ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಕ್ಲಿನಿಕ್ ಲೋಗೊ ವಿನ್ಯಾಸ ಮಾಡಲು ನಾಗರಿಕರಿಗೆ ಅವಕಾಶ ನೀಡಿದ ಸರ್ಕಾರ

|
Google Oneindia Kannada News

ಬೆಂಗಳೂರು, ಆಗಸ್ಟ್‌ 5: ರಾಜ್ಯದ ಜನತೆಗೆ ಆರೋಗ್ಯ ಸೇವೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಮ್ಮ ಕ್ಲಿನಿಕ್ ಆರಂಭಿಸಲು ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ನಮ್ಮ ಕ್ಲಿನಿಕ್‌ಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ನಮ್ಮ ಕ್ಲಿನಿಕ್‌' ಲೋಗೊ ವಿನ್ಯಾಸಗೊಳಿಸಲು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನತೆ ಅವಕಾಶವಿದೆ. ನಮ್ಮ ಕ್ಲಿನಿಕ್‌ನ ವಿಭಿನ್ನ ಮತ್ತು ಆಕರ್ಷಕ ಗುರುತು ಹೇಗಿರಬೇಕು ಅನ್ನುವುದನ್ನು ಈಗ ನೀವೆ ನಿರ್ಧರಿಸಬಹುದಾಗಿದೆ.

ಆಗಸ್ಟ್‌ನಿಂದ ಬೆಂಗಳೂರಿನ 243 ವಾರ್ಡ್‌ನಲ್ಲಿ 'ನಮ್ಮ ಕ್ಲಿನಿಕ್' ಆರಂಭಆಗಸ್ಟ್‌ನಿಂದ ಬೆಂಗಳೂರಿನ 243 ವಾರ್ಡ್‌ನಲ್ಲಿ 'ನಮ್ಮ ಕ್ಲಿನಿಕ್' ಆರಂಭ

ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶವನ್ನು ತಂದು ಕೊಡಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ ಕಾರ್ಯಾರಂಭ ಮಾಡಲಿದೆ.

Karnataka Health Department Invites Logo Design For Namma Clinics

ಆಡಳಿತ ಮತ್ತು ಅಭಿವೃದ್ಧಿಯಲ್ಲಿ ರಾಜ್ಯದ ಜನತೆಯ ಸಕ್ರಿಯ ಭಾಗವಹಿಸುವಿಕೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಉದ್ದೇಶವನ್ನು ಬಿಂಬಿಸುವಂತೆ ಆಕರ್ಷಕ ಲೋಗೋ ವಿನ್ಯಾಸ ಮಾಡಿ [email protected] ಕಳುಹಿಸಬೇಕು.

ಆಯ್ಕೆಯಾದ ಲೋಗೊ ವಿನ್ಯಾಸಕ್ಕೆ ಬಹುಮಾನ

ಆಯ್ಕೆಯಾದ ಲೋಗೊವನ್ನು ಡಿಸೈನ್‌ ಮಾಡಿದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಂದ ವಿಶೇಷ ಗೌರವ ಸಿಗಲಿದೆ. ಆಗಸ್ಟ್‌ 5ರಿಂದ ಆಗಸ್ಟ್‌ 15ರ ಒಳಗೆ ಲೋಗೊ ವಿನ್ಯಾಸ ಮಾಡಿ ಕಳುಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

Karnataka Health Department Invites Logo Design For Namma Clinics

ನಮ್ಮ ಕ್ಲಿನಿಕ್ ವಿಶೇಷತೆ ಏನು?

ನಮ್ಮ ಕ್ಲಿನಿಕ್‌ನಲ್ಲಿ ಒಬ್ಬ ಡಾಕ್ಟರ್‌, ಒಬ್ಬ ನರ್ಸ್‌, ಒಬ್ಬ ಲ್ಯಾಬ್‌ ಟೆಕ್ನೀಷಿಯನ್‌ ಹಾಗೂ ಒಬ್ಬ ಡಿ ಗ್ರೂಪ್‌ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ನಮ್ಮ ಕ್ಲಿನಿಕ್ ನಾಗರಿಕರಿಗೆ ಉಚಿತ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಸೇವೆ ನೀಡುತ್ತದೆ. 12 ರೀತಿಯ ಆರೋಗ್ಯ ಸೇವೆ ಮತ್ತು 14 ವಿಧದ ಪ್ರಯೋಗಗಳನ್ನು ನಡೆಸಲಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ನಮ್ಮ ಕ್ಲಿನಿಕ್‌ಗಳು ಕಾರ್ಯಾನಿರ್ವಹಿಸುತ್ತವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್‌ ವ್ಯವಸ್ಥೆ ಕೂಡ ಲಭ್ಯವಿರುತ್ತದೆ.

ಪ್ರತಿ ನಮ್ಮ ಕ್ಲಿನಿಕ್‌ಗೆ 36 ಲಕ್ಷ ರುಪಾಯಿ ಅನುದಾನ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ನಮ್ಮ ಕ್ಲಿನಿಕ್‌ಗೆ ಅನುದಾನ ನೀಡುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ. ಈ ಹಣದಲ್ಲಿ ಸಿಬ್ಬಂದಿ ವೇತನ, ಕ್ಲಿನಿಕ್‌ ನಿರ್ವಹಣೆ, ನಮ್ಮ ಕ್ಲಿನಿಕ್ ಖಾಸಗಿ ಕಟ್ಟಡದಲ್ಲಿದ್ದರೆ ಅದರ ಬಾಡಿಗೆಯನ್ನೂ ನಿರ್ವಹಣೆ ಮಾಡಬೇಕಾಗುತ್ತದೆ.

English summary
Karnataka Health Minister Dr K Sudhakar has invited interested citizens to submit logo designs for the state government's Namma Clinic initiative. The minister also stated that the winner of the contest will be awarded by Karnataka Chief Minister Basavaraj Bommai and Health Minister Dr K Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X