ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ: ಸಿದ್ದರಾಮಯ್ಯ

14ನೇ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.

By Mahesh
|
Google Oneindia Kannada News

ಬೆಂಗಳೂರು, ಜನವರಿ 08: 14ನೇ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.

ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯ ವರದಿ ಪ್ರಕಾರ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.[LIVE: ಪ್ರವಾಸಿ ಭಾರತೀಯ ದಿವಸ: ಮೋದಿ ಭಾಷಣ ಲೈವ್]
ಗುಣಮಟ್ಟದ ಜೀವನ ಸಾಗಿಸಲು ಸೂಕ್ತವಾದ ನಗರಗಳ ಬಗ್ಗೆ ನಡೆಸಲಾದ ಜಾಗತಿಕ ಮಟ್ಟದ ಸಮೀಕ್ಷೆಯಲ್ಲಿ ಬೆಂಗಳೂರು 2011ರಲ್ಲೇ ಉತ್ತಮ ನಗರಿ ಎನಿಸಿಕೊಂಡಿದೆ.

ವ್ಯಾಪಾರ ವಹಿವಾಟಿಗೆ ತಕ್ಕಂತೆ ಕರ್ನಾಟಕ ತನ್ನ ಕೈಗಾರಿಕ, ವಾಣಿಜ್ಯ ನೀತಿಯನ್ನು ಹೊಂದಿದೆ ಎಂದು ವಿಶ್ವಬ್ಯಾಂಕಿನ ಹೂಡಿಕೆ ವಾತಾವಾರಣ ಸೂಚ್ಯಂಕವೂ ತನ್ನ ವರದಿಯಲ್ಲಿ ಹೇಳಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬಲವರ್ಧನೆಗೊಳ್ಳುತ್ತಿರುವ ಮಾರುಕಟ್ಟೆ ಕರ್ನಾಟಕದಲ್ಲಿ ಕಾಣಬಹುದು ಎಂದು ಸಿದ್ದರಾಮಯ್ಯ ಅವರು ಹೇಳಿದರು. [ಭಾಷಣದ ಪೂರ್ತಿ ಪ್ರತಿ ಇಂಗ್ಲೀಷಿನಲ್ಲಿ ಇಲ್ಲಿ ಓದಬಹುದು]

ಪ್ರವಾಸಿ ದಿವಸ 14ನೇ ಬಾರಿಗೆ

ಪ್ರವಾಸಿ ದಿವಸ 14ನೇ ಬಾರಿಗೆ

72 ದೇಶಗಳ 7200 ಪ್ರತಿನಿಧಿಗಳು ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಅಹಮದಾಬಾದಿನಲ್ಲಿ ಪ್ರಧಾನಿ ಮೋದಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಪ್ರವಾಸಿ ಭಾರತೀಯ ದಿವಸ್ ಕರ್ನಾಟಕದಲ್ಲಿ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದಾಗ ಅವರು ಅವಕಾಶ ಮಾಡಿಕೊಟ್ಟಿದ್ದಾರೆ.

ಆರ್ ವಿ ದೇಶಪಾಂಡೆ

ಆರ್ ವಿ ದೇಶಪಾಂಡೆ

ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವದ ನಂ.1 ಸಂಶೋಧನಾ ಆಧಾರಿತ ಕೇಂದ್ರ ಪ್ರಾರಂಭಿಸಲು ಅವಕಾಶ ನೀಡಬೇಕೆಂದು ಭಾರೀ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು. ಎಲ್ಲ ವಲಯಗಳಲ್ಲಿ ಕರ್ನಾಟಕದ ಬೆಂಗಳೂರು ಉತ್ತಮ ಸಾಧನೆ ಮಾಡಿದೆ. ವಿಶ್ವದಲ್ಲೇ ನಂ.1 ಸಂಶೋಧನಾ ಕೇಂದ್ರ ಸ್ಥಾಪಿಸುವ ಅಗತ್ಯವಿದೆ. ಮುಖ್ಯಮಂತ್ರಿಗಳ ಸಹಕಾರದಲ್ಲಿ ನಮ್ಮ ರಾಜ್ಯದಲ್ಲಿ ದೇಶದಲ್ಲೇ ಬಾಹ್ಯಾಕಾಶ, ಮಾಹಿತಿ-ತಂತ್ರಜ್ಞಾನ, ಉತ್ಪಾದನಾ ವಲಯ ಸೇರಿದಂತೆ ಎಲ್ಲ ವಲಯಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ

ಭಾರತ ಯುವಶಕ್ತಿಯ ಮೂಲಕ ವಿಶ್ವದ ಗಮನ

ಭಾರತ ಯುವಶಕ್ತಿಯ ಮೂಲಕ ವಿಶ್ವದ ಗಮನ

ಭಾರತ ಯುವಶಕ್ತಿಯ ಮೂಲಕ ವಿಶ್ವದ ಗಮನ ಸೆಳೆದಿದ್ದು , ಇಲ್ಲಿ ಅವಕಾಶಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಹೇಳಿದರು.

ಯುವ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ದೊರೆಯುವ ಅವಕಾಶಗಳನ್ನು ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಬಳಸಿಕೊಳ್ಳಬೇಕು. ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ಯುವ ಪ್ರವಾಸಿ ಸಮಾವೇಶದಲ್ಲಿ ಗಣ್ಯರು

ಯುವ ಪ್ರವಾಸಿ ಸಮಾವೇಶದಲ್ಲಿ ಗಣ್ಯರು

ಯುವ ಅನಿವಾಸಿ ಭಾರತೀಯರ ಸಮಸ್ಯೆ, ಸವಾಲು, ಅವಕಾಶಗಳ ಕುರಿತು ದಿನವಿಡೀ ಅರ್ಥಪೂರ್ಣ ಚರ್ಚೆ ನಡೆಸಿ, ಸ್ಥಳದಲ್ಲೇ ಸಮಸ್ಯೆ ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಪ್ರಯತ್ನಿಸಿದರು. ಕೇಂದ್ರ ಸಚಿವರಾದ ವಿಜಯ್ ಗೋಯಲ್, ಪ್ರಕಾಶ್ ಜಾವ್ಡೇಕರ್, ವಿ.ಕೆ.ಸಿಂಗ್ ಹಾಗೂ ರಾಜ್ಯದ ಆರ್.ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು. ಇವರ ಜತೆಗೆ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್

ಮತದಾನದ ಹಕ್ಕಿಗೆ ಬೇಡಿಕೆ

ಮತದಾನದ ಹಕ್ಕಿಗೆ ಬೇಡಿಕೆ

ಎನ್​ಆರ್​ಐಗಳಿಗೆ ಮತದಾನದ ಅಧಿಕಾರ ನೀಡುವಂತೆ ಈ ಬಾರಿಯ ಪ್ರವಾಸಿ ದಿವಸದಲ್ಲಿ ಮನವಿ ಬಲವಾಗಿ ಕೇಳಿ ಬಂದಿದೆ. ಈ ವಿಷಯಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಕಳೆದ ವರ್ಷ ಸುಪ್ರೀಂಕೋರ್ಟ್​ಗೆ ಸಕಾರಾತ್ಮಕವಾದ ಪ್ರಮಾಣಪತ್ರ ಸಲ್ಲಿಸಿದೆ. ಇದು ಈ ವಿದ್ಯಮಾನಕ್ಕೆ ಕಾರಣವಾಗಿತ್ತು. ಇ-ಮತದಾನ ಅಥವಾ ಬೇರೆಯ ರೂಪದಲ್ಲಿ ಮತ ಚಲಾವಣೆಗೆ ಅವಕಾಶ ನೀಡಬೇಕು.

English summary
The State is considered as the fastest growing market in India.Department of Industrial Policy and Promotion in August 2016 reveal that Karnataka stands first in the investment attractiveness said CM of Karnataka, Siddaramaiah during his speech at Bharatiya Pravasi Divas inauguration today in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X