ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ವಲಸೆ ಕಾರ್ಮಿಕರಿಗೆ ಸಂತಸದ ಸುದ್ದಿ ನೀಡಿದ ಕರ್ನಾಟಕ

|
Google Oneindia Kannada News

ಬೆಂಗಳೂರು, ಮೇ 7: ಕರ್ನಾಟಕದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಹೊರ ರಾಜ್ಯದ ಸರ್ಕಾರಗಳಿಗೆ ಗುರುವಾರ ಪತ್ರ ಬರೆದಿದೆ.

Recommended Video

ಹುಟ್ಟಿದ್ದಕ್ಕೆ ಸಾರ್ಥಕವಾಯ್ತು ಅಂತಾ ತಮಗೆ ತಾವೇ ಲಕ್ಷ್ಮಿ‌ಹೆಬ್ಬಾಳ್ಕರ್ ಹೇಳಿದ್ಯಾಕೆ?

ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡುವ ಬಗ್ಗೆ ಜಾರ್ಖಂಡ್, ಒಡಿಶಾ, ಮದ್ಯ ಪ್ರದೇಶ, ಬಿಹಾರ್, ಉತ್ತರ ಪ್ರದೇಶ, ಮಣಿಪುರ, ತ್ರಿಪುರ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನ ಸರ್ಕಾರಗಳಿಗೆ ಕರ್ನಾಟಕ ಸರ್ಕಾರ ಪತ್ರದ ಮೂಲಕ ಮನವಿ ಮಾಡಿದೆ.

ರೈಲು ಬಂದ್, ಕಾಲ್ನಡಿಗೆಯಲ್ಲಿ ಊರಿನತ್ತ ಹೆಜ್ಜೆಯಿಟ್ಟ ವಲಸೆ ಕಾರ್ಮಿಕರು ರೈಲು ಬಂದ್, ಕಾಲ್ನಡಿಗೆಯಲ್ಲಿ ಊರಿನತ್ತ ಹೆಜ್ಜೆಯಿಟ್ಟ ವಲಸೆ ಕಾರ್ಮಿಕರು

ವಲಸೆ ಕಾರ್ಮಿಕರನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿ, ರೈಲು ವ್ಯವಸ್ಥೆ ಬಂದ್ ಮಾಡಿತ್ತು. ಇದರಿಂದ ಹತಾಶರಾದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರುಗಳ ಕಡೆ ಮುಖ ಮಾಡಿದರು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಮುಂದೆ ಓದಿ....

ಯಡಿಯೂರಪ್ಪ ವಿರುದ್ಧ ಬಿಹಾರಿ ನಾಯಕ ಟೀಕೆ

ಯಡಿಯೂರಪ್ಪ ವಿರುದ್ಧ ಬಿಹಾರಿ ನಾಯಕ ಟೀಕೆ

ವಲಸೆ ಕಾರ್ಮಿಕರ ಸಂಚಾರಕ್ಕೆ ನಿರ್ಬಂಧ ಹೇರಿದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಬಿಹಾರ್ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಿರೋಧಿಸಿದ್ದರು. ''ಕರ್ನಾಟಕದ ಬಿಜೆಪಿ ಸರ್ಕಾರ ಬಿಹಾರಿ ಸಹೋದರರನ್ನು ಒತ್ತೆಯಾಳುಗಳಾಗಿ ಹಿಡಿದಿಡಲು ಮುಂದಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಬಿಹಾರ್ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಈ ಕುರಿತು ಗಟ್ಟಿಯಾದ ಸಂದೇಶ ರವಾನಿಸಬೇಕು' ಎಂದು ಒತ್ತಾಯಿಸಿದ್ದರು.

ಕೃಷ್ಣಬೈರೆಗೌಡ ತರಾಟೆ

ವಲಸೆ ಕಾರ್ಮಿಕರಿಗೆ ರೈಲು ಬಂದ್ ಮಾಡಿದ ಕಾರಣ ಸಾವಿರಾರು ಕಾರ್ಮಿಕರು ನಡೆದುಕೊಂಡು ಊರಿಗೆ ಹೋಗುತ್ತಿದ್ದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಮತ್ತು ಫೋಟೋ ಶೇರ್ ಮಾಡಿದ್ದ ಶಾಸಕ ಕೃಷ್ಣಬೇರೆಗೌಡ ರಾಜ್ಯ ಸರ್ಕಾರದ ನಿರ್ಧಾರದ ತಪ್ಪು ಎಂದಿದ್ದರು. ಸರ್ಕಾರದ ಕಾರ್ಯದರ್ಶಿಗೆ ಫೋನ್ ಮಾಡಿ ಈ ಮರುಪರಿಶೀಲನೆ ಮಾಡವಂತೆ ಒತ್ತಾಯಿಸಿದ್ದರು.

ಸಿದ್ದರಾಮಯ್ಯ ಆಕ್ಷೇಪ

'ಹೊರರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಲು ವ್ಯವಸ್ಥೆ ಮಾಡಿದ್ದ ರೈಲುಗಳನ್ನು ಮುಖ್ಯಮಂತ್ರಿಗಳು ಹಠಾತ್ತನೆ ರದ್ದು ಮಾಡಿರುವುದು ಅಮಾನವೀಯ ನಿರ್ಧಾರ ಮಾತ್ರವಲ್ಲ, ಕಾರ್ಮಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ವಿರೋಧಸಿದ್ದರು.

ಆರ್ಥಿಕತೆ ಪುನರಾರಂಭಕ್ಕೆ ಸಿಎಂ ಯೋಜನೆ

ಆರ್ಥಿಕತೆ ಪುನರಾರಂಭಕ್ಕೆ ಸಿಎಂ ಯೋಜನೆ

ವಲಸೆ ಕಾರ್ಮಿಕರನ್ನು ರಾಜ್ಯದಲ್ಲಿರಿಸಿಕೊಂಡು ಕುಸಿದಿರುವ ಆರ್ಥಿಕತೆಯನ್ನು ಪುನಶ್ಚೇತಗೊಳಿಸುವ ಯೋಜನೆಯನ್ನು ಸಿಎಂ ಯಡಿಯೂರಪ್ಪ ಹಾಕಿಕೊಂಡಿದ್ದರು. ಕಾರ್ಮಿಕರಿಗೆ ಅಗತ್ಯತೆಯನ್ನು ಕೈಗಾರಿಕೆ ಮಾಲೀಕರು ವ್ಯವಸ್ಥೆ ಮಾಡಲಿದ್ದಾರೆ. ನೀವೆಲ್ಲ ಇಲ್ಲೆ ಇರಿ, ರಾಜ್ಯದ ಆರ್ಥಿಕತೆಗೆ ಸಹಾಯ ಮಾಡಿ ಎಂದು ಸಿಎಂ ಮನವಿ ಮಾಡಿದ್ದರು. ಆದರೆ, ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಅತಂತ್ರ ಸ್ಥಿತಿಯಲ್ಲಿ ಕಾರ್ಮಿಕರು

ಊರಿಗೆ ಹೋಗಲು ಕಾತುರದಿಂದ ಕಾಯುತ್ತಿದ್ದ ಕಾರ್ಮಿಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಿತ್ತು. ಇದರಿಂದ ನೂರಾರು ಕಾರ್ಮಿಕರು ಆ ಕಡ ಊರಿಗೆ ಹೋಗಲಾರದೆ, ಇತ್ತ ಆಹಾರ, ವಸತಿ ಇಲ್ಲದೆ ಅತಂತ್ರ ಸ್ಥಿತಿ ಎದುರಿಸುವಂತೆ ಆಯಿತು. ಸರ್ಕಾರಕ್ಕೆ ಶಾಪ ಹಾಕಿಕೊಂಡೇ ಹೆದ್ದಾರಿಗಳಲ್ಲಿ ಪ್ರಯಾಣ ಆರಂಭಿಸಿದರು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಸರ್ಕಾರ ಈಗ ನಿರ್ಧಾರ ಬದಲಿಸಿದೆ. ಮೇ 8 ರಿಂದ 15ರವರೆಗೂ ರೈಲಿನ ವ್ಯವಸ್ಥೆ ಮಾಡಲು ಸರ್ಕಾರ ತೀರ್ಮಾನಿಸಿದೆ.

English summary
Govt of Karnataka has written to others state Governments seeking their consent to operate trains to their states from 8 to 15 May for transportation of people stranded in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X