ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀವು ಮಾವಿನ ಹಣ್ಣು ಆರ್ಡರ್ ಮಾಡಿದರೆ, ಅಂಚೆ ಮೂಲಕ ಹಣ್ಣುಗಳು ನಿಮ್ಮ ಮನೆ ಬಾಗಿಲಿಗೆ

|
Google Oneindia Kannada News

ಬೆಂಗಳೂರು, ಮೇ 16: ರಾಜ್ಯ ಸರ್ಕಾರ ಆನ್‌ಲೈನ್‌ನಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಇಂದಿನಿಂದ ಆನ್‌ಲೈನ್‌ನಲ್ಲಿ ರೈತ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಿದೆ. 2020ರಲ್ಲಿ ಕರ್ನಾಟಕ ಸರ್ಕಾರವು ಕರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಮಧ್ಯೆ ಆನ್‌ಲೈನ್ ಮಾರ್ಕೆಟಿಂಗ್ ಮತ್ತು ಅಂಚೆ ಸೇವೆಯನ್ನು ಬಳಸಿಕೊಂಡು ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಗೆ ಮಾವಿನ ಹಣ್ಣನ್ನು ಮಾರಾಟ ಮಾಡಿತ್ತು ಆದರೆ, ಈ ಬಾರಿ ವೆಬ್‌ಸೈಟ್‌ ಬಳಸಿಕೊಂಡು ಆನ್‌ಲೈನ್ ವ್ಯಾಪಾರದ ಮೂಲಕ ಮಾವು ಮಾರಾಟವಾಗಲಿದೆ.

ನೀವು ಹಣ್ಣುಗಳನ್ನು ತಿಂದು ಸವಿಯಬೇಕೆಂದು ಅಂದುಕೊಂಡಿದ್ದರೆ ಅಥವಾ ಮಾವು ಬೇಕಾದರೆ ನಿಮಗೊಂದು ಸಿಹಿ ಸುದ್ದಿ ಇದೆ. ಕರ್ನಾಟಕ ಸರ್ಕಾರವು ಇಂದಿನಿಂದ ಆನ್‌ಲೈನ್‌ನಲ್ಲಿ ಮಾವಿನಹಣ್ಣುಗಳನ್ನು ಮಾರಾಟ ಮಾಡುತ್ತಿದೆ ಇದರಲ್ಲಿ ನೀವು ವಿವಿಧ ರೀತಿಯ ಮಾವಿನಹಣ್ಣುಗಳನ್ನು ಆನ್‌ಲೈನ್‌ನಲ್ಲಿ ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMDMCL) ಭಾರತೀಯ ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮಾವುಗಳನ್ನು ತಲುಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೆಬ್‌ಸೈಟ್‌ನ್ನು ಬಳಸಿ ಆನ್‌ಲೈನ್‌ನಲ್ಲಿ ಮಾವು ಮಾರಾಟಕ್ಕಾಗಿ ಪ್ರಾರಂಭಿಸಲಾಗಿದ್ದು, ಇದರಲ್ಲಿ ವಿವಿಧ ರೀತಿಯ ಮಾವಿನಹಣ್ಣುಗಳನ್ನು ಖರೀದಿಸಬಹುದು.

ರಾಮನಗರ ಮಾವು ಮೇಳದಲ್ಲಿ ಬಗೆಬಗೆಯ ಮಾವುಗಳು!ರಾಮನಗರ ಮಾವು ಮೇಳದಲ್ಲಿ ಬಗೆಬಗೆಯ ಮಾವುಗಳು!

ಕರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಮಧ್ಯೆ 2020ರಲ್ಲಿ ಕೆಎಸ್‌ಎಂಡಿಎಂಸಿಎಲ್ ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಂದ ಮಾವಿನ ಹಣ್ಣಿನ ಮಾರಾಟವನ್ನು ಪ್ರಾರಂಭಿಸಿದೆ. ಕೆಎಸ್‌ಎಂಡಿಎಂಸಿಎಲ್ 2021ರಲ್ಲಿ ಇಂಡಿಯಾ ಪೋಸ್ಟ್ ಮೂಲಕ ಮಾವಿನಹಣ್ಣನ್ನು ತಲುಪಿಸುತ್ತಿದೆ. ಆದರೆ, ಈ ಬಾರಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾವು ಮಾರಾಟವಾಗಲಿದ್ದು ಈ ವರ್ಷವೂ ಇಲಾಖೆ ಉತ್ತಮ ಖರೀದಿ ನಿರೀಕ್ಷೆಯಲ್ಲಿದೆ.

Karnataka govt KSMDMCL selling mangoes online

ಗ್ರಾಹಕರು ಆನ್‌ಲೈನ್‌ನಲ್ಲಿ ಮಾವು ಖರೀದಿಸಲು ಆಸಕ್ತಿ

ಕೆಎಸ್‌ಎಂಡಿಎಂಸಿಎಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ರೈತರು ಮತ್ತು ಗ್ರಾಹಕರು ಈ ಉಪಕ್ರಮದಿಂದ ಪ್ರಯೋಜನ ಪಡೆದಿದ್ದಾರೆ. 2020ರಲ್ಲಿ ರಾಜ್ಯದಾದ್ಯಂತ ಒಟ್ಟು 35 ಸಾವಿರ ಗ್ರಾಹಕರಿಗೆ 100 ಟನ್ ಮಾವಿನ ಹಣ್ಣಗಳನ್ನು ಸರಬರಾಜು ಮಾಡಲಾಗಿದೆ. ಇನ್ನು ಕಳೆದ 2021ರಲ್ಲಿ ಮಾವಿನ ಇಳುವರಿ ಕಡಿಮೆಯಾದ ನಂತರವೂ 45 ಸಾವಿರ ಗ್ರಾಹಕರಿಗೆ 79 ಟನ್ ಮಾವು ಮಾರಾಟವಾಗಿದೆ. ಗ್ರಾಹಕರು ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ ಎಂದರು.

Karnataka govt KSMDMCL selling mangoes online

ಮಾವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ ವೈಬ್‌ಸೈಟ್ ಭೇಟಿ ನೀಡಿ

ಆನ್‌ಲೈನ್ ಮಾವು ಮಾರಾಟ ಪೋರ್ಟಲ್ ನಲ್ಲಿ ಮಾವು ಮಾರಾಟ ಮಾಡುವ ರೈತರ ಹೆಸರು, ಮಾವಿನ ತಳಿಗಳು ಮತ್ತು ಮಾವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಇದರೊಂದಿಗೆ ಗ್ರಾಹಕರು ಆರ್ಡರ್ ಮಾಡಿದ ನಂತರ, ರೈತರಿಗೆ ಪಠ್ಯ ಸಂದೇಶವನ್ನು ಕಳುಹಿಸಲಾಗುತ್ತದೆ. ನಂತರ ರೈತರು ಹಣ್ಣುಗಳನ್ನು ಪ್ಯಾಕ್ ಮಾಡಿ ಅಂಚೆ ಕಚೇರಿ (ಜಿಪಿಒ) ಬೆಂಗಳೂರಿಗೆ ಕಳುಹಿಸುತ್ತಾರೆ. ಮಾವುಗಳನ್ನು GPOಯಿಂದ ಅವರ ಗಮ್ಯಸ್ಥಾನಕ್ಕೆ ರವಾನಿಸಲಾಗುತ್ತದೆ.

Recommended Video

Jos Buttler Virat ದಾಖಲೆ ಮುರಿಯೋದಿಲ್ಲ | Oneindia Kannada

English summary
KSMDMCL of the Karnataka Government has been Selling mangoes online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X