ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಕಂಪನಿಗಳಿಗೆ 2022ರವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸರ್ಕಾರ ಸಲಹೆ

|
Google Oneindia Kannada News

ಬೆಂಗಳೂರು, ಆಗಸ್ಟ್ 24: ಕರ್ನಾಟಕ ಸರ್ಕಾರವು ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ ವರೆಗಿನ ರಸ್ತೆಗಳಲ್ಲಿ ತೆರಳುವ ಐಟಿ ಕಂಪನಿ ಉದ್ಯೋಗಿಗಳಿಗೆ 2022ರ ಡಿಸೆಂಬರ್ ವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಕೇಳಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮಾತನಾಡಿ, ಆ ಮಾರ್ಗದಲ್ಲಿ ಸರ್ಕಾರ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಕಾರಣ ಈ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಅಗತ್ಯವಿದ್ದು, ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸೂಚಿಸಲಾಗಿದೆ.

ಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭ

ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಆರ್ ಪುರಂವರೆಗೆ ಹೊರ ವರ್ತುಲ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ನಿರ್ಮಾಣ ಕಾರ್ಯಗಳನ್ನು ಆರಂಭಿಸುತ್ತಿದೆ. ಇದರ ನಿರ್ಮಾಣ ಕಾರ್ಯ ಮುಗಿಯಲು ಕನಿಷ್ಠ 1.5ರಿಂದ 2 ವರ್ಷ ಹಿಡಿಯಬಹುದು. ಈ ಭಾಗಗಳಲ್ಲಿ ದೊಡ್ಡ ಟೆಕ್ ಪಾರ್ಕ್ ಮತ್ತು ಐಟಿ ಕಂಪನಿಗಳು ಕ್ಯಾಂಪಸ್‌ಗಳನ್ನು ಹೊಂದಿವೆ. ಹಾಗೂ ದಿನವಿಡೀ ಹೆಚ್ಚಿನ ಪ್ರಮಾಣದ ಟ್ರಾಫಿಕ್ ಕೂಡ ಈ ಭಾಗದಲ್ಲಿ ಇರುತ್ತದೆ.

 Karnataka Govt Asks IT Companies To Extend WFH Till Dec 2022

ಓಆರ್‌ಆರ್ 6 ಲೈನ್‌ಗಳನ್ನು ಹೊಂದಿದ್ದರೂ ಕೂಡ ಸರ್ವೀಸ್ ರಸ್ತೆಗಳಲ್ಲಿ ನಿತ್ಯ ಸಾಕಷ್ಟು ಸಂಚಾರ ದಟ್ಟಣೆ ಇರುತ್ತದೆ. ಹೀಗಾಗಿ ಐಟಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಲಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದ ಸಿಲ್ಕ್‌ ಬೋರ್ಡ್ ಹಾಗೂ ಕೆಆರ್ ಪುರಂ ಭಾಗದ ಪ್ಯಾಕೇಜ್ 1ರ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಫೇಸ್‌ 2ಎ ಅಡಿ ಬರುವ ಸಿಲ್ಕ್‌ಬೋರ್ಡ್‌ನಿಂದ ಕೆಆರ್‌ ಪುರಂವರೆಗಿನ 18.3 ಕಿ.ಮೀ ಕಾಮಗಾರಿಗಳನ್ನು ಎರಡು ಪ್ಯಾಕೇಜ್‌ಗಳಾಗಿ ವಿಭಾಗಿಸಲಾಗಿದ್ದು, ಮೊದಲ ಪ್ಯಾಕೇಜ್‌ನ್ನುಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಎರಡನೇ ಪ್ಯಾಕೇಜ್‌ನ್ನು ಶಂಕರ ನಾರಾಯಣ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಪಡೆದುಕೊಂಡಿದೆ.

ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ ತಗುಲಲಿದೆ. ಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಾಮಗಾರಿ ನಡೆಸಲಿದೆ. ಕೆಆರ್ ಪುರಂ, ಮಹದೇವಪುರ, ಡಿಆರ್‌ಡಿಒ, ಕ್ರೀಡಾ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ-ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್ ನಿಲ್ದಾಣಗಳು ಇರಲಿವೆ.

ಪೈಲ್ ನಿರ್ಮಾಣದ ಸಂದರ್ಭದಲ್ಲಿ ನಾವು 30 ಮೀಟರ್ ರಂಧ್ರ ಕೊರೆದು ಸ್ಟೀಲ್ ಮತ್ತು ಕಾಂಕ್ರೀಟ್‌ಗಳಿಂದ ಅದನ್ನು ತುಂಬುತ್ತೇವೆ, ಅದರ ಮೇಲೆ ಸಾಮಾನ್ಯವಾಗಿ ಕೂರುವ ಭಾರಕ್ಕಿಂತ ಎರಡು ಪಟ್ಟು ಹೆಚ್ಚು ಭಾರ ಹಾಕುತ್ತೇವೆ.

ಅಂದರೆ 700 ಮೆಟ್ರಿಕ್ ಟನ್ ಭಾರ ಹೊರುವ ಪೈಲ್ ಮೇಲೆ 1500ಮೆಟ್ರಿಕ್ ಟನ್ ಭಾರ ಹಾಕುತ್ತೇವೆ. ಮೇಲಿನ ಭಾರದ ಜತೆಗೆ ಬದಿಯಿಂದಲೂ ಒತ್ತಡ ಹೇರುವ ಪ್ರಕ್ರಿಯೆ ನಡೆಯುತ್ತದೆ ಎಂದು ಎಂಜಿನಿಯರ್ ರಾಘವೇಂದ್ರ ಹೇಳಿದ್ದಾರೆ.

ಮೊದಲ ಪ್ಯಾಕೇಜ್‌ನಲ್ಲಿ ಸಿಲ್ಕ್‌ಬೋರ್ಡ್‌ನಿಂದ 9.85 ಕಿ,ಮೀ ಎಲಿವೇಟೆಡ್ ಕಾಮಗಾರಿ ನಡೆಯಲಿದ್ದು, ಸೆಂಟ್ರಲ್ ಸಿಲ್ಕ್‌ ಬೋರ್ಡ್ ನಿಲ್ದಾಣ, ಎಚ್‌ಎಸ್‌ಆರ್‌ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಸಿಲ್ಕ್‌ಬೋರ್ಡ್ 2.84 ಕಿ.ಮೀ ಫ್ಲೈಓವರ್ ನಿರ್ಮಾಣವಾಗಲಿದೆ.

Recommended Video

ವಿರಾಟ್ ಕೊಹ್ಲಿ ಬ್ಲಾಕ್ ವಾಟರ್ ಯಾಕೆ ಕುಡಿತಾರೆ? ಇದರಲ್ಲೇನಿದೆ ಗೊತ್ತಾ? | Oneindia Kannada

ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಭೂಮಿ ಪೂಜೆ ನಡೆದಿದ್ದು, ಪಿಲ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಮೊದಲ ಪ್ಯಾಕೇಜ್‌ನ ಕಾಮಗಾರಿ ಕೂಡ ಪ್ರಾರಂಭವಾದಂತಾಗಿದೆ.

English summary
The Karnataka government has asked IT companies based on the Outer Ring Road (ORR) from Silk Board to KR Puram to consider extending the work-from-home option for most of its employees until December 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X