• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈತ್ರಿ ಸರಕಾರವೇನೂ ನಿದ್ದೆ ಮಾಡ್ತಿಲ್ಲ ಎಂದ ಎಚ್.ಡಿ.ಕುಮಾರಸ್ವಾಮಿ

|
   ಮೈತ್ರಿ ಸರ್ಕಾರ ಏನ್ ನಿದ್ದೆ ಮಾಡ್ತಿಲ್ಲ ಎಂಬ ಹೇಳಿಕೆ ಕೊಟ್ಟ ಎಚ್ ಡಿ ಕುಮಾರಸ್ವಾಮಿ | Oneindia Kannada

   ಬೆಂಗಳೂರು, ಮೇ 31: ರೈತರ ಸಾಲ ಮನ್ನಾ ಮಾಡಲಾಗುವುದು. ಅಂದುಕೊಂಡಿದ್ದಕ್ಕಿಂತ ಅದಕ್ಕೆ ಹೆಚ್ಚು ಸಮಯ ಆಗಬಹುದು. ಅದೂ ಏಕೆಂದರೆ, ಎಲ್ಲ ನಿರ್ಧಾರಗಳಲ್ಲೂ ಮೈತ್ರಿ ಸರಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

   "ಈ ಸರಕಾರ ನಿದ್ರಾ ಸ್ಥಿತಿಯಲ್ಲೇನೂ ಇಲ್ಲ. ನಾವು ಕರ್ನಾಟಕದ ಜನರ ಕೆಲಸದಲ್ಲಿ ಇದ್ದೇವೆ" ಎಂದು ಅವರು ಹೇಳಿದ್ದು, ರೈತ ಮುಖಂಡರ ಜತೆಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ ನಂತರ ಕುಮಾರಸ್ವಾಮಿ ಮಾಧ್ಯಗಳ ಜತೆ ಮಾತನಾಡಿದ್ದಾರೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

   ರೈತರ ಸಾಲಮನ್ನಾ ಕುರಿತ ಸಭೆಯಲ್ಲಿ ಏನೇನಾಯಿತು? ಇಲ್ಲಿದೆ ಪೂರ್ತಿ ವಿವರ

   ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಬಗ್ಗೆ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಈ ವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಖಾತೆ ಹಂಚಿಕೆ
   ಬಗ್ಗೆ ಅಂತಿಮ ತೀರ್ಮಾನ ಆಗದ ಹಿನ್ನೆಲೆಯಲ್ಲಿ ಸಂಪುಟ ರಚನೆ ಆಗಿಲ್ಲ. ಆದ್ದರಿಂದ ಸಾಲ ಮನ್ನಾ ವಿಚಾರ ಸ್ವಲ್ಪ ಮುಂದೆ ಹೋಗಬಹುದು. ಆದರೆ ಸಾಲ ಮನ್ನಾ ಆಗುವುದು ಖಾತ್ರಿ ಎಂದಿದ್ದಾರೆ.

   ನಾವು ಭಿಕ್ಷೆ ಬೇಡಲು ಬಂದಿಲ್ಲ

   ನಾವು ಭಿಕ್ಷೆ ಬೇಡಲು ಬಂದಿಲ್ಲ

   ಸಾಲ ಮನ್ನಾ ವಿಚಾರವಾಗಿ ಸರಕಾರದ ಉದ್ದೇಶದ ಬಗ್ಗೆ ರೈತರು ತಮ್ಮ ಅನುಮಾನ ವ್ಯಕ್ತಪಡಿಸಿದರು. ರೈತರ ಪ್ರತಿನಿಧಿಗಳು ಮಾತನಾಡಿ, ನಾವಿಲ್ಲಿ ಭಿಕ್ಷೆ ಬೇಡಲು ಬಂದಿಲ್ಲ. ಬರ ಪರಿಸ್ಥಿತಿ ಇದ್ದುದ್ದರಿಂದ ನೆರವನ್ನು ಕೇಳಿ ಬಂದಿದ್ದೇವೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸಾಲ ಮನ್ನಾಗೆ ಕಾಲಾವಕಾಶ ನೀಡಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

   ನನಗೆ ಉಸಿರಾಡಲು ಸ್ವಲ್ಪ ಸಮಯ ಕೊಡಿ

   ನನಗೆ ಉಸಿರಾಡಲು ಸ್ವಲ್ಪ ಸಮಯ ಕೊಡಿ

   "ನಮ್ಮ ಸರಕಾರ ನಾಳೆಯೇ ಬಿದ್ದುಹೋಗಲ್ಲ. ನಾವು ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತೇವೆ. ಸಹಾಯ ಮಾಡುವ ಕಾರಣಕ್ಕೆ ಇಲ್ಲಿದ್ದೇವೆ. ನನಗೆ ಸ್ವಲ್ಪ ಉಸಿರಾಡಲು ಅವಕಾಶ ನೀಡಬೇಕು. ನನಗೆ ಸ್ವಲ್ಪ ಸಮಯ ಕೊಡಿ" ಎಂದು ಎಚ್.ಡಿ.ಕುಮಾರಸ್ವಾಮಿ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

   ರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿ

   ಮೈತ್ರಿ ಸರಕಾರದಲ್ಲಿ ಇಬ್ಬರೂ ನಿರ್ಧಾರ ಕೈಗೊಳ್ಳಬೇಕು

   ಮೈತ್ರಿ ಸರಕಾರದಲ್ಲಿ ಇಬ್ಬರೂ ನಿರ್ಧಾರ ಕೈಗೊಳ್ಳಬೇಕು

   ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ನಾವು ಐವತ್ಮೂರು ಸಾವಿರ ಕೋಟಿ ರುಪಾಯಿ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಕುಮಾರಸ್ವಾಮಿ ಅವರ ಪಕ್ಷ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿದರೆ ಸಾಲ ಮನ್ನಾ ಮಾಡಲಾಗುವುದು ಎಂಬ ಭರವಸೆ ನೀಡಿದ್ದಿರಬಹುದು. ಇದೀಗ ಮೈತ್ರಿ ಸರಕಾರದಲ್ಲಿ ನಾವು ಎರಡೂ ಪಕ್ಷ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದಿದ್ದಾರೆ.

   ಶಾಶ್ವತ- ದೀರ್ಘಾವಧಿ ಪರಿಹಾರ ಬೇಕೆಂದ ರೈತರು

   ಶಾಶ್ವತ- ದೀರ್ಘಾವಧಿ ಪರಿಹಾರ ಬೇಕೆಂದ ರೈತರು

   ಇದೇ ವೇಳೆ ಕುಮಾರಸ್ವಾಮಿ ಅವರು ಕರೆದಿದ್ದ ಸಭೆಗೆ ಬಂದಿದ್ದ ರೈತರು ಮಾತನಾಡಿ, ರೈತರ ಸಾಲ ಮನ್ನಾ ಅನ್ನೋದು ತಾತ್ಕಾಲಿಕ ಪರಿಹಾರ ಅಷ್ಟೇ. ನಾವು ನಿರೀಕ್ಷೆ ಮಾಡುವುದು ಕನಿಷ್ಠ ಬೆಂಬಲ ಬೆಲೆ. ನಮಗೆ ದೀರ್ಘಾವಧಿ ಹಾಗೂ ಶಾಶ್ವತ ಪರಿಹಾರ ಬೇಕು ಎಂದು ಒತ್ತಾಯ ಮಾಡಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಬೆಂಗಳೂರು ಸುದ್ದಿಗಳುView All

   English summary
   "This government is not in the sleeping mode. We are at the work of Karnataka citizens," Mr Kumaraswamy said after the meeting of farmer leaders, top officials and the BJP to draw up the contours of the loan waiver.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more