ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಸ್ಥಾನಗಳಲ್ಲಿ ಆನ್‌ಲೈನ್ ಪೂಜೆಗೆ ಚಿಂತನೆ, ಮತ್ತೆ ಪ್ರಸಾದ?

|
Google Oneindia Kannada News

ಬೆಂಗಳೂರು, ಮೇ 21: ಆನ್‌ಲೈನ್‌ ಶಿಕ್ಷಣದ ವಿಚಾರ ಹೆಚ್ಚು ಗಮನ ಸೆಳೆಯುತ್ತಿರುವ ಈ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜೆ ಆರಂಭಿಸಲು ಕರ್ನಾಟಕ ಸರ್ಕಾರ ಚಿಂತಿಸಿದೆ.

ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆ ರಾಜ್ಯದ ಪ್ರಮುಖ ದೇವಸ್ಥಾನಗಳು ಬಾಗಿಲು ಮುಚ್ಚಿವೆ. ಮಾರ್ಚ್ 24 ರಿಂದ ದೇವಸ್ಥಾನಗಳಲ್ಲಿ ಪೂಜೆ ನಡೆಯುತ್ತಿಲ್ಲ ಮತ್ತು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕೊಟ್ಟಿಲ್ಲ. ಈಗ ಆನ್‌ಲೈನ್ ಮೂಲಕ ಪೂಜೆ ಹಾಗೂ ದೇವಸ್ಥಾನದಲ್ಲಿ ನಡೆಯುವ ಇನ್ನಿತರ ಧಾರ್ಮಿಕ ಕಾರ್ಯಗಳ ವೀಕ್ಷಣೆಗೆ ಆನ್‌ಲೈನ್‌ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರಿನಲ್ಲೂ ಸಿಗುತ್ತೆ ತಿರುಪತಿ ಲಡ್ಡು: ಬೆಲೆಯಲ್ಲಿ 50ರಷ್ಟು ಆಫರ್ಬೆಂಗಳೂರಿನಲ್ಲೂ ಸಿಗುತ್ತೆ ತಿರುಪತಿ ಲಡ್ಡು: ಬೆಲೆಯಲ್ಲಿ 50ರಷ್ಟು ಆಫರ್

ಈ ಕುರಿತು ಮುಜರಾಯಿ ಇಲಾಖೆಯ ಆಯುಕ್ತರು ಎಲ್ಲ ಜಿಲ್ಲೆಯ ಜಿಲ್ಲಾಧಿಗಳು ಹಾಗೂ ದೇವಸ್ಥಾನಗಳ ಕಾರ್ಯನಿರ್ವಹಕರಿಗೆ ಪತ್ರೆ ಬರೆದಿದ್ದಾರೆ. ಅವರ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ನಡೆಯುವ ಸೇವಾ ಪೂಜಾ ಕೈಕಂರ್ಯಗಳನ್ನು, ಆಯಾ ದೇವಾಲಯಗಳ ರೂಢಿ, ಸಂಪ್ರದಾಯ ಮತ್ತು ಆಚರಣೆಗೆ ಒಳಪಟ್ಟು ಆನ್‌ಲೈನ್‌ ಮೂಲಕ ವೀಕ್ಷಣೆಯ ವ್ಯವಸ್ಥೆ ಒದಗಿಸಬಹುದಾದ ದೇವಸ್ಥಾನಗಳ ಪಟ್ಟಿ ನೀಡಲು ಮನವಿ ಮಾಡಲಾಗಿದೆ.

Karnataka Govt Planning To Live Stream Pooja In Temples

ಇದಕ್ಕಾಗಿ ನೂತನ ಆಪ್ ಮತ್ತು ವೆಬ್‌ಸೈಟ್‌ ತೆರೆಯಲು ಕೂಡ ಸರ್ಕಾರ ಚಿಂತನೆ ನಡೆಸಿದೆ. ಈ ವೆಬ್‌ಸೈಟ್‌ ಮತ್ತು ಮೊಬೈಲ್ ಆಪ್‌ಗೆ ಅಗತ್ಯ ಮಾಹಿತಿಗಳನ್ನು ನೀಡುವಂತೆ ರಾಜ್ಯದ 15 ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ದೇವಸ್ಥಾನದ ಕಾರ್ಯನಿರ್ವಹಿಕರಿಗೆ ಸೂಚಿಸಲಾಗಿದೆ.

ದೇವರ ಪೂಜೆ, ದೇವಸ್ಥಾನದಲ್ಲಿ ನಡೆಯುವ ಇನ್ನಿತರ ಪೂಜಾ ಕಾರ್ಯ, ಧಾರ್ಮಿಕ ಕಾರ್ಯಗಳನ್ನು ಆನ್‌ಲೈನ್‌ ವೀಕ್ಷಣೆ ಮಾಡುವ ಸೌಲಭ್ಯ ಮಾಡಬಹುದು. ಆದರೆ, ಭಕ್ತರಿಗೆ ಪ್ರಸಾದ ಸಿಗುತ್ತಾ ಎಂಬ ಕುತೂಹಲ ಸಾಮಾನ್ಯರನ್ನು ಕಾಡುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಆರಂಭವಾಗಿದೆ.

ಒಂದು ವೇಳೆ ಪ್ರಸಾದ ನೀಡುವುದಾದರೆ, ಅದಕ್ಕೆ ಯಾವ ಕ್ರಮ, ಆನ್‌ಲೈನ್‌ನಲ್ಲೆ ಬುಕ್ ಮಾಡಬೇಕಾ? ಮನೆಗೆ ತೆಗೆದುಕೊಂಡು ಬಂದು ತಲುಪಿಸುತ್ತಾರಾ? ಎಂಬ ಪ್ರಶ್ನೆಗಳು ಕಾಡುತ್ತಿದೆ.

English summary
Karnataka government Planning to do live stream Pooja and other rituals at all governmanet run major temples through Mobile App. Know more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X