ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಜಾಬ್ ವಿವಾದ: ಮಧ್ಯಂತರ ಆದೇಶ ಉಲ್ಲಂಘಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಕರ್ನಾಟಕ ಹೈಕೋರ್ಟ್‌ನ ವಿಸ್ತೃತ ಪೀಠವು ಶುಕ್ರವಾರದಂದು ಹಿಜಾಬ್ ವಿವಾದದ ಮೇಲಿನ ಅರ್ಜಿಗಳ ವಿಚಾರಣೆ ನಡೆಸಿದ್ದು, ತನ್ನ ಮಧ್ಯಂತರ ಆದೇಶವನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದೆ.

ಮಧ್ಯಂತರ ಆದೇಶದಿಂದ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳ ಪರ ವಕೀಲರು ಹೈಕೋರ್ಟ್ ಪೀಠದ ಗಮನಕ್ಕೆ ತಂದ ನಂತರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ.

ಹಿಜಾಬ್ ವಿಚಾರಣೆ ಫೆ.21ಕ್ಕೆ ಮುಂದೂಡಿದ ಹೈಕೋರ್ಟ್ಹಿಜಾಬ್ ವಿಚಾರಣೆ ಫೆ.21ಕ್ಕೆ ಮುಂದೂಡಿದ ಹೈಕೋರ್ಟ್

ಕಾಲೇಜುಗಳ ಆವರಣದಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸುವ ಮಧ್ಯಂತರ ಆದೇಶದ ಬಗ್ಗೆ ಸ್ಪಷ್ಟತೆ ನೀಡುವಂತೆ ವಕೀಲ ತಾಹೀರ್ ನ್ಯಾಯಾಲಯದ ಮುಂದೆ ಸಲ್ಲಿಸಿದರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಸ್ಲಿಮರಾಗಿರುವ ಉರ್ದು ಶಾಲೆಗಳಲ್ಲಿಯೂ ಆದೇಶವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.

Karnataka Hijab Controversy: High Court Directs State Government Not to Violate Interim Order

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆದೇಶದ ಮೇರೆಗೆ ಅಂತಹ ಕಾಲೇಜುಗಳು ಮತ್ತು ಶಾಲೆಗಳ ಹೊರಗೆ ಹಿಜಾಬ್ ಮತ್ತು ಬುರ್ಖಾಗಳನ್ನು ತೆಗೆದುಹಾಕಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತಿದೆ ಎಂದು ವಕೀಲ ತಾಹೀರ್ ಹೇಳಿದರು.

ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಹಿಜಾಬ್ ಧರಿಸಿರುವ ಶಿಕ್ಷಕರನ್ನೂ ಅಧಿಕಾರಿಗಳು ತಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಆದೇಶ ಹೊರಡಿಸುತ್ತಿವೆ ಎಂದರು.

ಹಿಜಾಬ್ ವಿವಾದ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ವಸ್ತ್ರ ಸಂಹಿತೆ ಜಾರಿ- ಸರ್ಕಾರದ ಸಮರ್ಥನೆಹಿಜಾಬ್ ವಿವಾದ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ವಸ್ತ್ರ ಸಂಹಿತೆ ಜಾರಿ- ಸರ್ಕಾರದ ಸಮರ್ಥನೆ

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನೇಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ಪೀಠ, ಈ ವಿಷಯದ ಬಗ್ಗೆ ಲಿಖಿತ ಸಲ್ಲಿಕೆಯನ್ನು ನೀಡುವಂತೆ ವಕೀಲರಿಗೆ ಸೂಚಿಸಿತು ಮತ್ತು ಮಧ್ಯಂತರ ಆದೇಶಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಸೂಚಿಸಿತು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮಧ್ಯಂತರ ಆದೇಶದ ಒಂದು ತುಣುಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಏತನ್ಮಧ್ಯೆ, ಧಾರ್ಮಿಕ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ಕಟುವಾಗಿ ವಾದಿಸಿದ ಅರ್ಜಿದಾರರ ಪರ ವಕೀಲರ ವಾದಕ್ಕೆ ಪ್ರತಿವಾದಿಸಿದ ಎಜಿ ನಾವದಗಿ, ಆರ್ಟಿಕಲ್ 25 (1) ರ ಪ್ರಕಾರ ಧಾರ್ಮಿಕ ವಿಷಯಗಳನ್ನು ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ವಾದಿಸಿದರು.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ. ಮತ್ತು ಹಿಜಾಬ್ ಧರಿಸುವುದು ಸಂಪೂರ್ಣವಾಗಿ ಸರಿ ಎಂದು ಹೇಳಲಾಗುವುದಿಲ್ಲ ಎಂದು ಎಜಿ ನಾವದಗಿ ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) ಪಾವಿತ್ರ್ಯತೆಯ ಬಗ್ಗೆ ಎಜಿ ಪ್ರಭುಲಿಂಗ ನಾವದಗಿ ಅವರನ್ನು ಪೀಠ ಪ್ರಶ್ನಿಸಿತು. ಮತ್ತು ಈ ವಿಷಯದ ಕುರಿತು ಆದೇಶ ಹೊರಡಿಸುವಾಗ ಸರ್ಕಾರವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ವಿವಿಧ ತೀರ್ಪುಗಳನ್ನು ಏಕೆ ಉಲ್ಲೇಖಿಸಿದೆ ಎಂದು ಪ್ರಶ್ನಿಸಿತು.

ಆದೇಶವನ್ನು ಹೊರಡಿಸುವಾಗ ಸರ್ಕಾರ ನಿಮ್ಮನ್ನು ಸಂಪರ್ಕಿಸಿಲ್ಲ ಎಂದು ತೋರುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಎಜಿ ನಾವದಗಿಗೆ ಹೇಳಿದರು. ಇದೇ ವೇಳೆ ಸರ್ಕಾರ ಹೊರಡಿಸಿರುವ ಆದೇಶ ಅವಧಿಪೂರ್ವವೇ ಎಂದು ಪೀಠ ಎಜಿಗೆ ಪ್ರಶ್ನಿಸಿತು.

ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ತರಗತಿಗಳಿಗೆ ಧರಿಸುವುದನ್ನು ನಿಷೇಧಿಸುವ ಮಧ್ಯಂತರ ಆದೇಶವನ್ನು ತೆಗೆದುಹಾಕಲು ಅರ್ಜಿದಾರರ ಪರ ವಕೀಲರು ಇಲ್ಲಿಯವರೆಗೆ ವಾದಿಸಿದರು. ಆದರೆ, ಹೈಕೋರ್ಟ್‌ ಪೀಠವು ಅವರ ಬೇಡಿಕೆಗೆ ಮನ್ನಣೆ ನೀಡಿಲ್ಲ.

Recommended Video

Karnataka: ಹಿಜಾಬ್ ತೆಗಿಯಲ್ಲ‌ ಎಂದ 58 ವಿದ್ಯಾರ್ಥಿನಿಯರು ಶಾಲೆಯಿಂದಲೇ‌ ಅಮಾನತು | Oneindia Kannada

English summary
Karnataka Hijab Controversy: The Karnataka High Court bench on Friday held hearings on the Hijab row and Directs the state government to that its interim order is not violated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X