ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೋವಿಡ್ ನಿಯಂತ್ರಣ; ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಗಳ ನೇಮಕ

|
Google Oneindia Kannada News

ಬೆಂಗಳೂರು, ಜುಲೈ 09 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕ ಸರ್ಕಾರ ರಾಜಧಾನಿಯಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ ಪ್ರಸ್ತುತ 12,509.

Recommended Video

WHO ಹಾಡಿ ಹೊಗಳಿದ ಚೀನಾ | Oneindia Kannada

ಬೆಂಗಳೂರು ನಗರದಲ್ಲಿ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆಗೆ ಮತ್ತು ತಕ್ಷಣದ ತೀರ್ಮಾನಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವಲಯ ಸಂಯೋಜಕರನ್ನು ಸರ್ಕಾರ ನೇಮಕ ಮಾಡಿದೆ.

ಕೋವಿಡ್ ಭೀತಿ; ಬೆಂಗಳೂರಲ್ಲಿ ಶೇ 78ರಷ್ಟು ಹಾಸಿಗೆ ಲಭ್ಯವಿದೆ ಕೋವಿಡ್ ಭೀತಿ; ಬೆಂಗಳೂರಲ್ಲಿ ಶೇ 78ರಷ್ಟು ಹಾಸಿಗೆ ಲಭ್ಯವಿದೆ

ನಗರದ 8 ವಲಯಗಳಿಗೆ ಎಂಟು ಹಿರಿಯ ಐಎಎಸ್ ಅಧಿಕಾರಿಗಳನ್ನು ವಲಯ ಸಂಯೋಜಕರಾಗಿ ತಕ್ಷಣದಿಂದಲೇ ನೇಮಕ ಮಾಡಲಾಗಿದೆ. ಬಿಬಿಎಂಪಿ ಆಯುಕ್ತರು ಮತ್ತು ವಲಯ ಸಂಯೋಜಕರು ಒಟ್ಟಾರೆ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ.

ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ

ಬಿಬಿಎಂಪಿ ಜಂಟಿ ಆಯುಕ್ತರು, ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ, ರಾಜ್ಯ ಸರ್ಕಾರ ಮತ್ತು ಸರ್ಕಾರದ ನಿಗಮ/ಮಂಡಳಿ ಅಧಿಕಾರಿಗಳು ವಲಯ ಸಂಯೋಜಕರಿಗೆ ಅಗತ್ಯ ನೆರವು ನೀಡಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ! ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!

ಯಾವ ವಿಭಾಗಕ್ಕೆ ಯಾರು?

ಯಾವ ವಿಭಾಗಕ್ಕೆ ಯಾರು?

* ಬೆಂಗಳೂರು ಪೂರ್ವ : ತುಷಾರ್ ಗಿರಿನಾಥ್
* ಬೆಂಗಳೂರು ಪಶ್ಚಿಮ : ರಾಜೇಂದ್ರ ಕುಮಾರ್ ಕಠಾರಿಯಾ
* ಬೊಮ್ಮನಹಳ್ಳಿ : ಕ್ಯಾ. ಪಿ. ಮಣಿವಣ್ಣನ್
* ಯಲಹಂಕ : ನವೀನ್ ರಾಜ್ ಸಿಂಗ್

ಐಎಎಸ್ ಅಧಿಕಾರಿಗಳ ವಿವರ

ಐಎಎಸ್ ಅಧಿಕಾರಿಗಳ ವಿವರ

* ಬೆಂಗಳೂರು ದಕ್ಷಿಣ : ಮುನಿಷ್ ಮೌದ್ಗಿಲ್
* ಮಹದೇವಪುರ : ಡಾ. ಎನ್. ಮಂಜುಳಾ
* ದಾಸರಹಳ್ಳಿ : ಡಾ. ಪಿ. ಸಿ. ಜಾಫರ್
* ರಾಜರಾಜೇಶ್ವರಿ ನಗರ : ಡಾ. ಆರ್. ವಿಶಾಲ್

ತಕ್ಷಣ ತೀರ್ಮಾನ ಕೈಗೊಳ್ಳಬಹುದು

ತಕ್ಷಣ ತೀರ್ಮಾನ ಕೈಗೊಳ್ಳಬಹುದು

ಕರ್ನಾಟಕ ಸರ್ಕಾರ ನೇಮಕ ಮಾಡಿರುವ ವಲಯ ಸಂಯೋಜಕರು ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ - 19 ತಡೆಗೆ ಅಗತ್ಯವಿರುವ ಕ್ರಮಗಳ ಕುರಿತು ತಕ್ಷಣ ತೀರ್ಮಾನಗಳನ್ನು ಕೈಗೊಳ್ಳಬಹುದಾಗಿದೆ. ಜುಲೈ 9ರ ಗುರುವಾರದಿಂದಲೇ ಜಾರಿಗೆ ಬರುವಂತೆ ಇವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಸೋಂಕು ಹೆಚ್ಚಳ

ಬೆಂಗಳೂರು ನಗರದಲ್ಲಿ ಸೋಂಕು ಹೆಚ್ಚಳ

ಜೂನ್ 9ರ ಸುಮಾರಿಗೆ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿರಲಿಲ್ಲ. ಆದರೆ, ಜುಲೈ 9ರ ವೇಳೆಗೆ ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 12 ಸಾವಿರಕ್ಕೆ ತಲುಪಿದೆ. ಆದ್ದರಿಂದ, ಸರ್ಕಾರ ಬೆಂಗಳೂರು ನಗರದಲ್ಲಿ ಸೋಂಕು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

English summary
To see activities of BBMP to control spread of Coronavirus in Bengaluru city Karnataka government appointed 8 senior IAS officers as zonal coordinators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X