ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

112 ಕೋಟಿ ರೂಪಾಯಿ ಬರ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

|
Google Oneindia Kannada News

Recommended Video

ಯಡಿಯೂರಪ್ಪ 112 ಕೋಟಿ ಕೊಟ್ಟಿದ್ದು ಯಾರಿಗೆ ಗೊತ್ತಾ..? | Oneindia Kannada

ಬೆಂಗಳೂರು, ಜನವರಿ.27: ಕರ್ನಾಟಕದ 14 ಜಿಲ್ಲೆಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಬರ ನಿರ್ವಹಣೆಗೆ ಬರೋಬ್ಬರಿ 112 ಕೋಟಿ ರುಪಾಯಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ರಾಜ್ಯದ 14 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಈ ತಾಲೂಕುಗಳಲ್ಲಿ ಬರ ನಿರ್ವಹಣೆಗೆ ಜಿಲ್ಲಾವಾರು ಅನುದಾನವನ್ನು ಸರ್ಕಾರವು ಘೋಷಣೆ ಮಾಡಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ರೈತರಿಗೆ ಆಘಾತ ನೀಡಿದ್ದ ಆದೇಶ ಹಿಂಪಡೆದ ಸರ್ಕಾರರೈತರಿಗೆ ಆಘಾತ ನೀಡಿದ್ದ ಆದೇಶ ಹಿಂಪಡೆದ ಸರ್ಕಾರ

ಬೇಸಿಗೆ ಕಾಲದಲ್ಲಿ ಬರದ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರವು ಸೂಚನೆ ನೀಡಿದೆ. ಇನ್ನು, ರಾಜ್ಯ ಸರ್ಕಾರವು ಬಿಡುಗಡೆಗೊಳಿಸಿರುವ ಬರ ನಿರ್ವಹಣೆಯ ಹಣವು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಜಮೆ ಆಗಲಿದೆ. ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಹಾಗಿದ್ದಲ್ಲಿ ಯಾವ ಯಾವ ಜಿಲ್ಲೆಗೆ ಸರ್ಕಾರದಿಂದ ಅದೆಷ್ಟು ಪರಿಹಾರ ಘೋಷಣೆ ಆಗಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.

Karnataka Government Released Drought Relief Fund For 14 District


ಬರಪೀಡಿತ ಜಿಲ್ಲೆ ಹಾಗೂ ಸರ್ಕಾರ ಘೋಷಿಸಿದ ಪರಿಹಾರ:
ಬರಪೀಡಿತ ಜಿಲ್ಲೆ ಪರಿಹಾರ ಧನ
ಬಳ್ಳಾರಿ 15 ಕೋಟಿ ರುಪಾಯಿ
ದಾವಣಗೆರೆ 14 ಕೋಟಿ ರುಪಾಯಿ
ಚಿತ್ರದುರ್ಗ 13 ಕೋಟಿ ರುಪಾಯಿ
ಬೆಂಗಳೂರು ಗ್ರಾಮಾಂತರ 10 ಕೋಟಿ ರುಪಾಯಿ
ಚಿಕ್ಕಬಳ್ಳಾಪುರ 10 ಕೋಟಿ ರುಪಾಯಿ
ಕೋಲಾರ 10 ಕೋಟಿ ರುಪಾಯಿ
ಬೀದರ್ 5 ಕೋಟಿ ರುಪಾಯಿ
ಚಾಮರಾಜನಗರ 5 ಕೋಟಿ ರುಪಾಯಿ
ಕೊಪ್ಪಳ 5 ಕೋಟಿ ರುಪಾಯಿ
ರಾಮನಗರ 5 ಕೋಟಿ ರುಪಾಯಿ
ವಿಜಯಪುರ 5 ಕೋಟಿ ರುಪಾಯಿ
ತುಮಕೂರು 5 ಕೋಟಿ ರುಪಾಯಿ
ರಾಯಚೂರು 5 ಕೋಟಿ ರುಪಾಯಿ
ಯಾದಗಿರಿ 5 ಕೋಟಿ ರುಪಾಯಿ

English summary
Karnataka Government Released 112 Crore Rupees Drought Relief Fund For 14 District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X