ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ನವೆಂಬರ್ 20 : ಬೆಂಗಳೂರು ನಗರದ ಸುತ್ತಾ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸುಮಾರು 17 ಸಾವಿರ ಕೋಟಿ ರೂ.ಗಳ ಯೋಜನಗೆ ಸರ್ಕಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ನಿರ್ಮಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಕೊಡಲಾಗಿದೆ. 12 ವರ್ಷಗಳ ಹಿಂದಿನ ಯೋಜನೆಗೆ ಈಗ ಮರುಜೀವ ಸಿಕ್ಕಿದೆ.

ಬೆಂಗಳೂರು-ಮೈಸೂರು 6 ಪಥ ರಸ್ತೆ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭಬೆಂಗಳೂರು-ಮೈಸೂರು 6 ಪಥ ರಸ್ತೆ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭ

ಬೆಂಗಳೂರು ನಗರದ ಸುತ್ತ 65 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವಾಗಲಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ರಸ್ತೆಗಳಲ್ಲಿ ಟೋಲ್ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.

ಲಘು ವಾಹನ, ಬಸ್‌ಗಳ ಸಂಚಾರಕ್ಕೆ ಸಂಪಾಜೆ ಘಾಟ್ ಮುಕ್ತಲಘು ವಾಹನ, ಬಸ್‌ಗಳ ಸಂಚಾರಕ್ಕೆ ಸಂಪಾಜೆ ಘಾಟ್ ಮುಕ್ತ

'ಯೋಜನೆಗಾಗಿ ರೈತರಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. 2013ರ ಭೂ ಸ್ವಾಧೀನ ಕಾಯ್ದೆಯಡಿ ರೈತರಿಗೆ ಪರಿಹಾರ ನೀಡಲಾಗುತ್ತದೆ' ಎಂದು ಸಂಪುಟ ಸಭೆ ಬಳಿಕ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.....

ಹೆದ್ದಾರಿಯಲ್ಲಿ ಕೆಎಂಎಫ್‌ ಕೌಂಟರ್‌ಗೆ ಜನಪ್ರತಿನಿಧಿಗಳ ಅಡ್ಡಗಾಲುಹೆದ್ದಾರಿಯಲ್ಲಿ ಕೆಎಂಎಫ್‌ ಕೌಂಟರ್‌ಗೆ ಜನಪ್ರತಿನಿಧಿಗಳ ಅಡ್ಡಗಾಲು

ಫೆರಿಫೆರಲ್ ರಿಂಗ್ ರಸ್ತೆ

ಫೆರಿಫೆರಲ್ ರಿಂಗ್ ರಸ್ತೆ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 65 ಕಿ.ಮೀ. ಉದ್ದದ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ವಾಹನಗಳು ನಗರವನ್ನು ಪ್ರವೇಶಿಸಿದೇ ಬೇರೆ, ಬೇರೆ ಜಿಲ್ಲೆಗಳಿಗೆ ತೆರಳುವ ರಸ್ತೆಗೆ ಸೇರಬಹುದಾಗಿದೆ. 12 ವರ್ಷದ ಹಿಂದಿನ ಯೋಜನೆಗೆ ಈಗ ಸರ್ಕಾರ ಒಪ್ಪಿಗೆ ಕೊಟ್ಟಿದೆ.

ಬೆಂಗಳೂರು ನಗರದ ಸುತ್ತಾ ರಸ್ತೆ

ಬೆಂಗಳೂರು ನಗರದ ಸುತ್ತಾ ರಸ್ತೆ

ಪ್ರಸ್ತುತ ಇರುವ ನೈಸ್ ರಸ್ತೆ ತುಮಕೂರು ರಸ್ತೆ-ಮಾಗಡಿ ರಸ್ತೆ-ಮೈಸೂರು ರಸ್ತೆ-ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದೆ. ಈಗ ನಿರ್ಮಾಣವಾಗಲಿರುವ ಫೆರಿಫೆರಲ್ ರಿಂಗ್ ರಸ್ತೆ ಹೊಸೂರು ರಸ್ತೆ-ಹಳೆ ಮದ್ರಾಸ್ ರಸ್ತೆ-ತುಮಕೂರು ರಸ್ತೆಗೆ ಸಂಪರ್ಕವನ್ನು ಕಲ್ಪಿಸಲಿದೆ. ಇದರಿಂದಾಗಿ ಬೆಂಗಳೂರು ನಗರದ ಸುತ್ತಲೂ ರಿಂಗ್ ರಸ್ತೆ ನಿರ್ಮಾಣವಾಗಲಿದೆ.

12 ವರ್ಷದ ಹಿಂದಿನ ಯೋಜನೆ

12 ವರ್ಷದ ಹಿಂದಿನ ಯೋಜನೆ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತವಿದ್ದಾಗ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆಗ ಯೋಜನೆಗೆ ಸುಮಾರು 3,800 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಪ್ರಸ್ತಾವನೆಗೆ ಆಗ ಒಪ್ಪಿಗೆ ಸಿಕ್ಕಿರಲಿಲ್ಲ. 12 ವರ್ಷಗಳ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಪ್ರಸ್ತಾವನೆಯನ್ನು ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆಯಲಾಗಿದೆ.

17 ಸಾವಿರ ಕೋಟಿ ವೆಚ್ಚ

17 ಸಾವಿರ ಕೋಟಿ ವೆಚ್ಚ

65 ಕಿ.ಮೀ. ಉದ್ದದ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 17 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 75 ಮೀಟರ್ ಅಗಲದ ರಸ್ತೆ ನಿರ್ಮಾಣವಾಗುತ್ತದೆ. 1910 ಎಕರೆ ಜಮೀನನ್ನು ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಇದಕ್ಕೆ ಸುಮಾರು 4500 ಕೋಟಿ ವೆಚ್ಚವಾಗಲಿದೆ. ಟೋಲ್ ಮೂಲಕ ಆದಾಯವನ್ನು ಸಂಗ್ರಹ ಮಾಡಲಾಗುತ್ತದೆ.

2013ರ ಭೂ ಸ್ವಾಧೀನ ಕಾಯ್ದೆ

2013ರ ಭೂ ಸ್ವಾಧೀನ ಕಾಯ್ದೆ

ಜಪಾನ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿ ಮತ್ತು ಎನ್‌ಎಚ್‌ಎಐ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಿವೆ. ಭೂ ಸ್ವಾಧೀನವಾದ ಬಳಿಕ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ. 2013ರ ಭೂ ಸ್ವಾಧೀನ ಕಾಯ್ದೆ ಅನ್ವಯ ರೈತರಿಗೆ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ.

English summary
Karnataka government cleared the long-pending 65 km Peripheral Ring Road (PRR) project in the cabinet meeting. Project will cover the Hosur Road-Old Madras Road-Tumakuru Road around the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X