ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೆರೆಡು ದಿನ ರಾಜ್ಯದಲ್ಲಿ ಮಳೆ ಬರುವ ಯಾವ ಲಕ್ಷಣಗಳೂ ಇಲ್ಲ

|
Google Oneindia Kannada News

ಬೆಂಗಳೂರು, ಜೂನ್ 18: ವಾಯು ಚಂಡ ಮಾರುತ ಬಂದಿದ್ದೇ ಬಂದಿದ್ದು ಮುಂಗಾರು ದುರ್ಬಲವಾಗಿದೆ. ಇತ್ತ ಚಂಡಮಾರುತದಿಂದಲೂ ಮಳೆಯಿಲ್ಲ, ಅತ್ತ ಮುಂಗಾರು ಎರಡೂ ಇಲ್ಲದ ಪರಿಸ್ಥಿತಿ ಕರ್ನಾಟಕದ್ದಾಗಿದೆ.

ಜೂನ್ 8 ರಂದೇ ಮುಂಗಾರು ಕೇರಳ ಪ್ರವೇಶಿಸಿದರೂ ಕರ್ನಾಟಕದ ಕೆಲವು ಭಾಗಗಳಲ್ಲಿ ಒಂದೆರೆಡು ದಿನ ಸ್ವಲ್ಪ ಮಳೆಯಾಗಿದ್ದಷ್ಟು ಬಿಟ್ಟರೆ ಮತ್ತೆ ಮಳೆಯ ಹನಿಗಳನ್ನು ಅಲ್ಲಿ ಜನ ನೋಡಲೇ ಇಲ್ಲ ಬದಲಾಗಿದೆ, ಮತ್ತೆ ಸೆಕೆ ಹೆಚ್ಚಾಗಿದೆ.

ಕರಾವಳಿ ಕರ್ನಾಟಕ, ಕೇರಳಕ್ಕೆ ಮಾತ್ರ ಸೀಮಿತವಾದ ಮುಂಗಾರು ಕರಾವಳಿ ಕರ್ನಾಟಕ, ಕೇರಳಕ್ಕೆ ಮಾತ್ರ ಸೀಮಿತವಾದ ಮುಂಗಾರು

ಜೂನ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಮಳೆಯಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಜೂನ್ 21ರ ನಂತರ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಿಂಗಳಾಂತ್ಯಕ್ಕೆರಾಜ್ಯಾದ್ಯಂತ ಮಳೆಯಾಗಲಿದೆ.

Karnataka has to wait longer for date with monsoon

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಚಂಡಮಾರುತ ಪ್ರಭಾವದಿಂದ ಈ ಬಾರಿ ಮುಂಗಾರು ಕ್ಷೀಣಿಸಿದೆ. ಜೊತೆಗೆ ವಿಳಂಬವಾಗಿ ರಾಜ್ಯ ಪ್ರವೇಶಿಸಿದೆ.

ಇಷ್ಟೊಂದು ತಡವಾಗಿ ಮುಂಗಾರು ಪ್ರವೇಶಿಸಿದ್ದು ತೀರಾ ಕಡಿಮೆ. ಕಳೆದ ವರ್ಷ ಜೂನ್ 9ಕ್ಕೆ ಪ್ರವೇಶಿಸಿದ್ದ ಮುಂಗಾರು ಜೂನ್ 14ರ ವೇಳೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿ ಉತ್ತಮ ಮಳೆಯಾಗಿತ್ತು.

English summary
Karnataka has to wait longer for date with monsoon, this year monsoon making a late entry into state and it will be further delayed in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X