• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಡದಿ ನಿತ್ಯಾನಂದನಿಗೆ ಹೈಕೋರ್ಟ್ ನಿಂದ ತಡೆ

By Mahesh
|

ರಾಮನಗರ, ನ.19: ಬಿಡದಿಯ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರಿಗೆ ಹಿನ್ನಡೆಯುಂಟಾಗಿದೆ. ಆಶ್ರಮದಲ್ಲಿ ಮಧ್ಯದಲ್ಲಿ ಭಾರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ನಿತ್ಯಾನಂದ ಹಾಗೂ ಆತನ ಭಕ್ತರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಮಂಜುನಾಥ್ ಎನ್ನುವವರು ರಾಮನಗರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ನಿತ್ಯಾನಂದ ಆಶ್ರಮವಿರುವ ಜಾಗ ಮತ್ತು ಕಲ್ಲುಗೊಪನಹಳ್ಳಿಯಲ್ಲಿ ಭೂಮಿಯ ಸರ್ವೆ ಕಾರ್ಯ ಸರಿಯಾಗಿ ನಡೆದಿಲ್ಲ. ತಹಶೀಲ್ದಾರ್ ಅವರು ಟಿಪ್ಪಣಿ ಮಾಡದೆ ಜಮೀನನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್, ಭೂಮಿ ಪರಿವರ್ತನೆಯಾಗದ ಜಾಗದಲ್ಲಿ ಕಟ್ಟಡ ನಿರ್ಮಿಸಬಾರದು ಎಂದು ಆದೇಶಿಸಿದೆ.

ಬಿಡದಿಯ ಕಲ್ಲುಗೊಪನಹಳ್ಳಿ ಸರ್ವೇ ನಂ.21ರ ಬಳಿ ಕಾನೂನು ಉಲ್ಲಂಘಿಸಿ 20 ಎಕರೆ 25 ಗುಂಟೆ ಜಾಗದಲ್ಲಿ ನಿತ್ಯಾನಂದ ಆಶ್ರಮ ಸ್ಥಾಪಿಸಲಾಗಿದೆ ಎಂಡು ಮಂಜುನಾಥ್ ದೂರುದಾಖಲಿಸಿದ್ದರು. ದೂರಿಗೆ ಸಂಬಂಧಿಸಿ ತಹಶೀಲ್ದಾರ್, ಭೂ ಪರಿವರ್ತಿಸದೇ ನಿರ್ಮಿಸಿರುವ ಆಶ್ರಮವನ್ನು ಏಕೆ ತೆರವುಗೊಳಿಸಬಾರದು ಎಂದು ನೋಟಿಸ್ ಜಾರಿ ಮಾಡಿದ್ದರು. [ನಿತ್ಯಾನಂದ ಸ್ವಾಮಿ ವಿಚಾರಣೆ ನ.26ಕ್ಕೆ]

ಇದನ್ನು ನಿತ್ಯಾನಂದ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಬಿ.ಎ ನಾಗರತ್ನ ಅವರಿದ್ದ ನ್ಯಾಯಪೀಠ, ಆಶ್ರಮದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳದೆ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಭೂ ಪರಿವರ್ತನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು 3 ತಿಂಗಳ ಒಳಗೆ ಇತ್ಯರ್ಥ ಪಡಿಸುವಂತೆ ಕೆಎಟಿಗೆ ಸೂಚಿಸಿ ಅರ್ಜಿ ಇತ್ಯರ್ಥ ಪಡಿಸಿತು.

ಬಿಡದಿ ಆಶ್ರಮದಲ್ಲಿರುವ ಬೃಹತ್ ಬನ್ನಿ ಮರದ ಆವರಣದಲ್ಲಿ ಚಿನ್ನದ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ನಿತ್ಯಾನಂದ ಸ್ವಾಮೀಜಿ ತನ್ನ ವೆಬ್ ಸೈಟ್ ನಲ್ಲಿ ಹಾಕಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Karnataka High court has restricted Swami Nithyananda to construct any building in the Ashram Premises. Nithyananda has instructed his disciples to construct a new golden Shiva temple in his Bidadi ashram, under the Banyan tree in the ashram. The temple will be built on 24 acres of land. But the strange thing is - only 2 acres of the 24 acres is legally valid land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more