ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

75 ಸಾವಿರ ಬಿಡಿಎ ನಿವೇಶನಗಳ ಸಕ್ರಮಕ್ಕೆ ಸಂಪುಟ ಅಸ್ತು

|
Google Oneindia Kannada News

ಬೆಂಗಳೂರು, ಮೇ 14: ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಶ್ರಮಿಕ ವರ್ಗಕ್ಕೆ ಎರಡನೇ ಸುತ್ತಿನ ಪ್ಯಾಕೇಜ್ ಘೋಷಿಸಲಾಗಿದೆ. ಇದರ ಜತೆಗೆ ರಿಯಲ್ ಎಸ್ಟೇಟ್ ಗೆ ಬೂಸ್ಟ್ ನೀಡಲು ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಮುಂದಾಗಿದೆ. ಸುಮಾರು 75 ಸಾವಿರ ಬಿಡಿಎ ನಿವೇಶನಗಳನ್ನು ಸಕ್ರಮಗೊಳಿಸಲಾಗುತ್ತಿದೆ.

ಲಾಕ್ ಡೌನ್ ಸಂಕಷ್ಟದ ಪರಿಹಾರ ಪ್ಯಾಕೇಜ್ ನ ಮುಂದುವರೆದ ಭಾಗಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಸಂಪುಟ ಸಭೆಯಲ್ಲಿ ಮುಖ್ಯವಾಗಿ ನಗರ ಮತ್ತು ಟೌನ್ ಪ್ಲಾನಿಂಗ್ 2015 ಕಾಯ್ದೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ

ಸದ್ಯ ಎಲ್ಲಾ ಜಾಗವನ್ನು ಅಭಿವೃದ್ದಿ ಮಾಡಿ ಮಾರಾಟ ಮಾಡಬೇಕಿದೆ. ಅದರಲ್ಲಿ ಹಂತ ಹಂತವಾಗಿ ಅಭಿವೃದ್ದಿಪಡಿಸಿ ಹಂತ ಹಂತವಾಗಿ ನಿವೇಶನ ಮಾರಾಟ ಮಾಡಲು ಅವಕಾಶ ‌ನೀಡಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಶೇ 40 ನಿವೇಶನ ಬಿಡುಗಡೆ ಮಾಡಲು ತೀರ್ಮಾನ ತಿರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು. ಹೀಗಾಗಿ‌ ಈ ಈ ಕಾಯ್ದೆಯಿಂದ ರಿಯಲ್ ಎಸ್ಟೇಟ್ ಗೆ ಉತ್ತೇಜನ ಸಿಗಲಿದೆ.

 12 ವರ್ಷಗಳಿಗೂ ಹಿಂದೆ ನಿರ್ಮಿಸಿರುವ ಮನೆ

12 ವರ್ಷಗಳಿಗೂ ಹಿಂದೆ ನಿರ್ಮಿಸಿರುವ ಮನೆ

ಅಕ್ರಮ ಸಕ್ರಮ: ಸಚಿವ ಸಂಪುಟ ಸಭೆಯಲ್ಲಿ ಬಿಡಿಎ ನಿವೇಶನಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳ ಸಕ್ರಮಕ್ಕೆ ಒಪ್ಪಿಗೆ ಸೂಚಿಸಲಾಗಿದೆ. 12 ವರ್ಷಗಳಿಗೂ ಹಿಂದೆ ನಿರ್ಮಿಸಿರುವ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಅವರು ಸಭೆ ನಂತರ ತಿಳಿಸಿದರು.

 ಬಿಡಿಎ ಕಾಯ್ದೆ ಉಲ್ಲಂಘಿಸಿದ ಮನೆ ಸಕ್ರಮ

ಬಿಡಿಎ ಕಾಯ್ದೆ ಉಲ್ಲಂಘಿಸಿದ ಮನೆ ಸಕ್ರಮ

ನಗರದಲ್ಲಿ ಕಳೆದ 12 ವರ್ಷಗಳಿಂದ ಬಿಡಿಎ ಕಾಯ್ದೆ ಉಲ್ಲಂಘಿಸಿ, ಮನೆ ಕಟ್ಟಿದವರಿಗೆ ದಂಡ ಪಾವತಿಸಿದ್ರೆ ಅಕ್ರಮ ಸಕ್ರಮಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಬಿಡಿಎ ಕಾಯ್ದೆ ಉಲ್ಲಂಘಿಸಿ ಮನೆ ಕಟ್ಟಿದವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

 ದಂಡ ಪ್ರಮಾಣ ಎಷ್ಟು?

ದಂಡ ಪ್ರಮಾಣ ಎಷ್ಟು?

ದಂಡ ಪ್ರಮಾಣ ಎಷ್ಟು?: 20X30 ನಿವೇಶನ(ಸೈಟ್ )ದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದವರು ಹಾಲಿ ಮಾರುಕಟ್ಟೆ ಮೌಲ್ಯದ ಶೇ.10ರಷ್ಟು ದಂಡ ವಿಧಿಸಲಾಗುತ್ತದೆ. ಈ ದಂಡ ಕಟ್ಟಿ ನಿವೇಶನ ಹಾಗೂ ಬಿಲ್ಟ್ ಅಪ್ ಏರಿಯಾವನ್ನು ಸಕ್ರಮಗೊಳಿಸಿಕೊಳ್ಳಬಹುದು.

 ಖಾಲಿ ನಿವೇಶನ, ಹೊಸದಾಗಿ ಮನೆ ನಿರ್ಮಾಣ?

ಖಾಲಿ ನಿವೇಶನ, ಹೊಸದಾಗಿ ಮನೆ ನಿರ್ಮಾಣ?

ಇದೇ ರೀತಿ 30 X40 ನಿವೇಶನದಲ್ಲಿ ಮನೆ ಕಟ್ಟಿದ್ದವರಿಗೆ ಶೇ.20ರಷ್ಟು ದಂಡ. 40 X50 ನಿವೇಶನದಲ್ಲಿ ಮನೆ ಕಟ್ಟಿದ್ದವರಿಗೆ ಶೇ.40ರಷ್ಟು ದಂಡ ವಿಧಿಸಲಾಗುತ್ತದೆ. ಆದರೆ, ಈ ಸೌಲಭ್ಯವು ಖಾಲಿ ನಿವೇಶನ, ಹೊಸದಾಗಿ ಮನೆ ನಿರ್ಮಿಸಿದವರಿಗೆ ಲಭ್ಯವಿರುವುದಿಲ್ಲ. ಇಂಥವರಿಗೆ ದಂಡದ ಪ್ರಮಾಣವಿಲ್ಲ, ಅಕ್ರಮ ನಿವೇಶನ ಸಕ್ರಮಕ್ಕೂ ಅವಕಾಶವಿಲ್ಲ. ಅಕ್ರಮ ಸಕ್ರಮದಿಂದ 50 ಸಾವಿರ ಮಂದಿಗೆ ಪ್ರಯೋಜನ ಪಡೆಯಲಿದ್ದಾರೆ.

English summary
Karnataka Govt Financial Package: Cabinet meeeting chaired by BS Yediyurappa took major decision on BDA sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X