ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಜಕ್ಕೂರು ಏರೋಡ್ರಮ್ ಖಾಸಗೀಕರಣ ಹುನ್ನರಾ: ಲೋಕಾಯುಕ್ತರಕ್ಕೆ ದೂರು ದಾಖಲು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಜಕ್ಕೂರು ಪ್ಲೈಯಿಂಗ್ ಶಾಲೆಗಾಗಿ ಮೈಸೂರು ಮಹಾರಾಜರು ಕೊಟ್ಟ ಜಾಗವನ್ನು ಖಾಸಗಿ ಕಂಪನಿಗೆ ನೀಡಲು ಕ್ರೀಡಾ ಇಲಾಖೆ ಸಜ್ಜಾಗಿದೆಯಾ ಎಂಬ ಅನುಮಾನ ಮೂಡಿದೆ ಎಂದು ರಾಘವೇಂದ್ರ ಎಂಬುವವರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದಾರೆ.

211 ಎಕರೆ ಜಾಗದಲ್ಲಿ 75 ಎಕರೆ ಜಾಗವನ್ನು ಖಾಸಗಿಯವರಿಗೆ ನೀಡುವ ಹುನ್ನಾರದ ಬಗ್ಗೆ ಆರೋಪ ಕೇಳಿ ಬಂದಿದೆ. 1500 ಕೋಟಿ ಮೌಲ್ಯದ ಜಾಗ ಇದಾಗಿದ್ದು, ಈ ವಿಚಾರದಲ್ಲಿ ತನಿಖೆ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯಿಂದ ರಾಜ್ಯಪಾಲ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ‌.

Karnataka Government try to give land of jakkur aerodrome to private sector - complaint to Lokayukta

ಜಕ್ಕೂರು ಏರೋ ಡ್ರಮ್ ಜಾಗವನ್ನು PPP (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಸರ್ಕಾರ ಖಾಸಗಿಗೆ ಮಾರುವ ಹುನ್ನಾರ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಜಾಗದಲ್ಲಿ 25 ಎಕರೆ ಏರೋ ಕ್ಲಬ್, 50 ಎಕರೆಯನ್ನು ಕಮರ್ಷಿಯಲ್ ಕಾಂಪ್ಲೆಕ್ಸ್ ಏರಿಯಾ ಎಂದು ಅಭಿವೃದ್ಧಿ ಪಡಿಸಲು ಕ್ರೀಡಾ ಮತ್ತು ಯುವಜನ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

Karnataka Government try to give land of jakkur aerodrome to private sector - complaint to Lokayukta

"ಮಹಾರಾಜರು ಕೊಟ್ಟ ಜಾಗ ಒತ್ತುವರಿಯಾಗಿ 350 ಮೀಟರ್‍‌ನಲ್ಲಿ ರನ್ ವೇಯಾಗಿದೆ. ಇದರಿಂದ ಅಪಘಾತ ವಾಗುತ್ತಿದೆ. ಭೂಸ್ವಾಧೀನಕ್ಕೆ ಸರ್ಕಾರ ಸಮಿತಿ ರಚನೆ ಮಾಡಿದ್ದು ಅದು ಅನರ್ಹವಾಗಿತ್ತು. 170 ಮೀಟರ್ ರನ್‌ ವೇ ವಿಸ್ತರಣೆ ಮಾಡಲು ಸಾಧ್ಯವಾಗತ್ತಿಲ್ಲ. ವಿದ್ಯಾರ್ಥಿಗಳು ತರಬೇತಿಯ ವೇಳೆ ಅಪಘಾತವಾಗುತ್ತಿದೆ. ಯುಬಿ ಸಿಟಿ, ಗಾಲ್ಫ್ ಕ್ಲಬ್ ರೀತಿಯಂತೆ ಇದನ್ನು ಹೊಡೆಯುವ ಹುನ್ನಾರ ನಡೆಯುತ್ತಿದೆ. ಪ್ರಾರಂಭಿಕ ಹಂತದಲ್ಲೇ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಲೋಕಾಯುಕ್ತಕ್ಕೆ ದಾಖಲೆ ಸಹಿತವಾಗಿ ದೂರನ್ನು ನೀಡಿದ್ದೇವೆ" ಎಂದು ರಾಘವೇಂದ್ರ ಎಂಬ ಸಾಮಾಜಿಕ ಹೋರಾಟಗಾರರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದಾರೆ.

English summary
A person Named Raghavendra has filed a complaint with the Lokayukta saying that the sports department is ready to give the land given by the Maharaja of Mysore to a private company for Jjakkur aerodrome. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X