ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಎಸ್ ಟಿಗೆ ರಾಜ್ಯ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

ಎಫ್ ಕೆಸಿಸಿಐ ಶತಮಾನೋತ್ಸವ ಭವನ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ; ಜಿಎಸ್ ಟಿ ತಯಾರಿ ವಿಚಾರದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯ ಮುಂದಿದೆ ಎಂದ ಸಿಎಂ.

|
Google Oneindia Kannada News

ಬೆಂಗಳೂರು, ಮೇ 3: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)' ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಎಫ್ ಕೆಸಿಸಿಐ ಶತಮಾನೋತ್ಸವ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಜಿಎಸ್ ಟಿ ಅನುಷ್ಠಾನಗೊಳಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಮಾಡಿಕೊಂಡಿದೆ. ಹಾಗಾಗಿ, ಕೇಂದ್ರ ಸರ್ಕಾರ ಯಾವಾಗ ಬೇಕಾದರೂ ಜಿಎಸ್ ಟಿ ಜಾರಿಗೆ ತಂದರೂ ಅದನ್ನು ಸಮರ್ಪಕವಾಗಿ ರಾಜ್ಯದಲ್ಲಿ ಜಾರಿಗೊಳಿಸಲಾಗುವುದು'' ಎಂದರು.[ಯಾರೇನೇ ಅಂದ್ರೂ ಬ್ರಿಗೇಡ್ ಕೈಬಿಡಲ್ಲ: ಈಶ್ವರಪ್ಪ]

Karnataka is ready to implement GST: Siddaramaiah

''ಜಿಎಸ್ ಟಿ ಅನುಷ್ಠಾನ ಸಮರ್ಪಕವಾಗಿ ಆಗಲು ಈಗಾಗಲೇ ರಾಜ್ಯದ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಜಿಎಸ್ ಟಿ ತಯಾರಿ ವಿಚಾರದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯ ಮುಂದಿದೆ'' ಎಂದು ಅವರು ಹೇಳಿದರು.[ಈಶ್ವರಪ್ಪ ವಿಚಾರದಲ್ಲಿ ಅಮಿತ್ ಶಾ ತಲೆ ಕೆಟ್ಟು ಮೊಸರು ಗಡಿಗೆ]

English summary
Karnataka CM Siddaraiah said that the state government is ready to implement Central Government's ambitious Goods and Service Tax (GST) as it has fully prepared by giving training to its officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X