ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು- ಮಂಗಳೂರಿನಲ್ಲಿ ಫಾರ್ಮಾ, ಮೆಡ್‍ಟೆಕ್ ಝೋನ್ ಸ್ಥಾಪನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಬೆಂಗಳೂರಿನಲ್ಲಿ ಫಾರ್ಮಾ ಹಾಗೂ ಮೆಡ್ ಟೆಕ್ ಝೋನ್, ಮಂಗಳೂರಿನಲ್ಲಿ ಫಾರ್ಮಾ ಪಾರ್ಕ್ ಸ್ಥಾಪಿಸುವುದಾಗಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್ ಘೋಷಣೆ ಮಾಡಿದ್ದಾರೆ.

ಇಂಡಿಯಾ ಫಾರ್ಮಾ 2019 ಮತ್ತು ಇಂಡಿಯಾ ಮೆಡಿಕಲ್ ಡಿವೈಸಸ್ 2019 ಬೆಂಗಳೂರಿನಲ್ಲಿ ಫೆಬ್ರವರಿ 18 ಹಾಗೂ 19ರಂದು ನಡೆಯುತ್ತಿದೆ. ಈ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್, "ಫಾರ್ಮಸ್ಯೂಟಿಕಲ್ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ನಾವು ವಿಶ್ವದರ್ಜೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ್ದೇವೆ. ರಾಜ್ಯದ ಹಾಸನ ಮತ್ತು ಯಾದಗಿರಿನ್ಲಿ ವಿಶೇಷವಾಗಿ ಫಾರ್ಮಾ ಎಸ್‍ಇಝೆಡ್‍ಗಳನ್ನು ಹೊಂದಿದೆ" ಎಂದು ಹೇಳಿದರು.

ಪಾಲಿಮೆಡ್‍ಗೆ ಇಂಡಿಯಾ ಮೆಡಿಕಲ್ ಡಿವೈಸಸ್ ಕಂಪನಿ ಆಫ್ ದ ಈಯರ್ ಪ್ರಶಸ್ತಿಪಾಲಿಮೆಡ್‍ಗೆ ಇಂಡಿಯಾ ಮೆಡಿಕಲ್ ಡಿವೈಸಸ್ ಕಂಪನಿ ಆಫ್ ದ ಈಯರ್ ಪ್ರಶಸ್ತಿ

ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಶೀಘ್ರದಲ್ಲೇ ಫಾರ್ಮಾ ಮತ್ತು ಮೆಡ್‍ಟೆಕ್ ಝೋನ್ ಅಭಿವೃದ್ಧಿಪಡಿಸಲಿದೆ. ಅಂತೆಯೇ ಮಂಗಳೂರಿನಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆ ಮಾಡಲಿದೆ.

ಉತ್ಪಾದನಾ ಕ್ಷೇತ್ರವನ್ನು ಬಲಪಡಿಸಲಿದೆ

ಉತ್ಪಾದನಾ ಕ್ಷೇತ್ರವನ್ನು ಬಲಪಡಿಸಲಿದೆ

ಇದು ರಾಜ್ಯದಲ್ಲಿ ಅಗತ್ಯವಾಗಿದ್ದ ಉತ್ಪಾದನಾ ಕ್ಷೇತ್ರವನ್ನು ಬಲಪಡಿಸಲಿದೆ ಹಾಗೂ ಹೂಡಿಕೆದಾರರಿಗೂ ಸಾಕಷ್ಟು ಅವಕಾಶ ಕಲ್ಪಿಸಲಿದೆ ಎಂದು ಸಚಿವರು ಹೇಳಿದರು. ಇದರ ಜತೆಗೆ ಕರ್ನಾಟಕ ಸರ್ಕಾರ, ಫಾರ್ಮಸ್ಯೂಟಿಕಲ್ ಕೈಗಾರಿಕೆಗಳು, ಹಣಕಾಸ ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರನ್ನು ಒಳಗೊಂಡ ಫಾರ್ಮಾ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪಿಸಿದೆ ಎಂದು ಸಚಿವರು ವಿವರಿಸಿದರು.

ವೈದ್ಯಕೀಯ ಸಲಕರಣೆಗಳ ಉತ್ಪಾದನೆಗೆ ಒತ್ತು

ವೈದ್ಯಕೀಯ ಸಲಕರಣೆಗಳ ಉತ್ಪಾದನೆಗೆ ಒತ್ತು

ವೈದ್ಯಕೀಯ ಸಲಕರಣೆಗಳ ಉತ್ಪಾದನಾ ಉದ್ಯಮಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ನಾವು ಹಲವಾರು ಕಾರ್ಯತಂತ್ರಗಳನ್ನು ಹಮ್ಮಿಕೊಂಡಿದ್ದು, ಇದನ್ನು 2014-2019ರ ಹೊಸ ಕೈಗಾರಿಕಾ ನೀತಿಯಲ್ಲಿ ಸೇರಿಸಲಾಗಿದೆ ಎಂದು ವಿವರಿಸಿದರು.

15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ

ಉದ್ಯೋಗ ಸೃಷ್ಟಿಗಾಗಿ ವಿಷಯ್ ಗ್ರೂಪ್

ಉದ್ಯೋಗ ಸೃಷ್ಟಿಗಾಗಿ ವಿಷಯ್ ಗ್ರೂಪ್

* ಹೊಸ ವೈದ್ಯಕೀಯ ಸಲಕರಣೆಗಳ ಪಾರ್ಕ್ ಉತ್ತೇಜಿಸುವ ದೃಷ್ಟಿಯಿಂದ ವೈದ್ಯಕೀಯ ಸಲಕರಣೆಗಳ ವಲಯಕ್ಕೆ ವಿಶೇಷ ಉತ್ತೇಜನ ನೀಡಲಾಗುವುದು.
* ಫಾರ್ಮಾ ಮತ್ತು ವೈದ್ಯಕೀಯ ಸಲಕರಣೆಗಳ ಯೋಜನೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಮತ್ತು ಉದ್ಯೋಗ ಸೃಷ್ಟಿಯನ್ನು ಕ್ಷಿಪ್ರಗೊಳಿಸುವ ಸಲುವಾಗಿ ವಿಷನ್ ಗ್ರೂಪ್ ರಚಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗ ಸೃಷ್ಟಿ: ಸಿಎಂ ಭರವಸೆಪ್ರತಿ ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗ ಸೃಷ್ಟಿ: ಸಿಎಂ ಭರವಸೆ

ವೈದ್ಯಕೀಯ ಸಾಧನಗಳ ಪಾರ್ಕ್

ಎಲ್ಲ ಸಮಾನ ಸೌಲಭ್ಯಗಳು, ಕ್ಯಾಲಿಬ್ರೇಷನ್, ಪರೀಕ್ಷೆ, ಗುಣಮಟ್ಟ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಸೌಲಭ್ಯ ಸೇರಿದಂತೆ ಸಮಗ್ರ ಮೂಲಸೌಕರ್ಯ ವ್ಯವಸ್ಥೆಗಳನ್ನು ಒಳಗೊಂಡ ವೈದ್ಯಕೀಯ ಸಾಧನಗಳ ಪಾರ್ಕ್ ಆರಂಭಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.

English summary
Karnataka Government will soon be setting up a Pharma and MedTech Zone in Bengaluru and establish a 'Pharma Park' at Mangaluru which will give much needed fillip for manufacture and also woo the potential investors into the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X