ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಮ್ಮಕ್ಕ ಸೇರಿ 30 ಜನರ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸು

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 24 : ದೇಶದ ಅತ್ಯಂತ ಪ್ರತಿಷ್ಟಿತ ಪದ್ಮ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30 ಸಾಧಕರ ಹೆಸರನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸದ್ಯದಲ್ಲೇ ಪ್ರಶಸ್ತಿ ವಿಜೇತರ ಪಟ್ಟಿ ದೊರೆಯಲಿದೆ.

ರಾಜ್ಯದಿಂದ ಪದ್ಮವಿಭೂಷಣ ಪ್ರಶಸ್ತಿಗೆ ಇಬ್ಬರು, ಪದ್ಮಭೂಷಣ ಪ್ರಶಸ್ತಿಗೆ ಒಂಭತ್ತು ಹಾಗೂ ಪದ್ಮಶ್ರೀ ಪ್ರಶಸ್ತಿಗೆ 19 ಜನರನ್ನು ಶಿಫಾರಸ್ಸು ಮಾಡಿದ್ದು, ಈಗಾಗಲೇ ಈ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.[2014ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತರು]

Saalumarada Thimmakka

ಪ್ರಶಸ್ತಿಗೆ ಶಿಫಾರಸ್ಸಾದವರು ಯಾರು ಯಾರು ?

* ಪದ್ಮ ವಿಭೂಷಣ ಪ್ರಶಸ್ತಿ:

ಡಾ. ಶಿವಮೂರ್ತಿ ಮುರುಘಾ ಶರಣರು ( ಧಾರ್ಮಿಕ ಸುಧಾರಣೆ ಮತ್ತು ಶೈಕ್ಷಣಿಕ ಸೇವೆ), ಡಾ. ಮುಮ್ತಾಜ್ ಅಹ್ಮದ್ ಖಾನ್( ಶಿಕ್ಷಣ)

* ಪದ್ಮಭೂಷಣ ಪ್ರಶಸ್ತಿ :

ಹೋ ಶ್ರೀನಿವಾಸಯ್ಯ ( ಸಾಮಾಜಿಕ ಸೇವೆ), ಡಾ. ಡಿ. ಜಿ. ಬೆನಕಪ್ಪ ( ವೈದ್ಯಕೀಯ), ಸಾಲು ಮರದ ತಿಮ್ಮಕ್ಕ( ಪರಿಸರ ಮತ್ತು ಸಾಮಾಜಿಕ ಸೇವೆ), ಎಂ. ವೆಂಕಟೇಶ್ ಕುಮಾರ್ (ಕಲೆ-ಹಿಂದೂಸ್ತಾನಿ ಸಂಗೀತ), ಏಣಗಿ ಬಾಳಪ್ಪ (ಕಲೆ-ನಾಟಕ), ಪ್ರೊ.ಜಿ. ವೆಂಕಟಸುಬ್ಬಯ್ಯ ( ನಿಘಂಟು ತಜ್ಞ), ಡಾ. ಕದ್ರಿ ಗೋಪಾಲನಾಥ್ ( ಕಲೆ-ಸ್ಯಾಕ್ಸೋಫೋನ್), ಡಾ. ಬಿ ರಮಣರಾವ್ (ವೈದ್ಯಕೀಯ), ಡಾ. ಸಿ.ಜಿ ಕೃಷ್ಣದಾಸ್ ನಾಯರ್ (ವಿಜ್ಞಾನ),

* ಪದ್ಮಶ್ರೀ ಪ್ರಶಸ್ತಿ :

ಡಾ.ಸಿ.ಎಂ.ಮುತ್ತಯ್ಯ (ಕ್ರೀಡೆ), ಡಾ. ಎಚ್ ಸುದರ್ಶನ್ ಬಲ್ಲಾಳ್ (ವೈದ್ಯಕೀಯ), ಡಾ. ಭಾರತಿ ವಿಷ್ಣುವರ್ಧನ್ (ಕಲೆ-ಸಿನಿಮಾ), ಎಚ್.ಸಿ ತಿಮ್ಮಯ್ಯ (ಇಂಜಿನಿಯರಿಂಗ್), ಡಾ. ಪೀಟರ್ ಎ. ಲೂಯಿಸ್ (ಚಿತ್ರಕಲೆ), ಮಾಸ್ಟರ್ ಹಿರಣ್ಣಯ್ಯ (ಕಲೆ -ನಾಟಕ), ಡಾ.ಸಿ.ವಿ ಹರಿ ನಾರಾಯಣ್ ( ವೈದ್ಯಕೀಯ-ಅಲೋಪತಿ), ಎ. ಆರ್, ಶಿವಕುಮಾರ್ ( ವಿಜ್ಞಾನ), ಡಾ. ಬಸವರಾಜ ನೆಲ್ಲಿಸರ ( ಕಲೆ-ಸಾಹಿತ್ಯ), ಯು. ವಿಜಯಶೆಣೈ (ಕಲೆ-ಸಂಸ್ಕೃತಿ), ಎಸ್.ಜಿ ವಾಸಯದೇವ್ (ಕಲೆ), ವಿಕಾಸ ಗೌಡ (ಕ್ರೀಡೆ ಅಥ್ಲೆಟಿಕ್ಸ್), ಡಾ.ಎಂ.ಎಂ ಜೋಶಿ( ವೈದ್ಯಕೀಯ), ಡಾ. ಪದ್ಮಿನಿ ಪ್ರಸಾದ್ (ವೈದ್ಯಕೀಯ), ಮಧು ಪಂಡಿತ ದಾಸ್(ಸಾಮಾಜಿಕ ಸೇವೆ), ತುಂಬೈ ಮೊಯಿದ್ದೀನ್( ಶಿಕ್ಷಣ ಮತ್ತು ಸಮಾಜ ಸೇವೆ), ಡಾ. ಚಂದ್ರಪ್ಪ ಎಸ್ ರಶ್ಮಿ (ವೈದ್ಯಕೀಯ), ಡಾ. ಬಿ.ಟಿ ರುದ್ರೇಶ್ (ವೈದ್ಯಕೀಯ), ಡಾ. ನಾಗತಿಹಳ್ಳಿ ಚಂದ್ರಶೇಖರ್ (ಕಲೆ, ಸಾಹಿತ್ಯ)

English summary
State government has recommended 30 names to the union ministry for very prestigious Padma Award on wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X