಿ ನವೆಂಬರ್ 20 ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

'ರಸಿಕ' ಹೆಸರಿನಲ್ಲಿ ಕಿರಣ್ ಅವರು ನಾಟ್ಯಾಲಯವೊಂದನ್ನು ನಡೆಸುತ್ತಿದ್ದಾರೆ. ಕಳೆದ 25 ವರ್ಷದಿಂದ ನೃತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಕಿರಣ್, ಪಂಡಿತ್ ರವಿಶಂಕರ್ ಅವರೊಂದಿಗೂ ಕೆಲಸ ಮಾಡಿದ್ದಾರೆ. ಅಲ್ಲದೇ ಅನೇಕ ಟಿವಿ ಶೋ ಗಳನ್ನು ನಡೆಸಿಕೊಟ್ಟಿದ್ದಾರೆ.[ಈ ಬಾಲೆ ಪಂಚಮಿ ಪಂಚಕ್ಷೇತ್ರದ ಸಾಧಕಿ]

ದೇಶ ವಿದೇಶದಲ್ಲಿ ಕಾರ್ಯಕ್ರಮ ನೀಡಿ ಹೆಸರು ಗಳಿಸಿರುವ ಕಿರಣ್ ಸುಬ್ರಮಣಿಯನ್ ಅವರ ಮಾರ್ಗದರ್ಶನದಲ್ಲಿ 9 ಜನ ನೃತ್ಯ ಪಟುಗಳು ತಮ್ಮ ಪ್ರತಿಭೆ ಹೊರ ಹಾಕಲಿದ್ದಾರೆ. ಹೆಚ್ಚಿನ ಮಾಹಿತಿಗೆ 9900847382 ಸಂಪರ್ಕಿಸಬಹುದು.

English summary
Karnataka Kalashree Gurus Kiran Subramanyam and Sandhya Kiran present ‘MAANINI’ featuring nine brilliant young dancers - Shivaranjani Harish, Prathibha Ramaswamy, Preethi Bharadwaj, Sneha Devanandan, Aranya Narain, Matangi Prasan, Aparna Shastry, Shruti Gopal and Rasika Kiran from Bangalore - on Friday, November 20th 2015 at 6.30pm at A. D. A. Rangamandira, J. C. Road, Bengaluru. Conceptualised, choreographed and directed by Guru Kiran Subramanyam, MAANINI is intended as a revival of some of the most magnificent choreographies of Kiran Subramanyam. The production glorifies the essence of the feminine energy and epitomizes the qualities of beauty, grace and elegance of the feminine form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X