ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕೇಬಲ್ ನೇತಾಡಿದರೆ ಕ್ರಿಮಿನಲ್ ಕೇಸ್

|
Google Oneindia Kannada News

ಬೆಂಗಳೂರು,ಫೆಬ್ರವರಿ 25: ನಗರದ ವಿವಿಧೆಡೆ ಫೂಟ್‌ಪಾತ್,ಮರಗಳು ಸೇರಿದಂತೆ ಎಲ್ಲೆಂದರಲ್ಲಿ ಕೇಬಲ್‌ ವೈರ್‌ಗಳು ತೂಗಾಡುತ್ತಿರುತ್ತವೆ.

ಇನ್ನುಮುಂದೆ ಅಂತಹ ಕೇಬಲ್‌ಗಳು ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಸರ್ಕಾರಿ ಜಾಗದಲ್ಲಿ ಧಾರ್ಮಿಕ ಕೇಂದ್ರ: ಪತ್ತೆಗೆ ಬಿಬಿಎಂಪಿಗೆ ಹೈಕೋರ್ಟ್ ಅಂತಿಮ ಗಡುವು ಸರ್ಕಾರಿ ಜಾಗದಲ್ಲಿ ಧಾರ್ಮಿಕ ಕೇಂದ್ರ: ಪತ್ತೆಗೆ ಬಿಬಿಎಂಪಿಗೆ ಹೈಕೋರ್ಟ್ ಅಂತಿಮ ಗಡುವು

ತೂಗಾಡುತ್ತಿರುವ ಎಲೆಕ್ಟ್ರಿಕ್ ವೈರ್, ಟೆಲಿಪೋನ್ ವೈರ್ ಮತ್ತು ಟಿವಿ ಕೇಬಲ್ ವೈರ್ ಗಳ ದೃಶ್ಯ ಎಲ್ಲಾ ಕಡೆ ಸಾಮಾನ್ಯವಾಗಿ ಬಿಟ್ಟಿದೆ. ಫೋಟೋಗಳನ್ನು ನೋಡಿದರೆ, ಪಾದಚಾರಿಗಳಿಗೆ. ಹಾಗೂ ವಾಹನ ಸವಾರರಿಗೆ ಅಪಾಯ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಇಂತವ ವಿರುದ್ಧ ಕ್ರಮ ಕೈಗೊಳ್ಳುವುದು ಬಿಬಿಎಂಪಿ ಕರ್ತವ್ಯವಾಗಿದೆ ಎಂದು ಕೋರ್ಟ್ ತಿಳಿಸಿದೆ.

Karnataka HC Directs Action Against TV,Cable Operators Over Issue Of Hanging Cables

ಬೆಂಗಳೂರಿನಲ್ಲಿ ಜೋತು ಬಿದ್ದಿರುವ ಕೇಬಲ್ ಟಿವಿ, ಇಂಟರ್ ನೆಟ್, ಮತ್ತು ಎಲೆಕ್ಟ್ರಿಕ್ ವೈರ್ ವಿರುದ್ಧ ವಕೀಲ ಎನ್ ಪಿ ಅಮೃತೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಮಗದುಮ್ ಅವರನ್ನೊಳಗೊಂಡ ವಿಭಾಗೀಯ ಪೀಠ, 1995ರ ಕೇಬಲ್ ನೆಟ್ ವರ್ಕ್ ಕಾಯಿದೆ ಪ್ರಕಾರ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬಿಬಿಎಂಪಿಗೆ ಸೂಚಿಸಿದೆ.

Recommended Video

ಮತ್ತೆ ಜನಸಾಮಾನ್ಯರಿಗೆ ಅನಿಲಾಘಾತ- ಅಡುಗೆ ಅನಿಲ ದರ 25 ರೂಪಾಯಿ ಹೆಚ್ಚಳ..! | Oneindia Kannada

ಬಿಬಿಎಂಪಿಗೆ ಕೇಬಲ್ ಕಾಯ್ದೆ ಅನ್ವಯ ಕೇಬಲ್ ಆಪರೇಟರ್ ಗಳು ಮೊದಲು ಬಿಬಿಎಂಪಿ ಅನುಮತಿ ಪಡೆಯಬೇಕು. ಅನುಮತಿ ಪಡೆಯದೆ, ಸಾರ್ವಜನಿಕ ಬೀದಿಗಳಲ್ಲಿ ಕೇಬಲ್‌ಗಳನ್ನು ಹಾಕಲು ನಿರ್ವಾಹಕರಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.

English summary
The Karnataka high court has directed the state government authorities and Bruhat Bengaluru Mahanagara Palike (BBMP) to take action against private internet, television and cable operators responsible for dangling electric, telephone and TV cables in the state capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X