ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಜನತಾ ಕರ್ಫ್ಯೂಗೆ ಬೆಂಬಲಿಸಿ ಪ್ಲೇಟ್ ಬಾರಿಸಿದ ರಾಜ್ಯಪಾಲರು!

|
Google Oneindia Kannada News

ನವದೆಹಲಿ, ಮಾರ್ಚ್.23: ಭಾನುವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರು ಪ್ಲೇಟ್ ಹಿಡಿದು ಬಾರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಾಜ್ಯಪಾಲರು ಹೀಗೆ ಪ್ಲೇಟ್ ಬಾರಿಸುವುದರ ಹಿಂದೆಯೂ ಒಂದು ಉದ್ದೇಶವಿದೆ.

ಭಾರತದಲ್ಲಿ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಸಂಜೆ ಸರಿಯಾಗಿ 5 ಗಂಟೆ 5 ನಿಮಿಷಕ್ಕೆ ನಿಮ್ಮ ಮನೆಯ ಟೆರೆಸ್ ಹಾಗೂ ಕಿಟಕಿಗಳ ಪಕ್ಕದಲ್ಲಿ ನಿಂತು ಗಂಟೆ, ಜಾಗಟೆಗಳನ್ನು ಬಾರಿಸಿ ಎಂದು ಕರೆ ನೀಡಿದ್ದರು.

 Karnataka Governor Vajubhai Vala How Support Janata Curfew

ಜನತಾ ಕರ್ಫ್ಯೂ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದ ಎಂದ ಮೋದಿ

ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಪೊಲೀಸರಿಗೆ ಆ ಮೂಲಕ ಅಭಿನಂದನೆ ಸಲ್ಲಿಸೋಣ ಎಂದು ಪ್ರಧಾನಮಂತ್ರಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಕೂಡ ರಾಜಭವನದಲ್ಲಿ ನಿಂತು ಪ್ಲೇಟ್ ಬಾರಿಸಿದ್ದಾರೆ.

ರಾಜ್ಯಪಾಲರಿಗೆ ರಾಜಭವನ ಸಿಬ್ಬಂದಿ ಸಾಥ್:

ಬೆಂಗಳೂರಿನಲ್ಲಿ ಇರುವ ರಾಜಭವನದಲ್ಲಿ ಭಾನುವಾರ ಸಂಜೆ 5 ಗಂಟೆ 5 ನಿಮಿಷಕ್ಕೆ ರಾಜ್ಯಪಾಲ ವಜೂಭಾಯ್ ವಾಲಾ ಕೈಯಲ್ಲಿ ಪ್ಲೇಟ್ ಹಿಡಿದು ಬಾರಿಸಿದರು. ಈ ವೇಳೆ ರಾಜಭವನದ ಸಿಬ್ಬಂದಿ ಹಾಗೂ ಅಧಿಕಾರಿಗಳು ರಾಜ್ಯಪಾಲರ ಜೊತೆಗೂಡಿ ಪ್ಲೇಟ್ ಬಾರಿಸಿದ್ದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ನಡುವೆ ರಾಜ್ಯದಲ್ಲಿ 26 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಮಾರ್ಚ್.31ರವರೆಗೂ ರಾಜ್ಯದ ಏಳು ಜಿಲ್ಲೆಗಳನ್ನು ಲಾಕ್ ಔಟ್ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

English summary
Karnataka Governor Vajubhai Vala How Support Janata Curfew. A Video Viral In Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X