ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಥ್ಲಿಟ್‌ ಹಿಮಾ ದಾಸ್‌ಗೆ 10 ಲಕ್ಷ ಬಹುಮಾನ ಘೋಷಿಸಿದ ಪರಮೇಶ್ವರ್‌

By Nayana
|
Google Oneindia Kannada News

ಬೆಂಗಳೂರು, ಜು.14: ಫಿನ್‌ಲ್ಯಾಂಡ್‌ನ ಟ್ಯಾಂಪಿಯರ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನ ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಚಿನ್ನಾ ಗೆದ್ದು ಇತಿಹಾಸ ನಿರ್ಮಿಸಿರುವ 'ಹಿಮಾದಾಸ್' ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು 10 ಲಕ್ಷ ರುಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಭಾಗವಾಗಿ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ.‌ ಅಥ್ಲೆಟಿಕ್ ಟ್ರ್ಯಾಕ್‌ ವಿಭಾಗದಲ್ಲಿ ಚಿನ್ನಾ ಗೆದ್ದ ಭಾರತದಲ್ಲೇ ಮೊದಲ ಕ್ರೀಡಾ ಪಟು ಹಿಮಾದಾಸ್ ಅವರು‌. ಹಳ್ಳಿ ಹುಡುಗಿಯಾದ ಹಿಮಾದಾಸ್ ಅವರ ಈ ಸಾಧನೆ ಲಕ್ಷಾಂತರ ಯುವ ಕ್ರೀಡಾಪಟಗಳಿಗೆ ಮಾದರಿಯಾಗಿದೆ ಎಂದು ಪರಮೇಶ್ವರ್ ಶ್ಲಾಘಿಸಿದ್ದಾರೆ.

ಹಿಮಾ ದಾಸ್ ದೇಶಭಕ್ತಿ ಮೆಚ್ಚಿಕೊಂಡ ಪ್ರಧಾನಿ ನರೇಂದ್ರ ಮೋದಿ

ನಾನೂ ಕೂಡ ಅಥ್ಲೆಟಿಕ್ ಆಗಿದ್ದವನು. ಕಾಲೇಜು ದಿನಗಳಲ್ಲಿ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸ್ಪರ್ಥೆಯಲ್ಲಿ ಗೆದ್ದಿದೆ. ಇವರ 10.9 ಸೆಕೆಂಡ್‌ನ ಗೆಲುವನ್ನು ಇನ್ನೂ ಯಾರೂ ಮುರಿಯಲು ಸಾಧ್ಯವಾಗಿಲ್ಲ.

Karnataka govt declares Rs. 10 lakh award to Hima Das who won gold in U20 world athletics

ಅಲ್ಲದೇ, ಸಾಕಷ್ಟು ರಾಷ್ಟ್ರೀಯ ಮಟ್ಟದಲ್ಲಿ ಜಯಗಳಿಸಿದ್ದೆ.‌ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ತರಬೇತಿ ಕೂಡ ಪಡೆದಿದ್ದೆ ಎಂದು ಕ್ರೀಡೆ ಮೇಲಿರುವ ಅವರ ಆಸಕ್ತಿ ಬಿಚ್ಚಿಟ್ಟಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷರು ಹಾಗೂ ಆಲ್‌ಇಂಡಿಯಾ ಅಥ್ಲೆಟಿಕ್ ಫೆಡರೇಷನ್‌ನ ಉಪಾಧ್ಯಕ್ಷರಾಗಿದ್ದಾರೆ. ಹಿಮಾದಾಸ್ ಅವರಂತೆ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ತೋರಿ, ಮುಂದೆ ಬರಬೇಕು ಎಂದು ಕರೆನೀಡಿದ್ದಾರೆ.

English summary
Deputy chief minister Dr. G. Parameshwar has announced Rs.10 lakhs cash award to Indian athlete Hima Das who won gold medal in under 20 world athletics championship held in Finland on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X