ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ರೋಗಿಗಳಿಗೆ ಆಮ್ಲಜನಕ ಬಳಕೆ: ಸರ್ಕಾರದ ಹೊಸ ನಿಯಮ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ನಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದ್ರವ ಆಮ್ಲಜನಕದ ಕೊರತೆ ಉದ್ಭವಿಸಿದ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಪ್ರಕರಣದಿಂದ ಪ್ರಕರಣದ ಆಧಾರದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಬಳಕೆ ಮಾಡಬೇಕು ಎಂದು ವೈದ್ಯಕೀಯ ಸಂಸ್ಥೆಗಳಿಗೆ ಶಿಷ್ಟಾಚಾರವನ್ನು ನಿಗದಿಪಡಿಸಿದೆ.

Recommended Video

ಬೆಂಗಳೂರಿನಲ್ಲೊಬ್ಬ Dhoni's ಭಯಂಕರ ಅಭಿಮಾನಿ | Oneindia Kannada

ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ಕಿಮ್ಸ್) ಸೋಮವಾರ 47 ಗಂಭೀರ ಅಸ್ವಸ್ಥ ರೋಗಿಗಳನ್ನು ದ್ರವ ಆಮ್ಲಜನಕದ ಕೊರತೆ ಕಾರಣ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಬೇಕಾದ ಘಟನೆಯ ಬಳಿಕ ಸರ್ಕಾರ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ಕೊರೊನಾ random ಟೆಸ್ಟ್ ನಿಲ್ಲಿಸುವಂತೆ ಉಮೇಶ ಕತ್ತಿ ಒತ್ತಾಯಕೊರೊನಾ random ಟೆಸ್ಟ್ ನಿಲ್ಲಿಸುವಂತೆ ಉಮೇಶ ಕತ್ತಿ ಒತ್ತಾಯ

ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ದ್ರವ ಆಮ್ಲಜನಕದ ಪ್ರಮಾಣವನ್ನು ಅಂದಾಜು ಮಾಡಿರಲಿಲ್ಲ. ಇದು ಯಾರ ತಪ್ಪೂ ಅಲ್ಲ ಎಂದು ಸಚಿವ ಕೆ. ಸುಧಾಕರ್ ಹೇಳಿಕೆ ನೀಡಿದ್ದರು. ಮುಂದೆ ಓದಿ.

ಆಮ್ಲಜನಕ ಬಳಕೆಗೆ ಮಾರ್ಗದರ್ಶಿ

ಆಮ್ಲಜನಕ ಬಳಕೆಗೆ ಮಾರ್ಗದರ್ಶಿ

ಆದರೆ ಈಗ ಈ ಸಂಬಂಧ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ವೈದ್ಯಕೀಯ ಸಿಬ್ಬಂದಿ ವಿವಿಧ ಸನ್ನಿವೇಶಗಳಿಗೆ ಅನುಗುಣವಾಗಿ ಹೇಗೆ ಮತ್ತು ಯಾವಾಗ ಆಮ್ಲಜನಕವನ್ನು ಬಳಸಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡಿದೆ. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆಯನ್ನಾಗಿ ಆಕ್ಸಿಜನ್ ಬಳಕೆ ಮಾಡುವಾಗ ಮಾರ್ಗದರ್ಶಿಗಳನ್ನು ಪಾಲಿಸಬೇಕು ಎಂದು ಸರ್ಕಾರ ಹೇಳಿದೆ.

ಎಗ್ಗುಸಿಗ್ಗಿಲ್ಲದೆ ಆಕ್ಸಿಜನ್ ಬಳಕೆ

ಎಗ್ಗುಸಿಗ್ಗಿಲ್ಲದೆ ಆಕ್ಸಿಜನ್ ಬಳಕೆ

'ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಅನಿರೀಕ್ಷಿತ ಪ್ರಮಾಣದಲ್ಲಿ ಆಮ್ಲಜನಕಕ್ಕೆ ಬೇಡಿಕೆ ಏರಿಕೆಯಾಗಿದೆ. ಕ್ಲಿನಿಕಲ್ ಪರಿಣತರ ಸಮಿತಿಯು ಆಮ್ಲಜನಕದ ಬಳಕೆಯ ಕುರಿತು ವಿಶ್ಲೇಷಣೆ ನಡೆಸಿದ್ದು, ಸೂಕ್ತವಾದ ನಿರ್ವಹಣೆ ಇಲ್ಲದೆ ಮನಬಂದಂತೆ ಮತ್ತು ಅತಿಯಾಗಿ ಆಮ್ಲಜನಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ' ಎಂದು ಕರ್ನಾಟಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೊರೊನಾ ವೈರಸ್ ನಿಯಂತ್ರಣ ಯಾವಾಗ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ...ಕೊರೊನಾ ವೈರಸ್ ನಿಯಂತ್ರಣ ಯಾವಾಗ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ...

ಸಂಪನ್ಮೂಲ ಮತ್ತು ಹಣ ವ್ಯರ್ಥ

ಸಂಪನ್ಮೂಲ ಮತ್ತು ಹಣ ವ್ಯರ್ಥ

'ಮಿತಿಮೀರಿದ ಬಳಕೆಯು ಆರೋಗ್ಯದ ಮೇಲೆ ಮತ್ತಷ್ಟು ಹಾನಿಯುಂಟು ಮಾಡುವುದರ ಜತೆಗೆ, ಅತ್ಯಮೂಲ್ಯ ಸಂಪನ್ಮೂಲದ ವ್ಯರ್ಥದಿಂದ ಸಂಪನ್ಮೂಲದ ಕೊರತೆ ಮತ್ತು ಹಣದ ವ್ಯರ್ಥಕ್ಕೆ ಕಾರಣವಾಗುತ್ತಿದೆ' ಎಂದು ಕೂಡ ಸರ್ಕಾರ ಹೇಳಿದೆ.

ಎಷ್ಟು ಪ್ರಮಾಣದ ಆಮ್ಲಜನಕ?

ಎಷ್ಟು ಪ್ರಮಾಣದ ಆಮ್ಲಜನಕ?

ಅಮೂಲ್ಯವಾದ ಲಿಕ್ವಿಡ್ ಆಕ್ಸಿಜನ್‌ಗಳನ್ನು ಹೇಗೆ ಮತ್ತು ಯಾವಾಗ ಬಳಸಬೇಕು ಎಂಬುದನ್ನು ಸರ್ಕಾರ ನೀತಿ ನಿಯಮಗಳನ್ನು ರೂಪಿಸಿದೆ. ವಿಶೇಷ ಮಾಸ್ಕ್‌ಗಳ ಅಗತ್ಯವಿರುವವರಿಂದ ಹಿಡಿದು ಸರಳವಾದ ಮಾಸ್ಕ್ ಸಾಕಾಗುವ ರೋಗಿಗಳವರೆಗೆ ಯಾವ ಪ್ರಮಾಣದಲ್ಲಿ ಆಮ್ಲಜನಕವನ್ನು ಬಳಸಬಹುದು ಎಂಬ ವಿವರವಾದ ಸಂಖ್ಯಾ ಪ್ರಮಾಣವನ್ನು ನಿಗದಿಪಡಿಸಿದೆ. ರೋಗಿಯ ರೋಗ ಲಕ್ಷಣ ಅಥವಾ ಅವರ ಸ್ಥಿತಿಯ ಆಧಾರದಲ್ಲಿ ಮಾತ್ರವೇ ಆಮ್ಲಜನಕ ಬಳಕೆ ಮಾಡುವಂತೆ ಕೂಡ ಸೂಚನೆ ನೀಡಲಾಗಿದೆ.

ಕೊರೊನಾದಿಂದ ಊರಿಗೆ ಮರಳಿದ ವಲಸೆ ಕಾರ್ಮಿಕರಿಗೆ ಜಾತಿ ತಾರತಮ್ಯದ ಭಾರಕೊರೊನಾದಿಂದ ಊರಿಗೆ ಮರಳಿದ ವಲಸೆ ಕಾರ್ಮಿಕರಿಗೆ ಜಾತಿ ತಾರತಮ್ಯದ ಭಾರ

English summary
Karnataka Govt Issued Protocol for Liquid Oxygen Use in Hospitals Based on Various Scenarios after the incident in KIMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X