• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಮಾರಸ್ವಾಮಿ ವಿರುದ್ಧವೇ ಬಾಣ ತಿರುಗಿಸಿದ ರೆಬೆಲ್ ಶಾಸಕ ವಿಶ್ವನಾಥ್

|

ಬೆಂಗಳೂರು, ಜುಲೈ 6: ರಾಜ್ಯ ರಾಜಕೀಯದ ಹೈಡ್ರಾಮಾ ಮತ್ತಷ್ಟು ತೀವ್ರವಾಗಿದೆ. ರಾಜೀನಾಮೆಗೆ ಮುಂದಾಗುತ್ತಿರುವ ಶಾಸಕರ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರ ಸಂಖ್ಯೆ ಇದರೊಂದಿಗೆ ಸೇರುವ ಸಾಧ್ಯತೆ ಇದೆ.

ಇಂದು ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಒಟ್ಟು 14 ಜನ ಶಾಸಕರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದೇವೆ. ಆನಂತರದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಅವರ ಗಮನಕ್ಕೂ ತಂದಿದ್ದೇವೆ ಎಂದು ಎಚ್ ವಿಶ್ವನಾಥ್ ತಿಳಿಸಿದ್ದಾರೆ.

ಇನ್ನಡೆರಡು ದಿನಗಳಲ್ಲಿ ಇನ್ನಷ್ಟು ಶಾಸಕರು ರಾಜೀನಾಮೆ ನೀಡಲಿದ್ದು, 22 ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. '11 ಶಾಸಕರು ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಅವರ ರಾಜೀನಾಮೆ ಕುರಿತು ಮಂಗಳವಾರ ಪರಿಶೀಲನೆ ನಡೆಸಲಿದ್ದೇನೆ' ಎಂದು ಸ್ಪೀಕರ್ ರಮೇಶ್ ಹೇಳಿದ್ದರು.

14 ಶಾಸಕರ ರಾಜೀನಾಮೆ, ದೋಸ್ತಿ ಸರ್ಕಾರ ಗಡಗಡ : ಕ್ಷಣ ಕ್ಷಣದ ಮಾಹಿತಿ Live Updates

ಆದರೆ, ಆನಂದ್ ಸಿಂಗ್ ಅವರು ಸೇರಿದಂತೆ ಒಟ್ಟು 13 ಶಾಸಕರು ರಾಜೀನಾಮೆ ನೀಡಿರುವುದಾಗಿ ವಿಶ್ವನಾಥ್ ತಿಳಿಸಿದ್ದಾರೆ. ಕಾಂಗ್ರೆಸ್ ಜತೆ ಜೆಡಿಎಸ್ ಸೇರಿ ಸರ್ಕಾರ ರಚಿಸಿತ್ತು. ಹಾಗೆಯೇ ರಾಜೀನಾಮೆ ವಿಚಾರದಲ್ಲಿಯೂ ಈ 'ದೋಸ್ತಿ' ಮುಂದುವರಿದಿದೆ. 14 ಬಂಡಾಯ ಶಾಸಕರಲ್ಲಿ ಜೆಡಿಎಸ್‌ನ ಮೂವರು ಶಾಸಕರು ಕೂಡ ಸೇರಿದ್ದಾರೆ.

ಈ ದಿಢೀರ್ ಬೆಳವಣಿಗೆಗೆ ಸ್ಪಷ್ಟ ಕಾರಣಗಳೇನು ಎಂಬ ಪ್ರಶ್ನೆಗಳು ಎದುರಾಗಿವೆ. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ ಬಳಿಕ ವಿಶ್ವನಾಥ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ತಮ್ಮ ಮಾತಿನ ವೇಳೆ ವಿಶ್ವನಾಥ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕಡೆಗೇ ಬಾಣದ ತುದಿಯನ್ನು ತೋರಿಸಿದರು.

ಸಿಎಂ ಅಲ್ಲದೆ ಇನ್ಯಾರು?

ಸಿಎಂ ಅಲ್ಲದೆ ಇನ್ಯಾರು?

ನಮ್ಮ ಅಸಮಾಧಾನಕ್ಕೆ ರಾಜೀನಾಮೆಗೆ ಸರ್ಕಾರ ನಡೆಸುವವರು ಕಾರಣ. ನಾನು ಸರ್ಕಾರ ರಚನೆಯಾದಾಗಿಂದಲೂ ಹೇಳುತ್ತಲೇ ಇದ್ದೇನೆ ಬಹಳಷ್ಟು ವಿಚಾರ ಬಹಿರಂಗವಾಗಿ ಹೇಳಿದ್ದೇನೆ ಎಂದು ವಿಶ್ವನಾಥ್ ಹೇಳಿದಾಗ, ಹಾಗಾದರೆ ಸಿಎಂ ಕಾರಣರೇ ಎಂದು ಮಾಧ್ಯಮದವರು ಪ್ರಶ್ನಿಸಿದರು. ಆಗ, 'ಸರ್ಕಾರ ನಡೆಸುತ್ತಿರುವುದು ಸಿಎಂ ಅಲ್ಲದೆ ಇನ್ಯಾರು?' ಎಂದು ಮರುಪ್ರಶ್ನಿಸುವ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರೇ ಕಾರಣ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಸಮ್ಮಿಶ್ರ ಸರ್ಕಾರ ವಿಫಲವಾಗಿದೆ

ಸಮ್ಮಿಶ್ರ ಸರ್ಕಾರ ವಿಫಲವಾಗಿದೆ

ಕ್ಷಿಪ್ರ ಪ್ರಗತಿಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಎರಡೂ ಪಕ್ಷಗಳ ಶಾಸಕರು ತೀರ್ಮಾನ ತೆಗೆದುಕೊಂಡಿದೆ ಎಂದರೆ ಸಮ್ಮಿಶ್ರ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಎರಡೂ ಪಕ್ಷಗಳನ್ನು ಒಟ್ಟಿಗೆ ಕೊಂಡೊಯ್ದು ಸಮನ್ವಯ ಸಾಧಿಸುವ ವಿಚಾರದಲ್ಲಿ ವಿಫಲವಾಗಿದೆ ಎಂದರ್ಥ. ಜನರ ನಿರೀಕ್ಷೆಗಳು ಬಹಳಷ್ಟಿವೆ. ಆದರೆ ಅದನ್ನು ತಲುಪುವಲ್ಲಿ ಸರ್ಕಾರ ಎಡವುದರೊಂದಿಗೆ ಎರಡೂ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವುದರಲ್ಲಿ, ಕಾರ್ಯಕ್ರಮದ ಸರ್ಕಾರದ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಾರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋಗುತ್ತಿರುವುದು ಎಲ್ಲರ ಮನಸಿನಲ್ಲಿ ಬೇಸರ ಉಂಟುಮಾಡಿದೆ ಎಂದರು.

ಕರ್ನಾಟಕದಲ್ಲಿ ರಾಜಕೀಯ ಬೃಹನ್ನಾಟಕ, ಯಡಿಯೂರಪ್ಪ ನಡೆ ಏನು?

ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಕೆ

ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಕೆ

ಇಂದು ನಮ್ಮ ರಾಜೀನಾಮೆ ಅಂಗೀಕಾರ ಮಾಡಬೇಕೆಂದು ಪ್ರತ್ಯೇಕ ಪತ್ರ ಬರೆದು ಸ್ಪೀಕರ್ ಅವರಿಗೆ ವಿನಂತಿಸಿದ್ದೇವೆ. ಕಾನೂನು ಪ್ರಕಾರ ಪರಿಶೀಲಿಸಿ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ನಾವು ಸರ್ಕಾರದ ನಡೆ, ಸರ್ಕಾರದ ಧೋರಣೆ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ರಾಜೀನಾಮೆಯನ್ನು ಸ್ವ ಇಚ್ಛೆಯಿಂದ ಸಲ್ಲಿಸಿದ್ದೇವೆ. ಸ್ಪೀಕರ್ ಅದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

ಶಿಕ್ಷಣ ವ್ಯವಸ್ಥೆ ಬುಡಮೇಲು

ಶಿಕ್ಷಣ ವ್ಯವಸ್ಥೆ ಬುಡಮೇಲು

ಬಹಳ ಪ್ರಮುಖವಾಗಿ ಹೇಳುತ್ತಲೇ ಬಂದಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸತ್ತುಹೋಯ್ತು. ಹಾಗಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ತೀರ್ಮಾನಗಳು ನಡೆದಿವೆ. ಅದನ್ನು ನಡೆಸುವ ಮಂತ್ರಿಗಳ ಆಯ್ಕೆಯಲ್ಲಿಯೂ ಎಡವಿರುವ ಸಣ್ಣ ಉದಾಹರಣೆ ಇದೆ. ಆದರೆ ಇದು ದೊಡ್ಡ ವಿಚಾರ ಎಂದರು.

I am sorry, ಐ ಆಮ್ ಹೆಲ್ಪ್ ಲೆಸ್: ಹೈಕಮಾಂಡಿಗೆ ಸಿದ್ದರಾಮಯ್ಯ?

ಆಪರೇಷನ್ ಕಮಲ ನಿಮ್ಮ ಕಟ್ಟುಕತೆ

ಆಪರೇಷನ್ ಕಮಲ ನಿಮ್ಮ ಕಟ್ಟುಕತೆ

ಬಿಜೆಪಿ ಆಪರೇಷನ್ ಕಮಲ ಎಲ್ಲ ನಿಮ್ಮ ಕಥೆ. ನೀವು ಕಟ್ಟುತ್ತಿರುವ ಕಥೆ. ಆಮ್ ವೆರಿ ಸಾರಿ. ಬಿಜೆಪಿ ಪಾಜೆಪಿ ನಮಗೆ ಗೊತ್ತಿಲ್ಲ. ಯಾವ ಆಪರೇಷನ್ ಇಲ್ಲ. ನಾವೆಲ್ಲ ಹಿರಿಯರು ಇದ್ದೇವೆ. ಯಾವ ಆಪರೇಷನ್ ಮಾಡಲು ಆಗೊಲ್ಲ ಎಂದು ವಿಶ್ವನಾಥ್ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One of the rebel MLAs JDS leader H Vishwanath after meeting governor in Rajbhavan said, coalition government's failure is the reason for thier resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more