ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಪಿ ಪೊಲೀಸರು ಟ್ವಿಟ್ಟರ್‌ ಎಂಡಿಗೆ ನೀಡಿದ್ದ ನೋಟಿಸ್‌ ಕರ್ನಾಟಕ ಹೈಕೋರ್ಟ್‌ನಿಂದ ರದ್ದು

|
Google Oneindia Kannada News

ಬೆಂಗಳೂರು, ಜು.23: ಲೋನಿಯಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮನೀಶ್ ಮಹೇಶ್ವರಿ ವಿರುದ್ಧ ಗಾಜಿಯಾಬಾದ್ ಪೊಲೀಸರು ನೀಡಿರುವ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಉತ್ತರ ಪ್ರದೇಶ ಪೊಲೀಸರು ಮಹೇಶ್ವರಿಯನ್ನು ಪ್ರಶ್ನಿಸಬೇಕಾದರೆ, ತಮ್ಮ ಕಚೇರಿಯಲ್ಲಿ ಅಥವಾ ವರ್ಚುವಲ್‌ ಆಗಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿಯಲ್ಲಿ ನೀಡಲಾದ ನೋಟಿಸ್ ಅನ್ನು ಸೆಕ್ಷನ್ 160 ರ ಅಡಿಯಲ್ಲಿ ನೀಡಲಾಗಿರುವಂತೆ ಪರಿಗಣಿಸಬಹುದು ಎಂದು ಅದು ಹೇಳಿದೆ. 41 ಎ ಅಡಿಯಲ್ಲಿನ ನೋಟೀಸ್ ಸ್ಥಾನದ ದುರುಪಯೋಗ ಎಂದು ಕಾಣುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಉ.ಪ್ರದೇಶ ಪೊಲೀಸರು ಟ್ವಿಟ್ಟರ್‌ ಎಂಡಿಗೆ ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆಉ.ಪ್ರದೇಶ ಪೊಲೀಸರು ಟ್ವಿಟ್ಟರ್‌ ಎಂಡಿಗೆ ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ

ಇನ್ನು ಮಹೇಶ್ವರಿಯು ಸಾಮಾಜಿಕ ಜಾಲತಾಣದಲ್ಲಿ ನಡೆಯುವ ವಿಷಯದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿದೆ.

Karnataka HC Quashes Notice Against Twitter MD Manish Maheshwari in Ghaziabad Assault Case

"ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಮಾಹಿತಿಯನ್ನು ಪಡೆಯುವುದು ಪೊಲೀಸರ ವೈಫಲ್ಯ ಮಾತ್ರವಲ್ಲ. ಆ ವಿಷಯದ ಬಗ್ಗೆ ಅಹಿತಕರ ಮತ್ತು ಬೆದರಿಕೆ ತರುವ ಮೌನ ಹಾಗೂ ಪ್ರಾದೇಶಿಕ ನ್ಯಾಯವ್ಯಾಪ್ತಿಯ ವಿಷಯದ ಬಗ್ಗೆ ನ್ಯಾಯಾಲಯವನ್ನು ಸಹಕರಿಸುವ ಪ್ರಯತ್ನವಾಗಿದೆ," ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.

ನ್ಯಾಯಮೂರ್ತಿ ಜಿ. ನಾಗೇಂದರ್ ಈ ನೋಟಿಸ್‌ ಬಗ್ಗೆ ಪ್ರತಿಕ್ರಿಯಿಸಿ, ''ನಾನು ಈ ನೋಟಿಸ್‌ ಅನ್ನು ಪರಿಶೀಲಿಸಿದ್ದೇನೆ. ಪೊಲೀಸರು ತಮ್ಮ ಶಾಸನಬದ್ಧ ಅಧಿಕಾರವನ್ನು ಕಿರುಕುಳ ನೀಡಲು ಬಳಸಿಕೊಳ್ಳಲು ನ್ಯಾಯಾಲಯವು ಅನುಮತಿಸುವುದಿಲ್ಲ,'' ಎಂದು ಹೇಳಿದೆ.

ಇನ್ನು ಮಹೇಶ್ವರಿ ಪರ ವಕೀಲರು, ''ಮಹೇಶ್ವರಿ ಕಂಪನಿಗೆ ಸಂಬಂಧಿಸಿದ ಮಾರಾಟ / ಮಾರುಕಟ್ಟೆ ಸಮಸ್ಯೆಗಳನ್ನು ಮಾತ್ರ ನಿಭಾಯಿಸುತ್ತಾರೆ. ಟ್ವಿಟ್ಟರ್‌ ಇಂಕ್ ಮತ್ತು ಟ್ವಿಟ್ಟರ್ ಇಂಡಿಯಾದ ಮಂಡಳಿಯ ಸದಸ್ಯರ ಹೆಸರುಗಳು ಸಾರ್ವಜನಿಕ ವಲಯದಲ್ಲಿ ಲಭ್ಯವಿದ್ದರೂ ಸಹ ಮಹೇಶ್ವರಿಗೆ ನೋಟಿಸ್ ನೀಡಲಾಗುತ್ತಿದೆ. ಇದು ಪೊಲೀಸರು ಮಹೇಶ್ವರಿಯನ್ನು ಗುರಿಯಾಗಿಸಿಕೊಂಡಿದ್ದಾರೆಂದು ತೋರಿಸುತ್ತಿದೆ,'' ಎಂದು ಆರೋಪಿಸಿದರು.

ಮುಸ್ಲಿಂ ವ್ಯಕ್ತಿಯೊಬ್ಬರನ್ನು ಪುರುಷರ ಗುಂಪೊಂದು ಥಳಿಸಿ, ಗಡ್ಡವನ್ನು ಕತ್ತರಿಸಿರುವ ಘಟನೆ ಲೋನಿಯಲ್ಲಿ ನಡೆದಿತ್ತು. ಈ ವಿಚಾರ ಟ್ವಿಟ್ಟರ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ ವಿಚಾರಣೆಗೆ ಹಾಜರಾಗುವಂತೆ ಯುಪಿ ಪೊಲೀಸರು ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಿದ್ದರು.

ವರ್ಚುವಲ್‌ ಆಗಿ ವಿಚಾರಣೆಗೆ ಹಾಜರಾಗುವುದಾಗಿ ಟ್ವಿಟ್ಟರ್‌ ಎಂಡಿ ಹೇಳಿದ್ದರು. ಆದರೆ ಬೆಳಿಗ್ಗೆ 10.30 ಕ್ಕೆ ಹಾಜರಿರಬೇಕೆಂದು ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಪೊಲೀಸರ ಎದುರು ಹೇಳಿಕೆ ದಾಖಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಬೆಳವಣಿಗೆಯ ನಂತರ, ನಿನ್ನೆ (ಜೂನ್ 23) ಮನೀಶ್‌ ಮಹೇಶ್ವರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಉತ್ತರ ಪ್ರದೇಶದ ಪೊಲೀಸರು ಟ್ವಿಟ್ಟರ್ ಇಂಡಿಯಾದ ಮನೀಶ್‌ಗೆ ನೀಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈಗ ನೋಟಿಸ್‌ ಅನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ.

Recommended Video

ಖಚಡ ಮಂತ್ರಿಗಳಿಂದ ಯಡಿಯೂರಪ್ಪನಿಗೆ ಸಂಕಷ್ಟ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Karnataka High Court Quashes Notice issued by the Ghaziabad Police Against Twitter MD Manish Maheshwari in Ghaziabad Assault Case. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X