ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ವಶಕ್ಕೆ ಐತಿಹಾಸಿಕ, ಶ್ರೀಮಂತ ಬೆಂಗಳೂರು ಕ್ಲಬ್

By Mahesh
|
Google Oneindia Kannada News

ಬೆಂಗಳೂರು, ಜುಲೈ 22: ಐತಿಹಾಸಿಕ ಬೆಂಗಳೂರು ಕ್ಲಬ್ ಗೆ ಸೇರಿದ ಅತ್ಯಂತ ಬೆಲೆಬಾಳುವ ಜಮೀನು ಈಗ ಕರ್ನಾಟಕ ಸರ್ಕಾರದ ವಶವಾಗಿದೆ. ಉತ್ತರ ಉಪ ವಿಭಾಗಾಧಿಕಾರಿ ಮಹೇಶ್‌ಬಾಬು ಅವರ ಆದೇಶದಂತೆ ಈ ವಾರದಲ್ಲೇ ಬೆಂಗಳೂರು ಕ್ಲಬ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ.

ವಿಧಾನಸಭೆಯ ಸದನ ಸಮಿತಿ ಸೂಚನೆಯಂತೆ ರೆಸಿಡೆನ್ಸಿ ರಸ್ತೆ ಬಳಿ ಇರುವ ಬೆಂಗಳೂರು ಕ್ಲಬಿಗೆ ಸೇರಿರುವ ವಿವಾದಿತ 13 ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರ ತನ್ನದಾಗಿಸಿಕೊಳ್ಳಲಿದೆ. ಸುಮಾರು 6 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬೆಂಗಳೂರಿನ ಕ್ಲಬಿನ ಈ ವಿವಾದಿತ ಜಮೀನಿನ ಮೌಲ್ಯ ಸುಮಾರು 3 ಸಾವಿರ ಕೋಟಿ ರು ಗೂ ಅಧಿಕ ಎಂದು ಅಂದಾಜಿಸಲಾಗಿದೆ.

1868ರಲ್ಲಿ ಆರಂಭವಾದ ಬೆಂಗಳೂರು ಕ್ಲಬ್ ನಗರದ ಅತಿ ಹಳೆಯ ಕ್ಲಬ್ ಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ಪ್ರಧಾನಿಯಾಗಿದ್ದ ವಿನ್ಸ್‌ಟನ್ ಚರ್ಚಿಲ್ ಹಾಗೂ ಮೈಸೂರು ಮಹಾರಾಜರು ಕ್ಲಬ್‌ನ ಪ್ರತಿಷ್ಠಿತ ಸದಸ್ಯರಾಗಿದ್ದರು. ಚರ್ಚಿಲ್ ಅವರು ಈ ಕ್ಲಬಿನ ಬಿಲ್ ಪಾವತಿಸಿಲ್ಲ ಎಂಬ ಸುದ್ದಿಯೂ ಈ ಹಿಂದೆ ಬಂದಿತ್ತು.[ಬೆಂಗಳೂರು ಕ್ಲಬ್ಬಿಗೆ ಚರ್ಚಿಲ್ ಬಾಕಿ ಎಷ್ಟು ಗೊತ್ತೆ?]

Bangalore Club

ಮೈಸೂರು ಒಡೆಯರ ವಶದಲ್ಲಿದ್ದ ಕ್ಲಬ್ ಕೊನೆಗೆ ಪ್ರಜಾಪ್ರಭುತ್ವ ಬಂದ ಮೇಲೆ ಸರ್ಕಾರದ ವಶವಾಗಬೇಕಿತ್ತು. ಆದರೆ, ಕೆಲ ಖಾಸಗಿ ಸಂಸ್ಥೆಗಳು, ಉದ್ಯಮಿಗಳ ಕಿರಿಕಿರಿಯಿಂದ ಸರ್ಕಾರಕ್ಕೆ ಈ ಕ್ಲಬ್ ಕೈವಶವಾಗಿರಲಿಲ್ಲ.

ರಾಜ್ಯದಲ್ಲಿರುವ ಕ್ಲಬ್‌ಗಳ ವಿವರ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ವರ್ಷದ ಹಿಂದೆ ಸದನ ಸಮಿತಿ ರಚಿಸಲಾಗಿತ್ತು. ಕ್ಲಬ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು. ಸಮಿತಿ ನೀಡಿದ ಆದೇಶದಂತೆ ಈಗ ಕರ್ನಾಟಕ ಸರ್ಕಾರದ ವಶಕ್ಕೆ ಬೆಂಗಳೂರು ಕ್ಲಬ್ ಸೇರಲಿದೆ.

ಕ್ಲಬ್ ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ವಿವಾದಿತ ಜಮೀನು ಸರ್ಕಾರದ ವಶವಾಗಲಿದೆ. ಅದರೆ, ಕ್ಲಬ್ ಅಸ್ತಿತ್ವಕ್ಕೆ ಇದರಿಂದ ಧಕ್ಕೆ ಏನು ಆಗುವುದಿಲ್ಲ ಎಂದು ಬೆಂಗಳೂರು ಕ್ಲಬ್ ನ ಉಪಾಧ್ಯಕ್ಷ ಥಾಮಸ್ ಚಾಂಡಿ ಹೇಳಿದ್ದಾರೆ.

'ಕ್ಲಬ್‌ನ ಪದಾಧಿಕಾರಿಗಳು ಪಾಲಿಕೆಗೆ ವಾರ್ಷಿಕ 20 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಕ್ಲಬ್‌ನ ಸದಸ್ಯತ್ವ ನೀಡಲು ಒಂದು ಕೋಟಿ ರೂ. ಶುಲ್ಕ ಸಂಗ್ರಹಿಸಲಾಗುತ್ತಿದೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ಒಂದು ಲಕ್ಷ ರೂ. ಮೌಲ್ಯವಿದ್ದು, 13 ಎಕರೆಗೆ 5,662 ಕೋಟಿ ರೂ.ಗಿಂತ ಹೆಚ್ಚು ಬೆಲೆಬಾಳುವ ಆಸ್ತಿ ಇದಾಗಿದೆ ಎಂದು ಬಿಬಿಎಂಪಿ ಸದಸ್ಯರಾಗಿದ್ದ ಪದ್ಮನಾಭ ರೆಡ್ಡಿ ಅವರು ಈ ಹಿಂದೆ ಆಕ್ಷೇಪ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Karnataka government takes over the land on which the 147-year-old Bangalore Club stands. Mahesh Babu, assistant commissioner of Bengaluru North taluk has ordered officials to take ownership of one of the most expensive land of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X