ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೀಜ್ ಆದ ವಾಹನಗಳನ್ನು ನೀಡುವ ಬಗ್ಗೆ ಭಾಸ್ಕರ್ ರಾವ್ ಟ್ವೀಟ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ್ದ ಕಾರಣ ಪೊಲೀಸರು ವಾಹನಗಳನ್ನು ಸೀಜ್‌ ಮಾಡಿದ್ದರು. ಈ ವಾಹನಗಳನ್ನು ವಾಪಸ್ ನೀಡುವ ಬಗ್ಗೆ ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಬೆಂಗಳೂರು ಪೊಲೀಸರ ವಶದಲ್ಲಿ 46 ಸಾವಿರ ವಾಹನಗಳು! ಬೆಂಗಳೂರು ಪೊಲೀಸರ ವಶದಲ್ಲಿ 46 ಸಾವಿರ ವಾಹನಗಳು!

''ವಶಪಡಿಸಿಕೊಂಡ ವಾಹನಗಳನ್ನು 1/5/2020 ರಿಂದ ಮಾಲೀಕರಿಗೆ ವಾಪಸ್ ನೀಡಲು ನಿರ್ಧರಿಸಲಾಗಿದೆ. ದಾಖಲೆಗಳನ್ನು ಪರಿಶೀಲನೆ ಮಾಡಿ, ಮೊದಲು ವಶಕ್ಕೆ ಪಡೆದುಕೊಂಡು ವಾಹನವನ್ನು ಮೊದಲು ವಾಪಸ್ ನೀಡಲಾಗುತ್ತದೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಟ್ವೀಟ್ ಮಾಡಿದ್ದಾರೆ.

Seized Vehicle Will Return From Tomorrow Tweets Bhaskar Rao Tweets

"ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡ ವಾಹನಗಳನ್ನು ಮಾಲೀಕರಿಗೆ ಮೇ 1 ರಿಂದ ವಾಪಸ್ ನೀಡಲು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಅನುಮೋದನೆ ನೀಡಿದ್ದಾರೆ" ಎಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.

ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ರಸ್ತೆಗೆ ಬಂದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 47,258 ಸಾವಿರ ಜನರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಲ್ಲಿ 1168 ಆಟೋಗಳು ಹಾಗೂ 44,081 ಬೈಕ್‌ಗಳು ಇವೆ.

English summary
Seized vehicle will return from tomorrow Bangalore police commissioner Bhaskar Rao tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X