India
  • search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರ ಕಾರ್ಮಿಕರಿಗೆ ಸಿಹಿಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ

|
Google Oneindia Kannada News

ಬೆಂಗಳೂರು, ಜುಲೈ 01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರು ಪೌರ ಕಾರ್ಮಿಕರಿಗೆ ಸರ್ಕಾರ ಅಲ್ಪ ಪ್ರಮಾಣದ ಗುಡ್ ನ್ಯೂಸ್ ಅನ್ನು ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆಯನ್ನು ನೀಡಲು ತೀರ್ಮಾನಿಸಿದೆ. ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ಎಂದು ಎರಡು ಸಾವಿರ ಪ್ರತಿ ತಿಂಗಳು ಕೊಡಲಾಗುವುದು. ಮೊದಲು ನಗರದಲ್ಲಿ ಬಿಬಿಎಂಪಿಯೇ ಕೊಡಬೇಕು ಅಂತ ಇತ್ತು. ಆದರೆ ಸಂಪುಟ ಸಭೆಯಲ್ಲಿ ಸರ್ಕಾರವೇ ಭರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಎಲ್ಲಾ ಸ್ಥಳೀಯ ಪೌರಕಾರ್ಮಿಕರಿಗೆ ಅನ್ವಯ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಯನ್ನು ಸಂಕಷ್ಟ ಭತ್ಯೆಯನ್ನಾಗಿ ನೀಡಲು ಸಂಪುಟ ಅಸ್ತು ಎನ್ನುವ ಮೂಲಕ ಪೌರಕಾರ್ಮಿಕರ ಆಕ್ರೋಶವನ್ನು ತಣಿಸುವ ಕೆಲಸವನ್ನು ಮಾಡಿದ್ದಾರೆ.

ಇನ್ನು ಬಿಬಿಎಂಪಿ ಪೌರ ನೌಕರರ ಮಾಡುತ್ತಿರುವ ಹೋರಾಟದ ಫಲವಾಗಿ ಸಂಕಷ್ಟ ಭತ್ಯೆಯನ್ನು ನೀಡಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ, "ಇಲ್ಲ ಎಂದು ಸಚಿವ ಸಂಪುಟ ಪೌರ ಕಾರ್ಮಿಕ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಸಂಕಷ್ಟ ಭತ್ಯೆ ನೀಡಲಾಗುವುದು" ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಪೌರ ಕಾರ್ಮಿಕರ ಬೇಡಿಕೆಗೆ ಸ್ಪಂದಿಸದ ಸರ್ಕಾರ

ಪೌರ ಕಾರ್ಮಿಕರ ಬೇಡಿಕೆಗೆ ಸ್ಪಂದಿಸದ ಸರ್ಕಾರ

- ಬೆಂಗಳೂರು ಹಾಗೂ ರಾಜ್ಯಾದ್ಯಂತ ನೇರವೇತನ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು

- ಬೆಂಗಳೂರು ನಗರ ಮೇಲ್ಚಚಾರನ್ನು ( ಮೇಸ್ತ್ರಿ) ಖಾಯಂ ಮಾಡಬೇಕು

- ಬೆಂಗಳೂರು ನಗರ ಆಟೋಚಾಲಕರು, ಲಾರಿ ಚಾಲಕರು, ಲೋಡರ್ಸ್ ಸಹಾಯಕರನ್ನು ಖಾಯಂ ಮಾಡಬೇಕು

- ದಿವಂತಗ ಐ.ಡಿ.ಪಿ. ಸಾಲಪ್ಪರವರ ವರದಿಯನ್ನು ಜಾರಿಗೆ ತರಬೇಕು

ಬೆಂಗಳೂರು ಹಾಗೂ ರಾಜ್ಯಾದ್ಯಂತ ನೇರವೇತನ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು. ಬೆಂಗಳೂರು ನಗರ ಮೇಲ್ಚಚಾರನ್ನು ( ಮೇಸ್ತ್ರಿ) ಖಾಯಂ ಮಾಡಬೇಕು. ಬೆಂಗಳೂರು ನಗರ ಆಟೋಚಾಲಕರು, ಲಾರಿ ಚಾಲಕರು, ಲೋಡರ್ಸ್ ಸಹಾಯಕರನ್ನು ಖಾಯಂ ಮಾಡಬೇಕು. ದಿವಂತಗ ಐ.ಡಿ.ಪಿ. ಸಾಲಪ್ಪರವರ ವರದಿಯನ್ನು ಜಾರಿಗೆ ತರಬೇಕು. ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡ್ಬೇಕು ಎಂಬ ಬೇಡಿಕೆಯನ್ನು ಬಿಬಿಎಂಪಿಯ ಪೌರ ಕಾರ್ಮಿಕರು ಮಾಡಿದ್ದರು. ಆದರೆ ಬಿಬಿಎಂಪಿಯ ಪೌರಕಾರ್ಮಿಕರ ಬೇಡಿಕೆಗೆ ಸರ್ಕಾರ ಈಡೇರಿಸಿಲ್ಲ. ಸಂಕಷ್ಟ ಭತ್ಯೆ ಎಂದು ತಿಂಗಳಿಗೆ ಎರಡು ಸಾವಿರ ನೀಡಲು ಮಾತ್ರ ಸಂಪುಟ ತೀರ್ಮಾನಿಸಿದೆ.

ಗುತ್ತಿಗೆ ಪದ್ದತಿ ಬಿಟ್ಟು ನೇರ ವೇತನ ಪದ್ದತಿ ಜಾರಿ

ಗುತ್ತಿಗೆ ಪದ್ದತಿ ಬಿಟ್ಟು ನೇರ ವೇತನ ಪದ್ದತಿ ಜಾರಿ

2017ರಲ್ಲಿ ಮೂರು ದಿನ ಪೌರ ಕಾರ್ಮಿಕರು ಬೃಹತ್ ಪ್ರತಿಭಟನೆ. ಅಂದಿನ ಸರ್ಕಾರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ನೇರ ವೇತನ ಪದ್ಧತಿ ಜಾರಿ ಮಾಡಿದ್ದರು. ಆದರೆ ನೇರ ವೇತನ ಪದ್ಧತಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೋರಾಟ ಮಾಡಲಾಗುತ್ತಿದೆ. ನೇರವೇತನ ಪೌರಕಾರ್ಮಿಕರಿಗೆ ಒಟ್ಟು 17,995 ರೂ. ಸಂಬಳ, ಇದರಲ್ಲಿ ಇಎಸ್ಐ, ಪಿಎಫ್, ಕಟ್ ಮಾಡಿ ವೇತನ ಸಿಗುವುದು 11000 ರೂ‌‌ ದಿಂದ 14000 ಸಾವಿರ ಮಾತ್ರ ಎಂಬುದು ಪೌರ ಕಾರ್ಮಿಕರ ಅಳಲಾಗಿದೆ.

ಆರೋಗ್ಯದ ಸಮಸ್ಯೆ ಹೆಚ್ಚಳದ ಸಮಸ್ಯೆ

ಆರೋಗ್ಯದ ಸಮಸ್ಯೆ ಹೆಚ್ಚಳದ ಸಮಸ್ಯೆ

ಬಿಬಿಂಪಿ ನೀಡುತ್ತಿರುವ ಸಂಬಳದಿಂದ ಕುಟುಂಬ ನಡೆಸಲು ಕಷ್ಟವಾಗುತ್ತಿದೆ. ಮನೆ ಬಾಡಿಗೆ, ಮಕ್ಕಳಿಗೆ ವಿದ್ಯಾಭ್ಯಾಸ, ಕುಟುಂಬವನ್ನು ಪೋಷಣೆ, ದಿನ ನಿತ್ಯದ ಭತ್ಯಗಳು ದರ ಹೆಚ್ಚಾಗಿವೆ. ಬೆಂಗಳೂರಿನಲ್ಲಿ ನಿತ್ಯ ಪೌರ ಕಾರ್ಮಿಕರು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಸ್ವಚ್ಛ ಮಾಡಲಿದ್ದಾರೆ. ಆದರೆ ನೇರವೇತನ ಪೌರ ಕಾರ್ಮಿಕರಿಗೆ ನಾನಾ ರೀತಿಯ ಕಾಯಿಲೆ ಬರುತ್ತಿವೆ. ಹೃದಯಘಾತ, ಡಯಾಬಿಟಿಸ್, ಕಿಡ್ನಿ ವೈಫಲ್ಯ, ಉಸಿರಾಟದ ತೊಂದರೆ ಆಗುತ್ತಿದೆ. ಇದರ ಜೊತೆಗೆ ನೇರವೇತನ ಪೌರಾ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಹೆಲ್ತ್ ಕಾಡ್೯, ಹೆಚ್ಚುವರಿ ವೇತನ ಹಾಗೂ ಬೋನಸ್ ನೀಡುತ್ತಿಲ್ಲ ಎಂಬುದು ಪೌರಕಾರ್ಮಿಕರ ಸಮಸ್ಯೆಗಳಾಗಿತ್ತು.

ಸಂಕಷ್ಟ ಭತ್ಯೆ ಹೆಚ್ಚಳ ಮಾಡಿ ಸುಮ್ಮನಾದ ಸರ್ಕಾರ

ಸಂಕಷ್ಟ ಭತ್ಯೆ ಹೆಚ್ಚಳ ಮಾಡಿ ಸುಮ್ಮನಾದ ಸರ್ಕಾರ

ಪೌರ ಕಾರ್ಮಿಕರು ನೇರ ವೇತನ ಪದ್ದತಿಯಿಂದ ನೇಮಕಾತಿಯನ್ನು ಖಾಯಂ ಮಾಡುವಂತೆ ಆಗ್ರಹಿಸುತ್ತಿದ್ದರು. ಆದರೆ ಪೌರ ಕಾರ್ಮಿಕರ ಆಗ್ರಹಕ್ಕೆ ಮಣಿಯದ ಸರ್ಕಾರ ಸಂಕಷ್ಟ ಭತ್ಯೆ ಎರಡು ಸಾವಿರ ಹೆಚ್ಚಳ ಮಾಡಿದೆ. ಪ್ರತಿ ತಿಂಗಳು ಸಂಕಷ್ಟ ಭತ್ಯೆ ನೀಡಲಾಗುವುದು ಎಂದು ಮಾತ್ರ ಸಂಪುಟ ಸಭೆಯಲ್ಲಿ ತೀರ್ಮಾನವನ್ನು ಮಾಡಲಾಗಿದೆ.

English summary
Karnataka Govt announced Rs 2000 Hardship Allowance to Pourakarmikas in the state after the cabinet meeting says Minister JC Madhuswamy. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X